Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಬರ್ಟ್'ಗೆ ಐಶ್ವರ್ಯ ರೈ ನಾಯಕಿ : ದರ್ಶನ್ ಏನಂದ್ರು?
'ರಾಬರ್ಟ್' ರಾಣಿಯ ಬಗ್ಗೆ ಈಗ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಈ ಸಿನಿಮಾಗೆ ಅವ್ರು ಹೀರೋಯಿನ್, ಇವ್ರು ಹೀರೋಯಿನ್ ಎನ್ನುವ ಗಾಸಿಪ್ ಸಿಕ್ಕಾಪಟ್ಟೆ ಬರುತ್ತಿದೆ.
ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ಆನುಷ್ಕ ಶೆಟ್ಟಿ, ಪ್ರಣಿತಾ, ಕಾಜಲ್ ಅಗರ್ವಾಲ್ ಹೀಗೆ ಸಾಕಷ್ಟು ನಾಯಕಿಯರ ಹೆಸರುಗಳು 'ರಾಬರ್ಟ್' ನಾಯಕಿ ಪಟ್ಟಕ್ಕೆ ಕೇಳಿ ಬಂದಿದ್ದವು. ಈ ರೀತಿಯ ಸೌತ್ ಚೆಲುವೆಯರಲ್ಲಿ ಯಾರು ದರ್ಶನ್ ಜೋಡಿಯಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು.
ಡಿ-ಬಾಸ್ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ.!
ಅದರ ನಡುವೆ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ 'ರಾಬರ್ಟ್' ಸಿನಿಮಾದ ನಾಯಕಿ ಆಗುತ್ತಿದ್ದಾರೆ ಎನ್ನುವ ಸುದ್ದಿ ನಿನ್ನೆ ಬಂದಿತ್ತು. ಇದು ನಿಜವಾಗಿಯೂ ಅಭಿಮಾನಿಗಳಿಗೆ ಮಾತ್ರವಲ್ಲ ಚಿತ್ರತಂಡಕ್ಕೆ 'ಶಾಕ್' ನೀಡುವ ಸುದ್ದಿಯಾಗಿತ್ತು. ಇದೀಗ ಈ ಚರ್ಚೆಯ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ...

ಐಶ್ವರ್ಯ ರೈ ಬರುತ್ತಾರಂತೆ ಸಾರ್
ಚಿತ್ರದ ನಾಯಕಿ ವಿಷಯದ ಬಗ್ಗೆ ಇಂದು ಮಾತನಾಡಿರುವ ದರ್ಶನ್ ''ನಿನ್ನೆ ಕೇಳುತ್ತಾ ಇದ್ವಿ. ಸಿನಿಮಾಗೆ ಐಶ್ವರ್ಯ ರೈ ಬರುತ್ತಾರಂತೆ ಸಾರ್. ಅಯ್ಯೋ ಅಷ್ಟೊಂದು ಎಲ್ಲ ಇಲ್ಲ ಸಾರ್.'' ಎನ್ನುವ ಮೂಲಕ ತಮ್ಮ ರೆಗ್ಯೂಲರ್ ಸ್ಟೈಲ್ ನಲ್ಲಿ ಐಶ್ವರ್ಯ ರೈ ಗಾಸಿಪ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದ ನಾಯಕಿಯ ಆಯ್ಕೆ ಆಗಿಲ್ಲ
'ರಾಬರ್ಟ್' ಸಿನಿಮಾಗೆ ಐಶ್ವರ್ಯ ರೈ ಬರ್ತಾರೆ ಎನ್ನುವ ಸುದ್ದಿ ಸ್ವತಃ ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದೆ. ಇಂತಹ ಸುದ್ದಿ ದರ್ಶನ್ ಹಾಗೂ ಟೀಮ್ ಗೆ ನಗು ತರಿಸಿದೆ. ಈ ಬಗ್ಗೆ ದರ್ಶನ್ ಮಾತನಾಡಿದ್ದು, ಐಶ್ವರ್ಯ ರೈ ಚಿತ್ರದ ನಾಯಕಿ ಅಲ್ಲ ಎನ್ನುವುದು ಸ್ಪಷ್ಟವಾಗಿದೆ. ಸದ್ಯಕ್ಕೆ ಚಿತ್ರದ ನಾಯಕಿಯ ಆಯ್ಕೆ ಆಗಿಲ್ಲ.
ಯಶ್ ನಂತರ ಗಡ್ಡಧಾರಿ ಆದ ದರ್ಶನ್: ಇದರ ಹಿಂದಿದ್ದಾರೆ ಆ ಡೈರೆಕ್ಟರ್.!

ಇಂದಿನಿಂದ 'ರಾಬರ್ಟ್' ರಾಜ್ಯಬಾರ
ಇಂದಿನಿಂದ (ಸೋಮವಾರ) 'ರಾಬರ್ಟ್' ಸಿನಿಮಾದ ಚಿತ್ರೀಕರಣ ಶುರು ಆಗುತ್ತಿದೆ. ಇಂದು ಬನಶಂಕರಿ ದೇವಲಯದಲ್ಲಿ ಚಿತ್ರತಂಡ ಪೂಜೆ ಮಾಡುವ ಮೂಲಕ ಸಿನಿಮಾದ ಶುಭಾರಂಭವಾಗಿದೆ. ಈ ವೇಳೆ ದರ್ಶನ್ ಸಿನಿಮಾದ ಬಗ್ಗೆಯ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ಉಮಾಪತಿ ಸಹ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಹೊಸ ಲುಕ್, ಬೇರೆ ರೀತಿಯ ಸಿನಿಮಾ
ಸಿನಿಮಾದ ಬಗ್ಗೆ ಮಾತನಾಡಿರುವ ದರ್ಶನ್ ನಾವು ಏನೋ ಮಾಡಿಬಿಡುತ್ತೇವೆ ಎನ್ನುವುದಕ್ಕಿಂತ ಒಂದು ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ. ಸದ್ಯ ಗಡ್ಡ ಬಿಟ್ಟಿದ್ದು, ಚಿತ್ರದ ಅವರ ಲುಕ್ ಬೇರೆ ರೀತಿ ಇರುತ್ತದೆಯಂತೆ. ಫಸ್ಟ್ ಲುಕ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಸದ್ಯದಲ್ಲಿಯೇ ಹೊರಬರಲಿದೆ. ರಾಜಶೇಖರ್ ಹಾಗೂ ಚಂದ್ರಮೌಳಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.