»   » 'ರಾಯಣ್ಣ' ಅದ್ದೂರಿ ಶತದಿನೋತ್ಸವ ಚಿತ್ರಗಳು

'ರಾಯಣ್ಣ' ಅದ್ದೂರಿ ಶತದಿನೋತ್ಸವ ಚಿತ್ರಗಳು

By ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ 43 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸುತ್ತಿದೆ. ಈ ಸಡಗರ, ಸಂಭ್ರಮವನ್ನು ಶುಕ್ರವಾರ (ಫೆ.22) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

  ಚಿತ್ರಕ್ಕಾಗಿ ದುಡಿದ ಎಲ್ಲ ತಂತ್ರಜ್ಞರು ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು. ಎಲ್ಲರಿಗೂ ಪೇಟಾ, ಕರಿಕಂಬಳಿ ತೊಡಿಸಿ ಜೊತೆಗೆ ರಾಯಣ್ಣನ ಪ್ರತಿಮೆ ನೀಡಿ ಗೌರವಿಸಲಾಯಿತು. ಕನ್ನಡ ಚಿತ್ರೋದ್ಯಮದಲ್ಲೇ ವಿಭಿನ್ನ ಹಾಗೂ ಅದ್ದೂರಿಯಾಗಿ ನಡೆದ ಶತದಿನೋತ್ಸವ ಕಾರ್ಯಕ್ರಮ ಇದಾಗಿತ್ತು.

  ಒಂದು ಕಡೆ ರಾಯಣ್ಣ ಶತದಿನೋತ್ಸವ ಸಡಗರ ಮತ್ತೊಂದು ಕಡೆ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರಿಗೆ ಹುಟ್ಟುಹಬ್ಬ ಸಂಭ್ರಮ. ಈ ಎರಡೂ ಸಂತಸದಲ್ಲಿ ಅಪ್ಪುಗೋಳ್ ಅವರು ಮೈಮರೆತಿದ್ದರು. ಕೋಡಿಮಠದ ಶ್ರೀಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಚಾಲನೆ ಪಡೆಯಿತು.

  'ರಾಯಣ್ಣ' ಕನಸು ನನಸಾದ ಸಂತಸ

  ಈ ಚಿತ್ರವನ್ನು ತೆಗೆಯಬೇಕು ಎಂದು ಬಹಳ ವರ್ಷಗಳಿಂದ ಕನಸು ಕಂಡಿದ್ದೆ. ಕಡೆಗೂ ಆ ಕನಸು ನನಸಾಯಿತು. ಈ ಚಿತ್ರವನ್ನು ಬಿಡುಗಡೆ ಮಾಡಿದ್ದೇ ದೊಡ್ಡ ಯುದ್ಧ. ಈಗ ಯುದ್ಧ ಮಾಡಿ ಗೆದ್ದ ಖುಷಿಯಲ್ಲಿದ್ದೇನೆ. ನನ್ನ ರಾಯಣ್ಣ (ದರ್ಶನ್) ನನ್ನ ಕೈಬಿಡಲಿಲ್ಲ ಎಂದರು.

  ಕಾರ್ಯಕ್ರಮದಕ್ಕೆ ಬಂದಿದ್ದ ಪ್ರಮುಖರು

  ರೆಬೆಲ್ ಸ್ಟಾರ್ ಅಂಬರೀಶ್, ಜಯಪ್ರದಾ, ಹಿರಿಯ ನಟಿ ಜಯಂತಿ, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ನಿಖಿತಾ, ಶಶಿಕುಮಾರ್, ನಿರ್ದೇಶಕ ಕೇಶವಾದಿತ್ಯ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಂತರು. ಚಿತ್ರದ ಬಗ್ಗೆ ಎಲ್ಲರೂ ತಮ್ಮ ಅನಿಸಿಕೆ ಹಂಚಿಕೊಂಡರು.

  ರಾಯಣ್ಣ 43 ಚಿತ್ರಮಂದಿರಗಳಲ್ಲಿ ಶತದಿನೋತ್ಸವ

  ಸಂಗೊಳ್ಳಿ ರಾಯಣ್ಣ ಚಿತ್ರ 112 ಚಿತ್ರಮಂದಿರಗಳಲ್ಲಿ 35 ದಿನ ಪ್ರದರ್ಶನ ಕಂಡಿದೆ, 74 ಚಿತ್ರಮಂದಿರಗಳಲ್ಲಿ ಅರ್ಧ ಶತಕ ಬಾರಿಸಿದೆ, 52 ಚಿತ್ರಮಂದಿರಗಳಲ್ಲಿ 75 ದಿನಗಳನ್ನು ಪೂರೈಸಿ ಈಗ 43 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸುತ್ತಿದೆ.

  ಭರ್ಜರಿ ಕಲೆಕ್ಷನ್ ಮಾಡಿರುವ ರಾಯಣ್ಣ

  ದರ್ಶನ್ ಅವರ ಪ್ರಕಾರ 75 ದಿನಗಳಲ್ಲಿ ರಾಯಣ್ಣ ಚಿತ್ರ ಸರಿಸುಮಾರು ರು.40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದಿದ್ದಾರೆ. ಆದರೆ ಒಟ್ಟಾರೆ ಗಳಿಕೆ ಎಷ್ಟು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ.

  ಕಿತ್ತೂರಿನಲ್ಲೂ ರಾಯಣ್ಣ ಜಯಭೇರಿ

  ಇನ್ನೊಂದು ವಿಶೇಷ ಎಂದರೆ, ಕಿತ್ತೂರಿನ ಚಿತ್ರಮಂದಿರದಲ್ಲಿ ಎರಡು ಬಾಕ್ಸ್ ಗಳನ್ನು ಇಡಲಾಗಿದ್ದು ಒಂದಕ್ಕೆ ರಾಣಿ ಕಿತ್ತೂರು ಚೆನ್ನಮ್ಮ ಎಂದು ಇನ್ನೊಂದಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದಿಡಲಾಗಿದೆ. ಇದುವರೆಗೂ ಈ ಚಿತ್ರಮಂದಿರಗಲ್ಲಿ ರು.5 ಲಕ್ಷ ಸಂಗ್ರಹವಾಗಿದೆ. ಇಲ್ಲಿ ಸಂಗ್ರಹವಾದ ಹಣವನ್ನು ರಾಯಣ್ಣ ಸಮಾಧಿ ಅಭಿವೃದ್ಧಿಗೆ ವಿನಿಯೋಗಿಸಿಕೊಳ್ಳಲಾಗುತ್ತದೆ ಎಂದು ದರ್ಶನ್ ವಿವರ ನೀಡಿದ್ದಾರೆ.

  ಚಲನಚಿತ್ರೋತ್ಸವಕ್ಕೂ ರಾಯಣ್ಣ

  ಐದನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES-5)ದಲ್ಲೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಪ್ರದರ್ಶನ ಕಂಡಿದೆ.

  ರಿಯಾಯಿತಿ ದರದಲ್ಲಿ ರಾಯಣ್ಣ ಟಿಕೆಟ್

  ರಾಜ್ಯದ ಎಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೇ.50ರ ರಿಯಾಯಿತಿ ದರದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರದ ಟಿಕೆಟ್ ಗಳನ್ನು ವಿತರಿಸಲಾಗಿತ್ತು.

  ವಿಜಯಯಾತ್ರೆಯನ್ನೂ ಮಾಡಿದ ರಾಯಣ್ಣ

  ಸಂಗೊಳ್ಳಿ ರಾಯಣ್ಣ ಚಿತ್ರ 25 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ರಾಜ್ಯದಾದ್ಯಂತ ವಿಜಯಯಾತ್ರೆ ಹಮ್ಮಿಕೊಳ್ಳಲಾಗಿತ್ತು. ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಪುತ್ತೂರು, ಸಕಲೇಶಪುರ, ಮೂಡಿಗೆರೆ, ಚಿಕ್ಕಮಂಗಳೂರು ಹಾಸನ, ಚಾಮರಾಜನಗರ, ಕೊಳ್ಳೆಗಾಲ, ಮಳವಳ್ಳಿ, ಮೈಸೂರು ಹಾಗೂ ಮಂಡ್ಯದಲ್ಲಿ ವಿಜಯಯಾತ್ರೆ ಪೂರೈಸಿತ್ತು.

  English summary
  Challenging Star Darshan lead Kannada film Kranti Veera Sangolli Rayanna celebrats 100 days function in a grand style. Dr Ambarish, Dr Jayaprada, Dr Jayanthi, Sri Kodimath Swamiji, Andna Appugol, Darshan many others attended the event among 3000 invites.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more