For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ವಿರಾಟ್ ಚಿತ್ರ ಕುಂಬಳಕಾಯಿಯತ್ತ...

  By ಜೀವನರಸಿಕ
  |

  'ಮಿ. ಐರಾವತ' ಚಿತ್ರ ಭರ್ಜರಿ ಕಾಸು ಮಾಡ್ತಿರೋ ಖುಷಿಯಲ್ಲಿರೋ 'ಚಾಲೆಂಜಿಂಗ್ ಸ್ಟಾರ್' ದರ್ಶನ್ 'ಜಗ್ಗೂ ದಾದಾ' ಶೂಟಿಂಗ್ನ ನಡುವೆಯೇ 2012ರಿಂದ ಹಲವು ಕಾರಣಗಳಿಂದ ಮೂಲೆಗುಂಪಾಗಿದ್ದ 'ವಿರಾಟ್' ಚಿತ್ರದ ಶೂಟಿಂಗನ್ನು ಹೆಚ್ಚೂಕಡಿಮೆ ಮುಗಿಸಿದ್ದಾರೆ.

  ಎಚ್ ವಾಸು ನಿರ್ದೇಶನದ 'ವಿರಾಟ್' ಚಿತ್ರದ ಶೂಟಿಂಗ್ 95% ಮುಗಿದಿದೆ. ಇನ್ನು ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು ದರ್ಶನ್ 'ಜಗ್ಗೂದಾದಾ' ಶೂಟಿಂಗ್ ನಡುವೆ ಟೈಂ ಕೊಟ್ಟಾಗಲೆಲ್ಲ ಚಿತ್ರತಂಡ ಶೂಟಿಂಗ್ ಮುಗಿಸ್ತಿದೆ. ಈ ವರ್ಷ 'ವಿರಾಟ್' ಮೂಲಕ ಮತ್ತೊಂದು ಬಿಗ್ ಬಜೆಟ್ ಚಿತ್ರ ನೋಡೋ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.[ಚಿತ್ರಗಳು : 'ಜಗ್ಗು ದಾದಾ' ಅಡ್ಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್]

  ಚಿತ್ರದಲ್ಲಿ ದರ್ಶನ್ಗೆ ಜೋಡಿಯಾಗಿರೋದು 'ಡಿಕೆ' ಚಿತ್ರದಲ್ಲಿ ಪ್ರೇಮ್ಗೆ ಜೋಡಿಯಾಗಿದ್ದ ಚೈತ್ರಾ ಚಂದ್ರನಾಥ್, 'ಮಾಸ್ಟರ್ ಪೀಸ್' ಚಿತ್ರದ ಸಾನ್ವಿ ಶ್ರೀವಾತ್ಸವ್ ಅಕ್ಕ ವಿದಿಷಾ ಶ್ರೀವಾತ್ಸವ್ ಮತ್ತು ಈಷಾ ಚಾವ್ಲಾ. ಸಿನಿಮಾದಲ್ಲಿ ದರ್ಶನ್ ಜೊತೆ ಮೂರು ಮೂರು ಹಾಟ್ ಅಂಡ್ ಸ್ಪೈಸಿ ಸುಂದರಿಯರು ಕಾಣಿಸಿಕೊಳ್ತಿದ್ದಾರೆ ಅಂದ್ರೆ ನೋಡೋಕೆ ಮಸ್ತ್ ಮಜಾ ಇರುತ್ತೆ ಅನ್ನೋದು ಚಿತ್ರರಸಿಕರ ಲೆಕ್ಕಾಚಾರ.[ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?]

  ಇತ್ತೀಚೆಗೆ ಬಿಡುಗಡೆಯಾಗಿರುವ 'ಮಿ. ಐರಾವತ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ದುಡ್ಡು ಮಾಡಿಕೊಂಡರೂ, ದರ್ಶನ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬಂದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಏನೇ ಆಗಲಿ, ವಿರಾಟ್ ಚಿತ್ರ ಮುಕ್ತಾಯದ ಹಂತಕ್ಕೆ ಬಂದಿದ್ದು, ಅಭಿಮಾನಿಗಳಿಗಂತೂ ಸಂತೋಷದ ಸುದ್ದಿಯೇ.

  English summary
  Darshan has completed shooting for his Kannada movie Virat along with Jaggu Dada. Virat started shooting in 2012 itself. But, due to several reasons it was stalled. Virat has 3 heroines - Chaitra Chandranath, Sanvi Srivastav and Esha Chawla.
  Tuesday, October 13, 2015, 15:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X