»   » 'ಲಂಡನ್'ನಲ್ಲಿ ದಾಸನಿಗೆ ಪ್ರಶಸ್ತಿ: ಗೊಂದಲದ ಬಗ್ಗೆ ದರ್ಶನ್ ಮ್ಯಾನೇಜರ್ ಸ್ಪಷ್ಟನೆ.!

'ಲಂಡನ್'ನಲ್ಲಿ ದಾಸನಿಗೆ ಪ್ರಶಸ್ತಿ: ಗೊಂದಲದ ಬಗ್ಗೆ ದರ್ಶನ್ ಮ್ಯಾನೇಜರ್ ಸ್ಪಷ್ಟನೆ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಕ್ಟೋಬರ್ 19 ರಂದು ಲಂಡನ್ ಪಾರ್ಲಿಮೆಂಟ್ ನಲ್ಲಿ 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. ಆದ್ರೆ, ಈ ಪ್ರಶಸ್ತಿ ಸುತ್ತ ಹಲವು ರೀತಿಯ ಗೊಂದಲ ಸೃಷ್ಠಿಯಾಗಿತ್ತು.

ದರ್ಶನ್ ಅವರನ್ನ ಲಂಡನ್ ಗೆ ಕರೆಸಿ ಅವಮಾನ ಮಾಡಲಾಗಿದೆ. ಅವಾರ್ಡ್ ಹೆಸರಿನಲ್ಲಿ ದರ್ಶನ್ ಅವರ ಹೆಸರನ್ನ ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳು ಲಂಡನ್ ಕನ್ನಡಿಗರ ಮೇಲೆ ಬಂದವು.

ಇದೀಗ, ನಟ ದರ್ಶನ್ ಅವರ ಮ್ಯಾನೇಜರ್ ಮತ್ತು ಲಂಡನ್ ಕನ್ನಡಿಗರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿ, ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ....

ಲಂಡನ್ ಪಾರ್ಲಿಮೆಂಟ್ ನಲ್ಲಿ ದರ್ಶನ್ ಗೆ ಗೌರವ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ಪಾರ್ಲಿಮೆಂಟ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು ನಿಜ. ಆದ್ರೆ, ಇದು ಪಾರ್ಲಿಮೆಂಟ್ ಕಡೆಯಿಂದ ಅಲ್ಲ ಎಂದು ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

'ಗ್ಲೋಬಲ್ ಡೈವರ್ಸಿಟಿ ಅವಾರ್ಡ್' ರೀತಿನೇ ಇದು.!

ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಅವರಿಗೆ ನೀಡಲಾಗಿರುವ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ರೀತಿಯಲ್ಲೇ 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ' ಕೂಡ ಅದೇ ಗೌರವ ಹೊಂದಿದೆ. ಆದ್ರೆ, ಅವರಿಗೆ ಕೊಟ್ಟಿರುವುದು ಬೇರೆ, ದರ್ಶನ್ ಗೆ ಕೊಟ್ಟಿರುವುದು ಬೇರೆ.

ಇದು ಮೊದಲ ಪ್ರಶಸ್ತಿ

ಲಂಡನ್ ಕರ್ನಾಟಕ ವ್ಯವಹಾರ ಮಂಡಳಿಯ ನೇತೃತ್ವದಲ್ಲಿ ನೀಡಿರುವ ಪ್ರಶಸ್ತಿ ಇದು. ಈ ಪ್ರಶಸ್ತಿ ಇದೇ ಮೊದಲ ಬಾರಿಗೆ ನೀಡಲಾಗಿದೆ. ಇಲ್ಲಿಂದ ಪ್ರತಿ ವರ್ಷವೂ ದಕ್ಷಿಣ ಭಾರತದ ಕಲಾವಿದರಿಗೆ ಅದರಲ್ಲೂ ಕನ್ನಡ ಕಲಾವಿದರಿಗೆ ನೀಡಲಾಗುತ್ತೆ ಎಂದು ಲಂಡನ್ ಮೂಲದ ಕನ್ನಡಿಗ ಮಂಜುನಾಥ್ ತಿಳಿಸಿದರು.

ಇಲ್ಲಿ ಯಾವುದೇ ಅವಮಾನ ಆಗಿಲ್ಲ

ಈ ಪ್ರಶಸ್ತಿಯಲ್ಲಿ ಯಾವುದೇ ಅವಮಾನ ಆಗಿಲ್ಲ. ಮೊದಲೇ ಮಾಹಿತಿ ಸಂಗ್ರಹಿಸಿ, ಅದರ ಬಗ್ಗೆ ತಿಳಿದುಕೊಂಡೇ ನಾವು ಲಂಡನ್ ಗೆ ಹೋಗಿದ್ದು. ಇದು ಕನ್ನಡಿಗರಿಗೆ ಕೊಟ್ಟ ಗೌರವ. ಲಂಡನ್ ಸಂಸದ ವೀರೆಂದ್ರ ಶರ್ಮಾ ಅವರೇ ನೀಡಿದ್ದಾರೆ. ಎಲ್ಲ ನಿಮಯಗಳ ಅನುಸಾರವಾಗಿಯೇ ಸಮಾರಂಭ ಮಾಡಲಾಗಿತ್ತು ಎಂದು ದರ್ಶನ್ ಮ್ಯಾನೇಜರ್ ತಿಳಿಸಿದ್ದಾರೆ.

English summary
Darshan Thoogudeepa Manager Mallikarjun Gives Clarification About 'Global Integrity Award'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X