»   » ಎಕ್ಸ್ ಕ್ಲೂಸಿವ್: 'ದುರ್ಯೋಧನ'ನಾಗಿ ದರ್ಶನ್ ದರ್ಶನ

ಎಕ್ಸ್ ಕ್ಲೂಸಿವ್: 'ದುರ್ಯೋಧನ'ನಾಗಿ ದರ್ಶನ್ ದರ್ಶನ

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾದಲ್ಲಿ ಡಿ-ಬಾಸ್ ದರ್ಶನ್ ಅವರ ಲುಕ್ ಈಗ ರಿಲೀಸ್ ಆಗಿದೆ. ದುರ್ಯೋಧನನ ಪಾತ್ರದಲ್ಲಿ ಮಿಂಚಿರುವ ದರ್ಶನ್ ಅವರ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ.

ದರ್ಶನ್ ಹಾಗೂ ನನ್ನ ನಡುವೆ ದ್ವೇಷ, ವೈರತ್ವ ಇಲ್ಲ ಎಂದ ಶಿವಣ್ಣ

'ಕುರುಕ್ಷೇತ್ರ' ಸಿನಿಮಾದ ಮುಹೂರ್ತ ಆಗಸ್ಟ್ 6ಕ್ಕೆ ಅದ್ದೂರಿಯಾಗಿ ನಡೆಯಲಿದ್ದು, ಅಂದೇ ದರ್ಶನ್ ಅವರ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಅದಕ್ಕೂ ಮುಂಚೆಯೇ ಈಗ ದುರ್ಯೋಧನ ಗೆಟಪ್ ಬಹಿರಂಗವಾಗಿದೆ. ಮುಂದೆ ಓದಿ....

ದುರ್ಯೋಧನ ಲುಕ್ ರಿಲೀಸ್

'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್ ಹೇಗಿರುತ್ತಾರೆ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ದುರ್ಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್ ಲುಕ್ ಸದ್ಯ ಬಹಿರಂಗವಾಗಿದೆ.

ಖದರ್ ಲುಕ್

ಗದೆ ಹಿಡಿದು, ಮೀಸೆ ಮೇಲೆ ಕೈ ಇಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ಖದರ್ ಆಗಿ ಒಂದು ಪೋಸ್ ಕೊಟ್ಟಿದ್ದಾರೆ. ಸಿನಿಮಾ ಮೇಲಿನ ಕುತೂಹಲವನ್ನು ಅವರ ಫಸ್ಟ್ ಲುಕ್ ಇನ್ನಷ್ಟು ಹೆಚ್ಚಿಸಿದೆ.

50ನೇ ಸಿನಿಮಾ

'ಕುರುಕ್ಷೇತ್ರ' ದರ್ಶನ್ ಅಭಿನಯದ 50ನೇ ಚಿತ್ರ ಆಗಿದೆ. ಅದನ್ನು ಸಿನಿಮಾದ ಚಿತ್ರದ ಪೋಸ್ಟರ್ ನಲ್ಲಿಯೂ ಹೈಲೈಟ್ ಮಾಡಲಾಗಿದೆ.

ಆಗಸ್ಟ್ 6ಕ್ಕೆ ಮುಹೂರ್ತ

ಇದೇ ತಿಂಗಳ 6 ರಂದು 'ಕುರುಕ್ಷೇತ್ರ' ಚಿತ್ರಕ್ಕೆ ಚಾಲನೆ ಸಿಗಲಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿತ್ರಕ್ಕೆ ಕ್ಲಾಪ್ ಮಾಡಲಿದ್ದಾರೆ.

ಅದ್ದೂರಿ ಸಿನಿಮಾ

'ಕುರುಕ್ಷೇತ್ರ' ಸಿನಿಮಾ ಕನ್ನಡ ಚಿತ್ರರಂಗದ ಪೈಕಿ ಅತಿ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ. ಸದ್ಯಕ್ಕೆ ಸಿನಿಮಾದ ಬಜೆಟ್ 50 ರಿಂದ 60 ಕೋಟಿ ಆಗಲಿದೆ ಅಂತ ಹೇಳಲಾಗುತ್ತಿದೆ.

ಕಲಾವಿದರ ದಂಡು

ಚಿತ್ರದಲ್ಲಿ ದರ್ಶನ್, ರವಿಚಂದ್ರನ್, ಸಾಯಿಕುಮಾರ್, ನಿಖಿಲ್ ಕುಮಾರ್, ಹರಿಪ್ರಿಯಾ, ಲಕ್ಷ್ಮಿ, ಸ್ನೇಹಾ, ರೆಜಿನಾ, ಮತ್ತು ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಸೈಫಿ ಸೇರಿದಂತೆ ಹಲವರು ಕಾಣಿಸಿಕೊಳ್ಳುವುದು ಖಚಿತವಾಗಿದೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ

'ಕುರುಕ್ಷೇತ್ರ' ಸಿನಿಮಾವನ್ನು ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡುತ್ತಿದ್ದು, ನಾಗಣ್ಣ ನಿರ್ದೇಶನ ಚಿತ್ರಕ್ಕಿದೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದ್ದು, 2D ಹಾಗೂ 3D ವರ್ಷನ್ ಗಳಲ್ಲಿ ಚಿತ್ರ ತೆರೆಗೆ ಬರಲಿದೆ.

English summary
Kannada Actor Challenging Star Darshan's 50th movie 'Kurukshetra' first look is out. Check out in pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada