For Quick Alerts
  ALLOW NOTIFICATIONS  
  For Daily Alerts

  'ವಿಶ್ವ ಆನೆ ದಿನ': ಪ್ರತಿಜ್ಞೆ ಮಾಡಿದ ದರ್ಶನ್, ಮನವಿ ಮಾಡಿದ ಆಶಾ ಭಟ್

  |

  ಸ್ಯಾಂಡಲ್ ವುಡ್ ಪಾಲಿಗೆ ಗಜ, ವೈಟ್ ಎಲಿಪೆಂಟ್ ಹೀಗೆಲ್ಲಾ ಕರೆಸಿಕೊಳ್ಳುವ ನಟ ದರ್ಶನ್ 'ಆನೆಗಳು ಸಂರಕ್ಷಣೆ ನಾವೆಲ್ಲರೂ ಪ್ರತಿಜ್ಞೆ ಮಾಡೋಣ' ಎಂದು ಕರೆ ನೀಡಿದ್ದಾರೆ.

  Upendra ಕ್ರಿಕೆಟ್ಆಡಿದ್ದು ಹೀಗೆ | I love you behind the scenes

  ವಿಶ್ವ ಆನೆ ದಿನದ ವಿಶೇಷವಾಗಿ ಟ್ವೀಟ್ ಮಾಡಿ ಡಿ ಬಾಸ್ ''ಇಂದು ಆಗಸ್ಟ್ 12 'ವಿಶ್ವ ಆನೆ ದಿನ' ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ'' ಎಂದಿದ್ದಾರೆ.

  23 ವರ್ಷದ ಸಂಭ್ರಮ: ದರ್ಶನ್ ಮತ್ತೆ ಅಂತಹ ಕಥೆ ಮಾಡಬೇಕೆನ್ನುತ್ತಿದೆ ಭಕ್ತಗಣ23 ವರ್ಷದ ಸಂಭ್ರಮ: ದರ್ಶನ್ ಮತ್ತೆ ಅಂತಹ ಕಥೆ ಮಾಡಬೇಕೆನ್ನುತ್ತಿದೆ ಭಕ್ತಗಣ

  ಮತ್ತೊಂದೆಡೆ ದರ್ಶನ್ ಅವರ ಜೊತೆ ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಆಶಾ ಭಟ್ ಸಹ ವಿಶ್ವ ಆನೆ ದಿನದ ವಿಶೇಷವಾಗಿ ಶುಭಕೋರಿದ್ದು, ''ಆನೆಗಳ ಅಳಿವಿಗೆ ಮನುಷ್ಯರು ಪ್ರಯತ್ನಿಸಬಾರದು'' ಎಂದು ವಿನಂತಿಸಿದ್ದಾರೆ.

  ಅಂದ್ಹಾಗೆ, ನಟ ದರ್ಶನ್ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ. ಅರಣ್ಯ ಇಲಾಖೆಯ ಹಲವು ಕಾರ್ಯಕ್ರಮಗಳಿಗೆ ಡಿ ಬಾಸ್ ಸಾಥ್ ನೀಡಿದ್ದಾರೆ. ಹಲವು ಪ್ರಾಣಿಗಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ.

  ಮೈಸೂರಿನಲ್ಲಿ ಬಹುದೊಡ್ಡ ಫಾರ್ಮ್ ಹೌಸ್ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳನ್ನು ಪೋಷಿಸುತ್ತಿದ್ದಾರೆ.

  Darshan Pledge on World Elephant Day

  ಇನ್ನು ದರ್ಶನ್ ಹಾಗೂ ಆಶಾ ಭಟ್ ನಟಿಸಿರುವ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಸಿನಿಮಾ ರಿಲೀಸ್ ಆಗಲು ಸಾಧ್ಯವಾಗಿಲ್ಲ. ಥಿಯೇಟರ್‌ಗಳಿಗೆ ಅನುಮತಿ ಸಿಕ್ಕ ನಂತರ ಬಹುಶಃ 'ರಾಬರ್ಟ್' ಜನರ ಮುಂದೆ ಬರಲಿದೆ. ಇದರು ನಡುವೆ ರಾಜವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಸಹ ಕೈಗೆತ್ತಿಕೊಂಡಿದ್ದರು.

  English summary
  Kannada actor darshan and robert movie heroine Asha bhat Pledge on World Elephant Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X