Don't Miss!
- News
ಕೊನೆಗೂ ಮದುವೆಯಾಗುತ್ತೇನೆ ಎಂದ ರಾಹುಲ್ ಗಾಂಧಿ, ಹುಡುಗಿ ಬಗ್ಗೆ ಹೀಗಂದ್ರು !
- Technology
ವಾಟ್ಸಾಪ್ನಲ್ಲಿ ಈ ಫೀಚರ್ ನಿಮಗೆ ತುಂಬಾ ನೆರವಾಗುತ್ತೆ!..ಪಕ್ಕಾ ವ್ಹಾವ್ ಅಂತೀರಾ!
- Finance
ತೆರಿಗೆ ಉಳಿಸುವ ಎಫ್ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
- Automobiles
ಬ್ರಿಟನ್ ಪ್ರಧಾನಿಗೆ ಟ್ರಾಫಿಕ್ ಪೊಲೀಸರ ದಂಡ: ಅವರ ವಿಡಿಯೋ ಅವರಿಗೆ ಕುತ್ತಾಯಿತು...
- Sports
ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಟೀಂ ಇಂಡಿಯಾ ಆಟಗಾರರು: ಪಂತ್ ಗುಣಮುಖವಾಗುವಂತೆ ಪ್ರಾರ್ಥನೆ
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ 'ಸಂಗೊಳ್ಳಿ ರಾಯಣ್ಣ' ಫೋಟೋ ಝಲಕ್!
ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಹೊಂದಿರುವ ಅದ್ದೂರಿ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನವೆಂಬರ್ 01, 2012 ರ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಐತಿಹಾಸಿಕ ಚಿತ್ರದ ನಾಯಕರು ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಜೋಡಿಯಾಗಿ ನಿಖಿತಾ ತುಕ್ರಲ್ ನಟಿಸಿದ್ದಾರೆ. ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕಾಣಿಸಿಕೊಂಡಿದ್ದು ಪ್ರಮುಖ ಪಾತ್ರವೊಂದರಲ್ಲಿ ಉಮಾಶ್ರೀ ನಟಿಸಿದ್ದಾರೆ.
ಚಿಂಗಾರಿ ಚಿತ್ರದ ನಂತರ ದರ್ಶನ್ ಚಿತ್ರಕ್ಕಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಈ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಮಹಾ ಪ್ರಸಾದ. ಸುಮಾರು 32 ಕೋಟಿ ರು. ಬಜೆಟ್ ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರವು ಸ್ವಾತಂತ್ರ್ಯ ಯೋಧರಾದ 'ಸಂಗೊಳ್ಳಿ ರಾಯಣ್ಣ'ರ ಕಥೆ ಹೊಂದಿದೆ. ರಾಜ್ಯದಾದ್ಯಂತ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಸಂಗೊಳ್ಳಿ ರಾಯಣ್ಣ' ತೆರೆಗೆ ಬರಲಿದೆ. ಈ ಚಿತ್ರದ ವಿತರಣೆ ಹಕ್ಕುಗಳನ್ನು ಎಚ್ ಡಿ ಗಂಗರಾಜು ಪಡೆದಿದ್ದು ಮೊದಲ ವಾರದಲ್ಲಿ ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗುವುದೆಂಬ ಮಾಹಿತಿ ನೀಡಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಗಿ ದರ್ಶನ್
ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಟಿಸಿದ್ದಾರೆ. ಬರೋಬ್ಬರಿ ರು. 32 ಕೋಟಿ ಖರ್ಚಾಗಿರುವ ಈ ಚಿತ್ರ ಕನ್ನಡದಲ್ಲಿ ನಿರ್ಮಾಣವಾದ ಅತ್ಯಂತ ಅದ್ದೂರಿ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ.

ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ದರ್ಶನ್
ಇದೇ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಮಿಂಚಿರುವ ದರ್ಶನ್ ಈ ಪಾತ್ರವನ್ನು ತಮ್ಮ ಅಭಿಮಾನಿಗಳು ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲದಲ್ಲಿದ್ದಾರೆ. ಸ್ವಾತಂತ್ರ್ಯ ಯೋಧ, ದೇಶಭಕ್ತ ಸಂಗೊಳ್ಳಿ ರಾಯಣ್ಣ ಪಾತ್ರ ದರ್ಶನ್ ವೃತ್ತಿಜೀವನದ ಮೈಲಿಗಲ್ಲಾಗಲಿದೆಯೇ?

ಕುದುರೆಯೇರಿ ಕತ್ತಿವರಸೆಗೂ ಸೈ ಎಂದ ದರ್ಶನ್
ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ದರ್ಶನ್ ಕುದುರೆಯೇರಿ ಭಾರೀ ಸಾಹಸ ಮೆರೆದಿದ್ದಾರೆ. ಈ ಸಂಗೊಳ್ಳಿ ರಾಯಣ್ಣ ಚಿತ್ರವು ನೂರಿನ್ನೂರು ವರ್ಷಗಳ ಹಿಂದಿನ ಕಥೆಯಾಧಾರಿತ ಚಿತ್ರವಾದ್ದರಿಂದ ಸಹಜವಾಗಿಯೇ ದರ್ಶನ್ ಈ ಸಾಹಸಗಳನ್ನು ಕಲಿತು ಮಾಡಿದ್ದಾರೆ.

ಮಲ್ಲಮ್ಮನೊಂದಿಗೆ ನಡೆದ ರಾಯಣ್ಣನ ಮದುವೆ
ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಮಲ್ಲಮ್ಮ ಪಾತ್ರಧಾರಿ ನಿಖಿತಾ ತುಕ್ರಲ್ ಅವರೊಂದಿಗೆ ರಾಯಣ್ಣ ಪಾತ್ರಧಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದುವೆ ನಡೆದಿದೆ. ಕಮರ್ಷಿಯಲ್ ದೃಷ್ಟಿಯಿಂದ ಚಿತ್ರದಲ್ಲಿ ಅಂಶವನ್ನು ಸೇರಿಸಬೇಕಾದ ಅನಿವಾರ್ಯತೆಯಿತ್ತು ಎಂದಿದೆ ಚಿತ್ರತಂಡ.

ಮಲ್ಲಮ್ಮ ಪಾತ್ರದಲ್ಲಿ ಮಿಂಚಿರುವ ನಿಖಿತಾ ನೋಟ!
ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಮಲ್ಲಮ್ಮನ ಪಾತ್ರದಲ್ಲಿ ಗಮನಸೆಳೆಯಲಿದ್ದಾರೆ ನಟಿ ನಿಖಿತಾ ತುಕ್ರಲ್. ಈ ಚಿತ್ರದಲ್ಲಿ ನಿಖಿತಾ ನಟನೆ ಅದೆಷ್ಟು ಗಮನಸೆಳೆಯಲಿದೆ ಎಂಬುದೀಗ ಎಲ್ಲರ ಕುತೂಹಲದ ಸಂಗತಿ.

ಕನ್ನಡದ ಬಿಗ್ ಬಜೆಟ್ ಚಿತ್ರದಲ್ಲಿ ಮದುಮಗ ದರ್ಶನ್
ಕನ್ನಡದ ಬಿಗ್ ಬಜೆಟ್ ಚಿತ್ರವೆಂಬ ಹಣೆಪಟ್ಟಿಯೊಂದಿಗೆ ತೆರೆಗೆ ಬರಲಿರುವ ಈ ಚಿತ್ರವನ್ನು ಬೆಳಗಾವಿಯ ರಾಯಣ್ಣ ಮಹಾ ಅಭಿಮಾನಿಯಾಗಿರುವ ನಿರ್ಮಾಪಕ ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹಾಕಿದ ಹಣ ವಾಪಸ್ ಪಡೆದುಕೊಳ್ಳುವ ಬಗ್ಗೆ ತಮಗೆ ಆಸಕ್ತಿಯಲ್ಲ ಎಂದಿದ್ದಾರೆ ಆನಂದ್ ಅಪ್ಪುಗೋಳ್.

ನೀರಿನಲ್ಲಿ ನಿಂತು ಬಡಿದಾಡುತ್ತಿರುವ 'ರಾಯಣ್ಣ' ದರ್ಶನ್
ಐತಿಹಾಸಿಕ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ದರ್ಶನ್ ದೇಶಭಕ್ತ ಹಾಗೂ ಸ್ವಾತಂತ್ರ್ಯ ಯೋಧ ರಾಯಣ್ಣನ ಪಾತ್ರಧಾರಿಯಾಗಿ ನೀರಿನಲ್ಲೂ ಕಾಲಿಟ್ಟು ಕಾದಾಡಿದ್ದಾರೆ. ರಾಯಣ್ಣನ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ದರ್ಶನ್ ಸಾಕಷ್ಟು ಶ್ರಮವಹಿಸಿದ್ದಾರೆ.

ಖಡ್ಗದಿಂದ ಮಿಂಚಿನ ಬೆಳಕು ಹರಿಸಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವು ಹಿಡಿದಿರುವ ಖಡ್ಗದಿಂದ ಮಿಂಚಿನ ಬೆಳಕನ್ನು ಹರಿಸಿದ್ದಾರೆ. ಸಂಗೊಳ್ಳಿ ರಾಯಣ್ಣರ ಯುದ್ಧ ಕೌಶಲ್ಯ ಹಾಗೂ ಅಸಾಮಾನ್ಯ ಪೌರುಷಕ್ಕೆ ಸಾಕ್ಷಿಯೆಂಬಂತೆ ಮಿಂಚಿನ ಬೆಳಕನ್ನು ಬೀರುತ್ತಿದೆ ದರ್ಶನ್ ಹಿಡಿದಿರುವ ಖಡ್ಗ.

ಕಿತ್ತೂರು ಚೆನ್ನಮ್ಮನಾಗಿ ಹೋರಾಡಿದ ಜಯಪ್ರದಾ
ಐತಿಹಾಸಿಕ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಚೆನ್ನಮ್ಮನಾಗಿ ಅಸಾಮಾನ್ಯ ಹೋರಾಟದ ದೃಶ್ಯಗಳಲ್ಲಿ ಭಾಗವಹಿಸಿ ಗಮನಸೆಳೆಯಲಿದ್ದಾರೆ ಹಿರಿಯ ನಟಿ ಜಯಪ್ರದಾ. ಚಿತ್ರದಲ್ಲಿ ಮಾಡಿರುವ ಚೆನ್ನಮ್ಮನ ಪಾತ್ರ ತಮಗೆ ಭಾರಿ ಖುಷಿ ನೀಡಿದೆ ಎಂದಿದ್ದಾರೆ ನಟಿ ಜಯಪ್ರದಾ.

ದರ್ಶನ್ 'ರಾಯಣ್ಣ'ದ ವಿಶೇಷ ಪಾತ್ರದಲ್ಲಿ ಉಮಾಶ್ರೀ
ಈಗಾಗಲೇ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ನಟಿ ಉಮಾಶ್ರೀ, ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡಿ ಅದೇನೆಂದು ತಿಳಿಯಿರಿ...
ಕಳೆದ ಎರಡು ವರ್ಷಗಳಿಂದ ಈ ಚಿತ್ರದ ಚಿತ್ರೀಕರಣವನ್ನು ನಡೆಸಲಾಗುತ್ತಿದೆ. ಅದ್ದೂರಿ ಸೆಟ್ ಗಳು, ಹಾಗೂ ಮೇಕಿಂಗ್ ಮೂಲಕ ಈ ಚಿತ್ರವು ಭಾರೀ ಅದ್ದೂರಿಯಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನು ಸ್ವಾತಂತ್ರ್ಯ ಪೂರ್ವಕ್ಕೆ ಕರೆದೊಯ್ಯಲಿದೆ ಎನ್ನಲಾಗುತ್ತಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 'ಯು/ಎ' ಸರ್ಟಿಫಿಕೇಟ್ ನೀಡಿದೆ. ದೇಶಭಕ್ತ ಸಂಗೊಳ್ಳಿ ರಾಯಣ್ಣ ಕುರಿತಾದ ಈ ಚಿತ್ರವನ್ನು ರಾಯಣ್ಣರ ಮಹಾ ಅಭಿಮಾನಿ ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ.
ಈ ಚಿತ್ರಕ್ಕೆ ನಿರ್ಮಾಪಕ ಆನಂದ್ ಅಪ್ಪಗೋಳ್ ಬರೋಬ್ಬರಿ ರು. 32 ಕೋಟಿ ಹಣ ಹಾಕಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಲಾಗಿರುವ 'ಅದ್ದೂರಿ' ಚಿತ್ರವೆಂಬ ಪಟ್ಟವನ್ನು ಈ 'ಸಂಗೊಳ್ಳಿ ರಾಯಣ್ಣ' ಚಿತ್ರ ಪಡೆದುಕೊಂಡಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೇ, ಮುಂಬೈ, ಪುಣೆ, ಗೋವಾಗಳಲ್ಲಿಯೂ ಬಿಡುಗಡೆ ಮಾಡಲಾಗುವುದು. ನಿರ್ಮಾಪಕ ಆನಂದ್ ಅಪ್ಪುಗೋಳ್ ಗೆಳೆಯರು ಇದನ್ನು ಬ್ರಿಟನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲೂ ಕೂಡ ಬಿಡುಗಡೆ ಮಾಡಲಿದ್ದಾರಂತೆ.
ಚಿತ್ರದ ಬಗ್ಗೆ ಮಾತನಾಡಿರುವ ನಿರ್ಮಾಪಕ ಆನಂದ್ ಅಪ್ಪುಗೋಳ್ "ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ಹಾಗೂ ದೇಶಭಕ್ತರಿಗಾಗಿಯೇ ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ. ಹಾಕಿದ ಬಜೆಟ್ ಬಗ್ಗೆ ಯಾವುದೇ ಚಿಂತೆಯೂ ನನಗಿಲ್ಲ. ಹಣ ವಾಪಸ್ ಬಾರದಿದ್ದರೆ ಚಿಂತೆಯಾಗದು. ಚಿತ್ರದಿಂದ ನೂರು ಕೋಟಿ ರೂಪಾಯಿ ಲಾಭ ಬಂದರೂ ಸಂತಸವಾಗದು. ರಾಯಣ್ಣನ ಚಿತ್ರ ಮಾಡಬೇಕೆಂಬ ಕನಸಿತ್ತು, ಮಾಡಿದ್ದೇನೆ ಅಷ್ಟೇ" ಅಂದಿದ್ದಾರೆ
ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ನಟಿಸಿರುವ ಈ ಚಿತ್ರದಲ್ಲಿ ಮಲ್ಲಮ್ಮನಾಗಿ ತಾರೆ ನಿಖಿತಾ ತುಕ್ರಲ್ ನಟಿಸಿದ್ದಾರೆ. ಕಿತ್ತೂರು ಚೆನ್ನಮ್ಮನಾಗಿ ಡಾ. ಜಯಪ್ರದಾ, ಸೇರಿದಂತೆ ಶ್ರೀನಿವಾಸಮೂರ್ತಿ, ಉಮಾಶ್ರೀ, ಬ್ಯಾಂಕ್ ಜನಾರ್ದನ್, ಶಶಿಕುಮಾರ್ ಒಳಗೊಂಡಂತೆ 25ಕ್ಕೂ ಹೆಚ್ಚು ಕಲಾವಿದರ ಬಳಗವೇ ಚಿತ್ರದಲ್ಲಿದೆ. ನಾಗಣ್ಣ ನಿರ್ದೇಶನದ ಚಿತ್ರಕ್ಕೆ ಯಶೋವರ್ಧನ್ ಅವರ ಸಂಗೀತ ಹಾಗೂ ಕೇಶವಾದಿತ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)