For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಹೊಸ ಪೋಸ್ಟರ್ ಜೊತೆ ರಿಲೀಸ್ ಬಗ್ಗೆ ಮಾಹಿತಿ ನೀಡಿದ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಈಗಾಗಲೆ ಚಿತ್ರದಿಂದ ಹಾಡುಗಳು ಮತ್ತು ದರ್ಶನ್ ಅವರ ಎರಡು ಲುಕ್ ರಿವೀಲ್ ಆಗಿದೆ.

  ಚಾಲೆಂಜಿಂಗ್ ಸ್ಟಾರ್ ಗೆ ಇಂದು 17 ವರ್ಷ..! | Darshan | FILMIBEAT KANNADA

  ಇಂದು ರಿಲೀಸ್ ಆಗುವ ಪೋಸ್ಟರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿತ್ತು. ಆದರೀಗ ಈ ಕುತೂಹಲತ್ಕೆ ತೆರೆ ಬಿದ್ದಿದೆ. ಕ್ರಿಸ್ಮಸ್, ಸಂಕ್ರಾತಿ, ಯುಗಾದಿ ಹಬ್ಬದಂತೆ ರಂಜಾನ್ ಹಬ್ಬಕ್ಕು ಹೊಸ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡುವ ಜೊತೆಗೆ ರಿಲೀಸ್ ಬಗ್ಗೆಯು ಮಾಹಿತಿ ನೀಡಿದ್ದಾರೆ. ಮುಂದೆ ಓದಿ..

  'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ'ರಾಬರ್ಟ್' ಚಿತ್ರತಂಡಕ್ಕೆ ಕೈಮುಗಿದ ಚಿತ್ರಮಂದಿರ ಮಾಲೀಕ

  ಹೇಗಿದೆ ಪೋಸ್ಟರ್?

  ಹೇಗಿದೆ ಪೋಸ್ಟರ್?

  ರಂಜಾನ್ ಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ದರ್ಶನ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ಕೂದಲು, ದಾಡಿ ಬಿಟ್ಟು, ಕನ್ನಡಕ ಧರಿಸಿದ್ದಾರೆ. ಪೋಸ್ಟರ್ ನಲ್ಲಿ ದರ್ಶನ್ ಲುಕ್ ಕೆಳಗೆ ಒಂದಿಷ್ಟು ಕುತೂಹಲಕಾರಿ ಅಂಶ ಅಡಗಿದೆ. ಈಗಾಗಲೆ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  'ರಾಬರ್ಟ್' ನಾಯಕಿಯ ಗಾಯನ: ಆಶಾ ಭಟ್ ಮಧುರ ಕಂಠಕ್ಕೆ ಅಭಿಮಾನಿಗಳು ಫಿದಾ'ರಾಬರ್ಟ್' ನಾಯಕಿಯ ಗಾಯನ: ಆಶಾ ಭಟ್ ಮಧುರ ಕಂಠಕ್ಕೆ ಅಭಿಮಾನಿಗಳು ಫಿದಾ

  ಈಗಾಗಲೆ ದರ್ಶನ್ ಎರಡು ಲುಕ್ ರಿವೀಲ್ ಆಗಿದೆ

  ಈಗಾಗಲೆ ದರ್ಶನ್ ಎರಡು ಲುಕ್ ರಿವೀಲ್ ಆಗಿದೆ

  ಈಗಾಗಲೆ ಚಿತ್ರದಿಂದ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ದರ್ಶನ್ ಎರಡು ಗೆಟಪ್ ರಿವೀಲ್ ಆಗಿತ್ತು. ಹಾಗಾಗಿ ರಂಜಾನ್ ಗೆ ರಿಲೀಸ್ ಆಗುವ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿತ್ತು. ಆದರೀಗ ಅದಕ್ಕೂ ತೆರೆಬಿದ್ದಿದೆ. ಇನ್ನೇನಿದ್ರು ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

  ದರ್ಶನ್ ಟ್ವೀಟ್ ನಲ್ಲಿ ಏನಿದೆ?

  ದರ್ಶನ್ ಟ್ವೀಟ್ ನಲ್ಲಿ ಏನಿದೆ?

  ರಾಬರ್ಟ್ ಯಾವಾಗ ತೆರೆಗೆ ಬರುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್

  "ಎಲ್ಲಾ ನಲ್ಮೆಯ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ಧಿಕ ಶುಭಾಶಯಗಳು. ನಮ್ಮ 'ರಾಬರ್ಟ್' ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮಡಿಲಿಗೆ ಸೇರಲಿದೆ. ಮನೆಯಲ್ಲಿ ಇರಿ, ಮನೆಯವರಿಗಾಗಿ ಜಾಗೃತರಾಗಿರಿ" ಎಂದು ಹೇಳಿದ್ದಾರೆ.

  ಒಟಿಟಿಯಲ್ಲಿ ರಿಲೀಸ್ ಆಗಿಲ್ಲ, ಚಿತ್ರಮಂದಿರಕ್ಕೆ ಬರಲಿದೆ ರಾಬರ್ಟ್

  ಒಟಿಟಿಯಲ್ಲಿ ರಿಲೀಸ್ ಆಗಿಲ್ಲ, ಚಿತ್ರಮಂದಿರಕ್ಕೆ ಬರಲಿದೆ ರಾಬರ್ಟ್

  ರಾಬರ್ಟ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚಿತ್ರದ ನಿರ್ಮಾಪಕ ಯಾವುದೆ ಕಾರಣಕ್ಕೂ ಸಿನಿಮಾ ಆನ್ ಲೈನ್ ನಲ್ಲಿ ರಿಲೀಸ್ ಮಾಡಿಲ್ಲ, ಚಿತ್ರಮಂದಿರದಲ್ಲಿಯೇ ತೆರೆಗೆ ಬರಲಿದೆ ಎಂದು ಹೇಳಿದ್ದಾರೆ.

  ಆಗಸ್ಟ್ ನಲ್ಲಿ ತೆರೆಗೆ ಬರುತ್ತಾ ಸಿನಿಮಾ?

  ಆಗಸ್ಟ್ ನಲ್ಲಿ ತೆರೆಗೆ ಬರುತ್ತಾ ಸಿನಿಮಾ?

  ಜೂನ್ ತಿಂಗಳಲ್ಲಿ ಲಾಕ್ ಡೌನ್ ಮುಗಿಯುವ ಸಾಧ್ಯತೆ ಇದೆ. ಆ ನಂತರ ಚಿತ್ರೀಕರಣ ಸಹ ಪ್ರಾರಂಭವಾಗುವ ಸಾಧ್ಯತೆ ಇದ್ದು, ಜುಲೈ, ಆಗಸ್ಟ್ ತಿಂಗಳಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಬಂದರೆ ರಾಬರ್ಟ್ ಆಗಸ್ಟ್ 15 ಕ್ಕೆ ರಿಲೀಸ್ ಮಾಡುವ ಸಾಧ್ಯತೆ ಇದೆ. ಆದರೆ ಎಲ್ಲಾ ಪರಿಸ್ಥಿತಿ ಮೇಲೆ ನಿರ್ಧಾರವಾಗಿದೆ.

  English summary
  Darshan starrer Roberrt kannada film new poster released for Ramadan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X