»   » ರಾಯಣ್ಣ 'ಡ್ಯುಯೆಟ್ ಸಾಂಗ್' ವಿವಾದಕ್ಕೆ ಪ್ರತಿಕ್ರಿಯೆಗಳು!

ರಾಯಣ್ಣ 'ಡ್ಯುಯೆಟ್ ಸಾಂಗ್' ವಿವಾದಕ್ಕೆ ಪ್ರತಿಕ್ರಿಯೆಗಳು!

Posted By:
Subscribe to Filmibeat Kannada

ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಡ್ಯುಯೆಟ್ ಸಾಂಗ್ 'ಜಯ ಕರ್ನಾಟಕ' ಸಂಘಟನೆ ಕೆಂಗಣ್ಣಿಗೆ ಗುರಿಯಾಗಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ರಾಯಣ್ಣ ಪಾತ್ರಧಾರಿ ದರ್ಶನ್ ಹಾಗೂ ರಾಯಣ್ಣನನ್ನು ಇಷ್ಟಪಡುವ ಮಲ್ಲಮ್ಮನ ಪಾತ್ರಧಾರಿ ನಿಖಿತಾ ಮೇಲೆ ಚಿತ್ರೀಕರಣಗೊಂಡಿರುವ ಡ್ಯುಯೆಟ್ ಸಾಂಗ್, ವಿವಾದಕ್ಕೆ ಕಾರಣವಾಗಿದೆ.

'ಇತಿಹಾಸದ ಪ್ರಕಾರ ಸಂಗೊಳ್ಳಿ ರಾಯಣ್ಣ ಸಾಯುವವರೆಗೆ ಮದುವೆಯಾಗಿರಲಿಲ್ಲ. ಅವರಿಗೆ ಯಾವುದೇ ಹುಡುಗಿ ಜೊತೆ ಸಂಬಂಧವಿರಲಿಲ್ಲ' ಎಂಬುದು ವಿವಾದ ಮಾಡುತ್ತಿರುವ ಸಂಘಟನೆಯ ವಾದ. ಅವರ ಪ್ರಕಾರ, 'ಇತಿಹಾಸದಲ್ಲಿ ಎಲ್ಲಿಯೂ ಸಂಗೊಳ್ಳಿ ರಾಯಣ್ಣನನ್ನು ಇಷ್ಟಪಡುವ ಹುಡುಗಿಯೊಬ್ಬಳ ಬಗ್ಗೆ ಉಲ್ಲೇಖವಿಲ್ಲ. ಸಿನಿಮಾದಲ್ಲಿ ಹೀಗೆ ಚಿತ್ರೀಕರಣ ಮಾಡಿರುವುದರಿಂದ ರಾಯಣ್ಣನಿಗೆ ಅವಮಾನ ಮಾಡಿದಂತಾಗಿದೆ'.

ಸಂಘಟನೆ ಹೇಳುವ ಪ್ರಕಾರ 'ಈವರೆಗೆ ಸಂಗೊಳ್ಳಿ ರಾಯಣ್ಣರ ಬಗ್ಗೆ ಬರೆದ ಯಾವುದೇ ಪುಸ್ತಕದಲ್ಲಿ ಇರದ ಸಂಗತಿಯನ್ನು ಚಿತ್ರದಲ್ಲಿ ಬಳಸಲಾಗಿದೆ. ರಾಯಣ್ಣ ಪಾತ್ರಧಾರಿ ಯುವತಿಯೊಬ್ಬಳೊಡನೆ ನರ್ತಿಸುವುದನ್ನು ಸಹಿಸಲಾಗದು. ಹೀಗಾಗಿ ತಕ್ಷಣವೇ ಆ ಹಾಡನ್ನು ಚಿತ್ರದಿಂದ ಕಿತ್ತುಹಾಕಬೇಕು'. ರಾಯಣ್ಣ ಅವರಿಗೆ ಅವಮಾನ ಆಗುವುದನ್ನು ನಾವು ಸಹಿಸೆವು ಎಂದು ಜಯಕರ್ನಾಟಕ ಸಂಘಟನೆ ಗುಡುಗಿದೆ.

ಆದರೆ ಈ ಕುರಿತು ನಿರ್ದೇಶಕ ನಾಗಣ್ಣ, ರಾಯಣ್ಣನ ಊರವರೇ ಆದ ನಿರ್ಮಾಪಕ ಆನಂದ್ ವಿ ಅಪ್ಪುಗೋಳ್ ಹಾಗೂ ನಾಯಕ ನಟ ದರ್ಶನ್ ಸೂಕ್ತ ಸಮಜಾಯಿಶಿ ನೀಡಿದ್ದಾರೆ. "ತಾವು ಚಿತ್ರದಲ್ಲಿ ಯುವತಿಯೊಬ್ಬಳು ವೀರ-ಶೂರ ರಾಯಣ್ಣನ ಬಗ್ಗೆ ಕನಸು ಕಾಣುತ್ತಿರುವಂತೆ ಚಿತ್ರೀಕರಿಸಿದ್ದೇವೆ. ಅವಳ ಕಲ್ಪನೆಯನ್ನು ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದೇವೆ ಎಂದಿದ್ದಾರೆ". ನಿರ್ಮಾಪಕರು ತಾವು ಯಾರ ಬೆದರಿಕೆಗೂ ಅಂಜುವುದಿಲ್ಲವೆಂದೂ ಸ್ಟಷ್ಟಪಡಿಸಿದ್ದಾರೆ.

ಈ ವಿವಾದದ ಕುರಿತು ಬಹಳಷ್ಟು ಜನರ ಅಭಿಪ್ರಾಯಗಳು ಇಲ್ಲಿವೆ, ಒಂದೊಂದಾಗಿ ಓದಿಕೊಳ್ಳಿ...

ಸಂಗೊಳ್ಳಿ ರಾಯಣ್ಣ ಡ್ಯುಯೆಟ್ ಸಾಂಗ್ ನಲ್ಲಿ ದರ್ಶನ್,ನಿಖಿತಾ

ದರ್ಶನ್ ನಾಯಕತ್ವ ಹಾಗೂ ನಾಗಣ್ಣ ನಿರ್ದೇಶನದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡ್ಯುಯೆಟ್ ಸಾಂಗ್ ನಲ್ಲಿ ದರ್ಶನ್ ಮತ್ತು ನಿಖಿತಾ ನರ್ತಿಸುತ್ತಿರುವ ದೃಶ್ಯಕ್ಕೆ ಜಯ ಕರ್ನಾಟಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ರಾಯಣ್ಣನಿಗೆ ಮದುವೆಯಾಗಿರಲಿಲ್ಲ ಎಂದ ಸಂಘಟನೆ

ವಿವಾದ ಮಾಡುತ್ತಿರುವ ಸಂಘಟನೆಯ ವಾದ ಹೀಗಿದೆ. 'ಇತಿಹಾಸದ ಪ್ರಕಾರ ಸಂಗೊಳ್ಳಿ ರಾಯಣ್ಣ ಸಾಯುವವರೆಗೆ ಮದುವೆಯಾಗಿರಲಿಲ್ಲ. ಅವರಿಗೆ ಯಾವುದೇ ಹುಡುಗಿ ಜೊತೆ ಸಂಬಂಧವಿರಲಿಲ್ಲ. ಇತಿಹಾಸದಲ್ಲಿ ಎಲ್ಲಿಯೂ ಸಂಗೊಳ್ಳಿ ರಾಯಣ್ಣನನ್ನು ಇಷ್ಟಪಡುವ ಹುಡುಗಿಯೊಬ್ಬಳ ಬಗ್ಗೆ ಉಲ್ಲೇಖವಿಲ್ಲ. ಸಿನಿಮಾದಲ್ಲಿ ಹೀಗೆ ಚಿತ್ರೀಕರಣ ಮಾಡಿರುವುದರಿಂದ ರಾಯಣ್ಣನಿಗೆ ಅವಮಾನ ಮಾಡಿದಂತಾಗಿದೆ'.

ಹಾಡನ್ನು ಚಿತ್ರದಿಂದ ಕಿತ್ತುಹಾಕಬೇಕು ಎಂದ ಸಂಘಟನೆ

ಸಂಘಟನೆ ಪ್ರಕಾರ 'ಈವರೆಗೆ ಸಂಗೊಳ್ಳಿ ರಾಯಣ್ಣರ ಬಗ್ಗೆ ಬರೆದ ಯಾವುದೇ ಪುಸ್ತಕದಲ್ಲಿ ಇರದ ಸಂಗತಿಯನ್ನು ಚಿತ್ರದಲ್ಲಿ ಬಳಸಲಾಗಿದೆ. ರಾಯಣ್ಣ ಪಾತ್ರಧಾರಿ ಯುವತಿಯೊಬ್ಬಳೊಡನೆ ನರ್ತಿಸುವುದನ್ನು ಸಹಿಸಲಾಗದು. ಹೀಗಾಗಿ ತಕ್ಷಣವೇ ಆ ಹಾಡನ್ನು ಚಿತ್ರದಿಂದ ಕಿತ್ತುಹಾಕಬೇಕು'.

ಹಾಡಿನ ಸನ್ನಿವೇಶದಲ್ಲಿ ದರ್ಶನ್ ಹಾಗೂ ನಿಖಿತಾ

ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ 'ರಾಯಣ್ಣ' ಹಾಗೂ 'ಮಲ್ಲಮ್ಮ'ನ ಪಾತ್ರಗಳಲ್ಲಿ ದರ್ಶನ್ ಹಾಗೂ ನಿಖಿತಾ ಹಾಡಿನ ಸನ್ನಿವೇಶ ಹೀಗೆ ಚಿತ್ರೀಕರಣವಾಗಿದೆ.

ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದ ಭಾರ್ಗವ

ಸಿನಿಮಾವನ್ನು ಸಿನಮಾ ನೋಡುವಂತೆ ನೋಡಬೇಕು ಎಂದು ಮಾಧ್ಯಮಗಳಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ನಿರ್ದೇಶಕ ಭಾರ್ಗವ ಕರೆ ನೀಡಿದ್ದಾರೆ.

ಭಾರ್ಗವ ಮಾತಿಗೆ ಧ್ವನಿಗೂಡಿಸಿದ ಸರೋಜಾದೇವಿ, ಸುದರ್ಶನ್

ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದ ಹಿರಿಯ ನಿರ್ದೇಶಕ ಭಾರ್ಗವ ಅವರ ಮಾತಿಗೆ ಹಿರಿಯ ನಟಿ ಬಿ ಸರೋಜಾದೇವಿ ಹಾಗೂ ಸುದರ್ಶನ್ ಕೂಡ ಧ್ವನಿಗೂಡಿಸಿದ್ದಾರೆ. ಇಂತಹ ಐತಿಹಾಸಿಕ ಚಿತ್ರವನ್ನು ಎಲ್ಲರೂ ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತೂ ಕೊಂಕು ತೆಗೆಯಬಾರದು ಎಂದು ಅವರೆಲ್ಲರೂ ಕರೆ ನೀಡಿದ್ದಾರೆ.

ಯಾರ ಬೆದರಿಕೆಗೂ ಅಂಜುವುದಿಲ್ಲವೆಂದ ಆನಂದ್ ಅಪ್ಪುಗೋಳ್

ಈ ಕುರಿತು ನಿರ್ದೇಶಕ ನಾಗಣ್ಣ, ರಾಯಣ್ಣನ ಊರವರೇ ಆದ ನಿರ್ಮಾಪಕ ಆನಂದ್ ವಿ ಅಪ್ಪುಗೋಳ್ ಹಾಗೂ ನಾಯಕ ನಟ ದರ್ಶನ್ ಸೂಕ್ತ ಸಮಜಾಯಿಶಿ ನೀಡಿದ್ದಾರೆ. "ತಾವು ಚಿತ್ರದಲ್ಲಿ ಯುವತಿಯೊಬ್ಬಳು ವೀರ-ಶೂರ ರಾಯಣ್ಣನ ಬಗ್ಗೆ ಕನಸು ಕಾಣುತ್ತಿರುವಂತೆ ಚಿತ್ರೀಕರಿಸಿದ್ದೇವೆ. ಅವಳ ಕಲ್ಪನೆಯನ್ನು ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದೇವೆ ಎಂದಿದ್ದಾರೆ". ನಿರ್ಮಾಪಕರು ತಾವು ಯಾರ ಬೆದರಿಕೆಗೂ ಅಂಜುವುದಿಲ್ಲವೆಂದೂ ಸ್ಟಷ್ಟಪಡಿಸಿದ್ದಾರೆ.

ದರ್ಶನ್ 'ಸಂಗೊಳ್ಳಿ ರಾಯಣ್ಣ'ನಿಗೆ ಸುದೀಪ್ ಸಪೋರ್ಟ್

ಕನ್ನಡದ ನಟ ಹಾಗೂ ದರ್ಶನ್ ಆಪ್ತಮಿತ್ರ ಕಿಚ್ಚ ಸುದೀಪ್ "ಕೊಂಕು ತೆಗೆಯುವುದನ್ನು ಬಿಟ್ಟು ಇಂತಹ ಒಂದು ಅತ್ಯದ್ಭುತ ಚಿತ್ರಕ್ಕೆ ಕಾರಣರಾದ ಎಲ್ಲರನ್ನೂ ಪ್ರಶಂಸಿಸಬೇಕು. ದರ್ಶನ್ ಈ ಚಿತ್ರದಲ್ಲಿ ಅತ್ಯಮೋಘ ಅಭಿನಯ ನೀಡಿದ್ದಾರೆ. ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಬೇಕು. ನಾಗಣ್ಣರಿಗೆ ಅಭಿನಂದನೆ ಹೇಳಬೇಕು. ಅದು ಬಿಟ್ಟು ಯಾರದೋ ಮಾತು ಕೇಳಿ ಹೀಗೆ ಗಲಾಟೆ ಮಾಡವುದು ಖಂಡನೀಯ" ಎಂದಿದ್ದಾರೆ.

ಯಾರ ಬೆದರಿಕೆಗೆ ಹೆದರುವ ಅಗತ್ಯವಿಲ್ಲವೆಂದ ದರ್ಶನ್

ಸಂಗೊಳ್ಳಿ ರಾಯಣ್ಣ ಚಿತ್ರದ ಡ್ಯುಯೆಟ್ ಹಾಡಿನ ಬಗ್ಗೆ ಅನಾವಶ್ಯಕ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ನಿಜವಾದ ಸಿನಿಮಾ ಪ್ರಿಯರಾರೂ ಹೀಗೆ ಮಾಡುತ್ತಿಲ್ಲ. ಸಿನಿಮಾ ಅಭಿಮಾನಿಗಳು ಸಿನಿಮಾವನ್ನು ಸಿನಿಮಾದಂತೆ ನೋಡಿ ಹರಸಬೇಕು ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ನಾವು ಯಾರ ಬೆದರಿಕೆಗೂ ಹೆದರುವುದಿಲ್ಲವೆಂದೂ ದರ್ಶನ್ ಸ್ಪಷ್ಟಪಡಿಸಿದ್ದಾರೆ.

ಕೇವಲ ಸಿನಿಪ್ರಿಯತೆ ಮೆರೆಯುತ್ತಿರುವ ಕನ್ನಡ ಪ್ರೇಕ್ಷಕರು

ಕನ್ನಡ ಪ್ರೇಕ್ಷಕರು ಯಾವುದೇ ಕೊಂಕು ತೆಗೆಯದೇ ಕೇವಲ ಸಿನಿಮಾ ಪ್ರಿಯತೆ ಮೆರೆದು ಈ ಅತ್ಯದ್ಭುತ ಐತಿಹಾಸಿಕ ಚಿತ್ರವನ್ನು ಮನೆಮಂದಿಯೆಲ್ಲಾ ಹೋಗಿ ನೋಡುತ್ತಿರುವುದು ಕಂಡುಬರುತ್ತಿದೆ. ಈ ಮೂಲಕ ವಿವಾದಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿದೆ. ಎಲ್ಲೆಡೆ ಸ್ವಾತಂತ್ರ್ಯ ಯೋಧ ಹಾಗೂ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಚಿತ್ರವನ್ನು ನೋಡಿ ಜನ ಕಣ್ತುಂಬಿಕೊಂಡು ಹರಸುತ್ತಿದ್ದಾರೆ. ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

English summary
Darshan Movie Sangolli Rayanna 'Duet Song' is in Controversy. Jaya Kranataka organization has told to cut the duet song in the movie. But the movie team oppose that and continued the shows. Here are the 'Public Reactions' to read...
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada