Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಡಪ್ರಭು ಕೆಂಪೇಗೌಡರ ನೆನೆದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಂಗಳೂರು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡ ಅವರನ್ನ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಜೂನ್ 27 ಇಂದು ಕೆಂಪೇಗೌಡ ಜಯಂತಿ. ಈ ವಿಶೇದ ದಿನದಂದು ಕೆಂಪೇಗೌಡರ ಕುರಿತು ಟ್ವೀಟ್ ಮಾಡಿರುವ ದರ್ಶನ್, ನಾಡದೊರೆಯನ್ನ ಸ್ಮರಿಸಿದ್ದಾರೆ.
''ನಾಡಪ್ರಭು ಕೆಂಪೇಗೌಡರು ಹಾಗೂ ಅವರ ಕುಟುಂಬ ಸಾಕಷ್ಟು ವರ್ಷಗಳು ಶ್ರಮಿಸಿ ತಮ್ಮ ಕನಸಿನ ರಾಜಧಾನಿ ಬೆಂಗಳೂರು ಸಾಮಾನ್ಯ ಜನರಿಗೆ ಆಸರೆಯಾಗಿರಲೆಂದು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳೊಂದಿಗೆ ಕಟ್ಟಿಕೊಟ್ಟವರು. ಹಲವಾರು ದೇವಾಲಯಗಳು, ಕೆರೆಗಳು, ಮಹಾದ್ವಾರಗಳು, ಶಾಲೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ'' ಎಂದು ಅವರ ಸಾಧನೆ ನೆನೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ದರ್ಶನ್ 'ಯಜಮಾನ'
''ಈ ಕನಸಿನ ನಗರಿಯನ್ನು ಗೌಡರ ಆಸೆ-ಆದರ್ಶಗಳೊಂದಿಗೆ ಶುದ್ಧವಾಗಿ, ಪರಿಸರ ಬದ್ಧವಾಗಿ ಕಾಪಾಡಿಕೊಂಡು ಬೆಳೆಸಿಕೊಂಡು ಹೋಗುವುದು ಇಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಹೌದು'' ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದ್ದಾರೆ.
ಅಂದ್ಹಾಗೆ, ದರ್ಶನ್ ಅಭಿನಯಿಸಿದ್ದ 'ಅಂಬರೀಶ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕೆಂಪೇಗೌಡರ ಪಾತ್ರ ಮಾಡಿದ್ದರು. ಇದೇ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು ಕೂಡ ಕೆಂಪೇಗೌಡ ಎಂದೇ ಇತ್ತು.