»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ '48'ನೇ ಸಿನಿಮಾ 'ಚಕ್ರವರ್ತಿ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಹಾಗೇ, ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ '50'ನೇ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ.

ಹೀಗಿರುವಾಗಲೇ, ದರ್ಶನ್ ರವರ '49'ನೇ ಚಿತ್ರದ ಕುರಿತು ಖಾಸ್ ಖಬರ್ ಒಂದು ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಸಂಪೂರ್ಣ ವರದಿ ಓದಿರಿ....

ದರ್ಶನ್ ರವರ '49'ನೇ ಚಿತ್ರಕ್ಕೆ ಟೈಟಲ್ ಫಿಕ್ಸ್.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಟೈಟಲ್ ಏನು ಅಂತ ತಿಳಿದುಕೊಳ್ಳುವ ಕುತೂಹಲ ಇದ್ಯಾ.?['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]

ದರ್ಶನ್ ಈಗ 'ತಾರಕ್'

'ಮಿಲನ' ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ಅಭಿನಯಿಸಲಿರುವ ಚಿತ್ರಕ್ಕೆ 'ತಾರಕ್' ಅಂತ ಹೆಸರಿಡಲಾಗಿದೆ.[ಸೆಟ್ಟೇರಿತು 'ದರ್ಶನ್-ಮಿಲನ ಪ್ರಕಾಶ್' ಜೋಡಿಯ ಹೊಸ ಚಿತ್ರ]

ಶೂಟಿಂಗ್ ಯಾವಾಗ.?

ಕೆ.ಎಸ್.ದುಶ್ಯಂತ್ ಅರ್ಪಿಸಿ, ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಷನ್ಸ್ ಮತ್ತು ಶ್ರೀ ಜಯಮಾತಾ ಕಂಬೈನ್ಸ್ ಲಾಂಛನದಲ್ಲಿ ಲಕ್ಷ್ಮಣ್ ನಿರ್ಮಿಸಿ, 'ಮಿಲನ' ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಾಯಕರಾಗಿ ಅಭಿನಯಿಸುವ 'ತಾರಕ್' ಚಿತ್ರೀಕರಣ ಸದ್ಯದಲ್ಲಿಯೇ ಶುರು ಆಗಲಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್.!]

ದರ್ಶನ್ ಗೆ ನಾಯಕಿ.?

'ತಾರಕ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಕೆ.ಕೃಷ್ಣ ಕುಮಾರ್ ಛಾಯಾಗ್ರಹಣ ಇರಲಿದೆ. ಅಷ್ಟು ಬಿಟ್ಟರೆ ಬಾಕಿ ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆ ನಡೆದಿಲ್ಲ.

ಶ್ರುತಿ-ರಶ್ಮಿಕಾ ಕಥೆ ಏನು.?

ದರ್ಶನ್ ರವರ 49ನೇ ಚಿತ್ರಕ್ಕೆ ನಾಯಕಿಯರಾಗಿ ಶ್ರುತಿ ಹರಿಹರನ್ ಹಾಗೂ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ ಅಂತ ಸುದ್ದಿ ಆಗಿತ್ತು. ಆದ್ರೆ, ಚಿತ್ರತಂಡ ಕನ್ಫರ್ಮ್ ಮಾಡಿಲ್ಲ.

ಮುಹೂರ್ತ ಮುಗಿದಿದೆ

ಕಳೆದ ಡಿಸೆಂಬರ್ ನಲ್ಲಿಯೇ ಬೆಂಗಳೂರಿನ ರಾಜರಾಜೇಶ್ವರಿ ನಗರದ ಚೌಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದರ್ಶನ್ ರವರ 49ನೇ ಚಿತ್ರದ ಮುಹೂರ್ತ ನೆರವೇರಿತ್ತು. ಕುಮಾರ್ ಬಂಗಾರಪ್ಪ ಮೊದಲ ಶಾಟ್ ಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು. ಈಗ ಸಿನಿಮಾ ಸೆಟ್ಟೇರಬೇಕು ಅಷ್ಟೇ.

English summary
According to the latest Buzz, Challenging Star Darshan's 49th movie is titled as 'Tarak'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada