For Quick Alerts
  ALLOW NOTIFICATIONS  
  For Daily Alerts

  ರಾಜ್ಯಾದ್ಯಂತ 'ಕ್ರಾಂತಿ' ಪ್ರಚಾರ ಕಹಳೆ: ಸದ್ದಿಲ್ಲದೇ ಹೈದರಬಾದ್‌ನಲ್ಲಿ 'D56' ಶೂಟಿಂಗ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಪ್ರಚಾರವನ್ನು ಚಿತ್ರತಂಡ ಶುರು ಮಾಡಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತ್ತು. ಜನವರಿ 26ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರ್ತಿದೆ.

  ಅಭಿಮಾನಿಗಳನ್ನು ಚಿತ್ರತಂಡ ಬಹಳ ಸತಾಯಿಸಿತ್ತು. ಶೂಟಿಂಗ್ ಕಂಪ್ಲೀಟ್ ಆಗುವವರೆಗೂ ಸಿನಿಮಾ ಬಗ್ಗೆ ಮಾತನಾಡುವುದಿಲ್ಲ ಎಂದು ಪಟ್ಟಹಿಡಿದಿತ್ತು. ಇದೀಗ ಆ ಸಮಯ ಬಂದಿದೆ. ಚಿತ್ರದ ಒಂದಷ್ಟು ಹೊಸ ಪೋಸ್ಟರ್‌ಗಳು ಕೂಡ ರಿಲೀಸ್ ಆಗಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್‌ ಮಿಂಚಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

  'ಮೇರಾ ಕುತ್ತಾ ಮೇರಾ ಗಲಿಮೇ ಶೇರ್ ಅನ್ನೋ ಜಾತಿಗೆ ಸೇರಿದವನು': ದರ್ಶನ್ 'ಕ್ರಾಂತಿ''ಮೇರಾ ಕುತ್ತಾ ಮೇರಾ ಗಲಿಮೇ ಶೇರ್ ಅನ್ನೋ ಜಾತಿಗೆ ಸೇರಿದವನು': ದರ್ಶನ್ 'ಕ್ರಾಂತಿ'

  ಕಳೆದ ಹಲವು ತಿಂಗಳುಗಳಿಂದ ಅಭಿಮಾನಿಗಳು ಸ್ವಯಂಪ್ರೇರಿತರಾಗಿ 'ಕ್ರಾಂತಿ' ಸಿನಿಮಾ ಪ್ರಚಾರ ಮಾಡುತ್ತಾ ಬಂದಿದ್ದರು. ಅಭಿಮಾನಿಗಳ ಪ್ರೀತಿಗೆ ಚಾಲೆಂಜಿಂಗ್ ಸ್ಟಾರ್ ಖುಷಿಯಾಗಿದ್ದರು. ಇದೀಗ ಚಿತ್ರತಂಡ ಪ್ರಚಾರ ಕೆಲಸಕ್ಕೆ ಚಾಲನೆ ನೀಡಿದೆ.

  ರಾಜ್ಯಾದ್ಯಂತ ಪ್ರಚಾರ ಬಂಡಿ ಸುತ್ತಾಟ

  ರಾಜ್ಯಾದ್ಯಂತ ಪ್ರಚಾರ ಬಂಡಿ ಸುತ್ತಾಟ

  ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಟ್ಯಾಬ್ಲೋ ಮಾದರಿಯಲ್ಲಿ 'ಕ್ರಾಂತಿ' ಬ್ಯಾನರ್‌ಗಳಿಂದ ತುಂಬಿದ ಬಂಡಿಯೊಂದು ರಾಜ್ಯಾದ್ಯಂತ ಸುತ್ತಾಟ ಶುರು ಮಾಡಿದೆ. ಇಂದು ಹೊಸಕೋಟೆ, ರಾಮನಗರಕ್ಕೆ ಈ ಪ್ರಚಾರದ ಬಂಡಿ ಹೋಗುತ್ತಿದೆ. 'ಕ್ರಾಂತಿ' ಸಿನಿಮಾ ಬಗ್ಗೆ ಸಾರಿ ಸಾರಿ ಹೇಳಲಿದೆ. ಇನ್ನು 70 ದಿನಗಳ ಕಾಲ ರಾಜ್ಯದ ಮೂಲೆ ಮೂಲೆಗೆ ಈ ರೀತಿ ಪ್ರಚಾರ ನಡೆಯಲಿದೆ.

  'ಕ್ರಾಂತಿ' ರೀ ಶೂಟ್.. ಹೊಸ ರಿಲೀಸ್ ಡೇಟ್ ಫಿಕ್ಸ್: ಪೋಸ್ಟರ್ ಡಿಸೈನರ್ ಬದಲಾದ್ರಾ?'ಕ್ರಾಂತಿ' ರೀ ಶೂಟ್.. ಹೊಸ ರಿಲೀಸ್ ಡೇಟ್ ಫಿಕ್ಸ್: ಪೋಸ್ಟರ್ ಡಿಸೈನರ್ ಬದಲಾದ್ರಾ?

  ಹೊಸ ಪೋಸ್ಟರ್‌ಗಳ ಬಗ್ಗೆಯೂ ಬೇಸರ

  ಹೊಸ ಪೋಸ್ಟರ್‌ಗಳ ಬಗ್ಗೆಯೂ ಬೇಸರ

  ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದು. ಅದಕ್ಕೆ ತಕ್ಕಂತೆ ಮೇಕಿಂಗ್, ಪೋಸ್ಟರ್, ಟೀಸರ್- ಟ್ರೈಲರ್ ಕಟ್ ಎಲ್ಲಾ ಇರಬೇಕು. ಆದರೆ ಈ ವಿಚಾರದಲ್ಲಿ 'ಕ್ರಾಂತಿ' ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಲೇ ಬರುತ್ತಿದೆ. ಈ ಹಿಂದೆ ಬಂದ ಪೋಸ್ಟರ್‌ಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ನಂತರ ಡಿಸೈನರ್ ಚೇಂಜ್ ಆಗುತ್ತಾರೆ ಎನ್ನಲಾಗಿತ್ತು. ಹಾಗಾಗಿ ಹೊಸ ಪೋಸ್ಟರ್‌ಗಳ ಬಗ್ಗೆ ನಿರೀಕ್ಷೆ ಇತ್ತು. ಆದರೆ ಮತ್ತೊಮ್ಮೆ ನಿರಾಸೆ ಆಗಿದೆ.

  ಬೇರೆ ಬೇರೆ ಊರಿನಲ್ಲಿ ಸಾಂಗ್ ರಿಲೀಸ್

  ಬೇರೆ ಬೇರೆ ಊರಿನಲ್ಲಿ ಸಾಂಗ್ ರಿಲೀಸ್

  ಇನ್ನು ಅಭಿಮಾನಿಗಳ ಸಮ್ಮುಖದಲ್ಲಿ 'ಕ್ರಾಂತಿ' ಸಿನಿಮಾ ಸಾಂಗ್ಸ್ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಚಿಂತನೆ ನಡೆಸಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಸ್ವತಃ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಾಜ್ಯದ ಬೇರೆ ಬೇರೆ ಊರಿಗೆ ತೆರಳಿ ಅಭಿಮಾನಿಗಳ ಮಧ್ಯೆ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಈ ಬಾರಿ 'ಕ್ರಾಂತಿ' ಪ್ರಚಾರವನ್ನು ಹೊಸ ರೀತಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ.

  ಹೈದರಾಬಾದ್‌ನಲ್ಲಿ 'D56' ಶೂಟಿಂಗ್

  ಹೈದರಾಬಾದ್‌ನಲ್ಲಿ 'D56' ಶೂಟಿಂಗ್

  'ಕ್ರಾಂತಿ' ನಂತರ ತರುಣ್ ಸುಧೀರ್ ನಿರ್ದೇಶನದ 'D56' ಚಿತ್ರದಲ್ಲಿ ದರ್ಶನ್ ಬಣ್ಣ ಹಚ್ಚಿದ್ದಾರೆ. ಕೆಲ ದಿನಗಳ ಹಿಂದೆ ರಾಕ್‌ಲೈನ್ ಸ್ಟುಡಿಯೋದಲ್ಲಿ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿತ್ತು. ಈಗ ಹೈದರಾಬಾದ್‌ನಲ್ಲಿ 2ನೇ ಶೆಡ್ಯೂಲ್ ಶುರುವಾಗಿದೆ. ಮಾಲಾಶ್ರೀ ಪುತ್ರಿ ರಾಧನಾ ರಾಮ್ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.

  English summary
  Darshan Starrer Kranti team kick starts promotions D56 new shooting schedule begins in Hyderabad. Know More.
  Thursday, November 3, 2022, 9:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X