For Quick Alerts
  ALLOW NOTIFICATIONS  
  For Daily Alerts

  'ಇಂದ್ರಜಿತ್ ದೊಡ್ಡ ತನಿಖೆಗಾರರು, ಏನೋ ಮಾಡಲಿ': ದರ್ಶನ್ ಪ್ರತಿಕ್ರಿಯೆ

  |

  ಮೈಸೂರಿನ ಸಂದೇಶ್ ಹೋಟೆಲ್‌ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇಂದ್ರಜಿತ್ ಆರೋಪಕ್ಕೆ ನಟ ದರ್ಶನ್ ಪ್ರತಿಕ್ರಿಯೆ ಕೊಟ್ಟಿದ್ದು, ''ಹಲ್ಲೆ ಮಾಡಿಲ್ಲ, ರೇಗಾಡಿರಬಹುದು ಅಷ್ಟೇ'' ಎಂದರು.

  Recommended Video

  ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Filmibeat Kannada

  ''ಇಂದ್ರಜಿತ್ ಲಂಕೇಶ್ ಅವರು ದೊಡ್ಡ ತನಿಖೆಗಾರರು, ಅವರು ಮಾಡಲಿ ಬಿಡಿ, ಊಟ ಲೇಟ್ ಆಗಿರುತ್ತೆ ಅಂತಾ ಗಟ್ಟಿ ಧ್ವನಿಯಲ್ಲಿ ರೇಗಾಡಿರಬಹುದು ಅಷ್ಟೇ. ಇನ್ನು ಈ ವಿಷಯಗಳು ಎಲ್ಲೆಲ್ಲಿ ಹೋಗುತ್ತೆ ನೋಡೋಣ'' ಎಂದರು.

  ದಲಿತನ ಮೇಲೆ ದರ್ಶನ್ ಹಲ್ಲೆ ಆರೋಪ: ಇಂದ್ರಜಿತ್ ಸುಳ್ಳು ಹೇಳುತ್ತಿದ್ದಾರೆಂದ ಸಂದೇಶ್ ನಾಗರಾಜ್ದಲಿತನ ಮೇಲೆ ದರ್ಶನ್ ಹಲ್ಲೆ ಆರೋಪ: ಇಂದ್ರಜಿತ್ ಸುಳ್ಳು ಹೇಳುತ್ತಿದ್ದಾರೆಂದ ಸಂದೇಶ್ ನಾಗರಾಜ್

  ''ಹಲ್ಲೆ ಮಾಡಿದ್ದು ಆದರೆ ಸಂದೇಶ್ ಸುಮ್ಮನೆ ಇರ್ತಿದ್ರಾ? ಅವರು ಕೇಳ್ತಿರಲಿಲ್ಲ. ಸಂದೇಶ್ ಮತ್ತು ನನ್ನದು ಸಾವಿರ ಗಲಾಟೆ ಇರುತ್ತೆ, ಎಲ್ಲೊಲ್ಲೊ ವಿಷಯ ತಿರುಗಾಡುತ್ತಿದೆ. ಇಂದ್ರಜಿತ್ ಮೇಲೆ ನನಗೆ ಬೇಜಾರಿಲ್ಲ, ಅವರ ಜೊತೆಯೂ ಒಂದು ಸಿನಿಮಾ ಮಾಡಿದ್ದೇನೆ'' ಎಂದು ದರ್ಶನ್ ತಿಳಿಸಿದರು.

  'ಅರುಣಾ ಕುಮಾರಿ ಅವರ ಪರವಾಗಿ ನಾನು ನಿಲ್ಲುತ್ತೇನೆ ಎಂದು ಇಂದ್ರಜಿತ್ ಹೇಳ್ತಿದ್ದಾರೆ. ಆದರೆ ನಾನು ಜೂನ್ 16 ರಂದೇ ಆಕೆಗೆ ಹೇಳಿದ್ದೇನೆ, ನಿಮ್ಮದು ತಪ್ಪು ಇಲ್ಲ ಅಂದ್ರೆ ಇಡೀ ಪ್ರಪಂಚ ಒಂದು ಕಡೆ ಇದ್ರು, ನಾನು ನಿಮ್ಮ ಹಿಂದೆ ಇರ್ತೀನಿ ಎಂದು ಹೇಳಿದ್ದೆ' ಲಂಕೇಶ್‌ಗೆ ತಿರುಗೇಟು ಕೊಟ್ಟಿದ್ದಾರೆ.

  ''ಅರುಣಾ ಕುಮಾರಿ ವಿಷಯವನ್ನು ಇಲ್ಲಿಗೆ ಬಿಡಲು ಹೇಳಿದ್ದೇನೆ, ಪೊಲೀಸರು ತನಿಖೆ ಮಾಡ್ತಾರೆ, ಸುಮ್ಮನೆ ನಾವು ಮಾತಾಡಿಕೊಂಡು ಕೂರುವುದು ಬೇಡ. ಈ ನಡುವೆ ಇದರ ಸುತ್ತಮುತ್ತ ಏನೆಲ್ಲಾ ವಿಚಾರಗಳು ಬರುತ್ತೋ ಕಾದು ನೋಡ್ತೇನೆ'' ಎಂದು ಮಾಧ್ಯಮಗಳಿಗೆ ರಿಯಾಕ್ಟ್ ಮಾಡಿದರು.

  ಇದಕ್ಕೂ ಮುಂಚೆ ಗೃಹ ಸಚಿವರನ್ನು ಭೇಟಿ ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಅರುಣಾಕುಮಾರಿಯನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ, ಹೋಟೆಲ್‌ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

  English summary
  Challenging star Darshan reaction to director Indrajit Lankesh Allegations.
  Thursday, July 15, 2021, 13:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X