For Quick Alerts
  ALLOW NOTIFICATIONS  
  For Daily Alerts

  ''ನೀನು ಮಾಸ್ ಅಂದ್ರೆ, ನಾನು......'': ರಾಬರ್ಟ್ ಡೈಲಾಗ್ ಹಿಂದಿನ ಕಥೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂದ್ರೆನೇ ಮಾಸ್. ದರ್ಶನ್ ಅಂದಾಕ್ಷಣ ಫಟ್ ಅಂತ ನೆನಪಾಗುವುದು ಮಾಸ್ ಇಮೇಜ್. ಆರಡಿ ಎತ್ತರದ ಆಜಾನುಬಾಹು. ಮೆಜೆಸ್ಟಿಕ್, ದಾಸ, ಕಲಾಸಿಪಾಳ್ಯ, ಸುಂಟರಗಾಳಿ, ಗಜ ಈಗ ರಾಬರ್ಟ್‌ವರೆಗೂ ಡಿ ಬಾಸ್ ಅಂದ್ರೆ ಮಾಸ್ ಎಂಟರ್‌ಟೈನರ್. ಕರ್ನಾಟಕದಲ್ಲಿ ಅತಿ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ನಟ ಡಿ ಬಾಸ್ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ.

  ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗಿರುವ ರಾಬರ್ಟ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ದಾಸನ ಹುಟ್ಟುಹಬ್ಬದ ವಿಶೇಷವಾಗಿ ಟ್ರೈಲರ್ ರಿಲೀಸ್ ಆಗಿದ್ದು, ರಾಬರ್ಟ್ ಡೈಲಾಗ್‌ಗಳು ಭರ್ಜರಿ ಸದ್ದು ಮಾಡ್ತಿದೆ. ''ಹೇ....ತುಕಾಲಿ, ನೀನು ಮಾಸ್ ಆದ್ರೆ.....ನಾನು....'' ಎಂದು ಹೇಳುವ ಡಿ ಬಾಸ್ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಮುಂದೆ ಓದಿ...

  ಡಿ ಬಾಸ್ ಅಭಿಮಾನಿಯೇ 'ರಾಬರ್ಟ್'ಗೆ ಡೈಲಾಗ್ ರೈಟರ್

  ರಾಬರ್ಟ್ ಡೈಲಾಗ್ ರೈಟರ್ ಯಾರು?

  ರಾಬರ್ಟ್ ಡೈಲಾಗ್ ರೈಟರ್ ಯಾರು?

  ರಾಬರ್ಟ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಮಾಡಿರುವುದು ನಿರ್ದೇಶಕ ತರುಣ್ ಸುಧೀರ್. ಆದರೆ, ಸಂಭಾಷಣೆಯನ್ನು ಇಬ್ಬರು ಯುವ ಪ್ರತಿಭೆಗಳು ಬರೆದಿದ್ದಾರೆ. ಮಜಾಟಾಕೀಸ್ ಖ್ಯಾತಿಯ ರಾಜಶೇಖರ್ ಹಾಗೂ ಕೆಜಿಎಫ್ ಖ್ಯಾತಿಯ ಚಂದ್ರಮೌಳಿ. ಟ್ರೈಲರ್‌ನಲ್ಲೇ ಈ ಮಟ್ಟಕ್ಕೆ ಕ್ರೇಜ್ ಹುಟ್ಟಿಸಿರುವ ರಾಬರ್ಟ್ ಸಿನಿಮಾದಲ್ಲಿ ಯಾವ ರೀತಿ ಡೈಲಾಗ್‌ಗಳು ಇರಲಿದೆ ಎಂಬ ಕುತೂಹಲ ಕಾಡ್ತಿದೆ.

  ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು

  ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು

  ಟ್ರೈಲರ್ ಆರಂಭದಲ್ಲಿ ವಿಲನ್ ಹೇಳುವ ಡೈಲಾಗ್ ಇದು. ಬಹುಶಃ ಈ ಡೈಲಾಗ್ ಹೇಳುವುದು ನಟ ರವಿಕಿಶನ್ ಎಂದೆನಿಸುತ್ತಿದೆ.

  ಡೈಲಾಗ್ 1:

  ''ನನ್ನನ್ನು ಸಂಹಾರ ಮಾಡ್ತೀನಿ ಬರೋನು,

  ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು.....

  ನನಗಿಂತ ಟೆರರ್ ಆಗಿರಬೇಕು....

  ನನಗಿಂತ ವೈಲೈಂಟ್ ಆಗಿರಬೇಕು.....

  ಆ ಥರದವನು ಈ ಭೂಮಿ ಮೇಲೆ ಇದ್ದಾನಾ....ಇದ್ದಾನಾ....?''

  'ರಾಬರ್ಟ್'ಗೆ ಸಂಭಾಷಣೆ ಬರೀತಿರೋದು ಒಬ್ಬರಲ್ಲ ಇಬ್ಬರು!

  ಹೀರೋ ಆಗ್ಬೇಕು ಅಂತಂದ್ರೆ

  ಹೀರೋ ಆಗ್ಬೇಕು ಅಂತಂದ್ರೆ

  ''ಒಬ್ಬರ ಲೈಫ್‌ನಲ್ಲಿ ನಾವು ಹೀರೋ ಆಗ್ಬೇಕು ಅಂತಂದ್ರೆ, ಇನ್ನೊಬ್ಬರ ಲೈಫ್‌ನಲ್ಲಿ ವಿಲನ್ ಆಗಲೇಬೇಕು....'' ಎಂದು ದರ್ಶನ್ ಹೇಳುವ ಈ ಡೈಲಾಗ್‌ಗೆ ಈ ಡಿ ಭಕ್ತಗಣದಲ್ಲಿ ಟ್ರೆಂಡಿಂಗ್ ಆಗಿದೆ.

  ಜಗಪತಿ ಬಾಬು ಡೈಲಾಗ್

  ಜಗಪತಿ ಬಾಬು ಡೈಲಾಗ್

  ''ಮನುಷ್ಯನಿಗೆ ಎರಡು ಸಲ ಮೈ ನಡುಗುತ್ತೆ....

  ಒಂದು, ತುಂಬಾ ಚಳಿ ಆದಾಗ,....

  ಇನ್ನೊಂದು ತುಂಬಾ ಭಯ ಆದಾಗ....'' ಎಂದು ಜಗಪತಿ ಬಾಬು ಹೇಳುವ ಡೈಲಾಗ್ ರಾಬರ್ಟ್ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

  ನೀನು ಮಾಸ್ ಆದ್ರೆ,,,,ನಾನು....

  ನೀನು ಮಾಸ್ ಆದ್ರೆ,,,,ನಾನು....

  ''ನಾವು ನೋಡೋಕೆ ಮಾತ್ರ ಕ್ಲಾಸ್,,,,ವಾರ್‌ಗೆ ಇಳಿದ್ರೆ ಫುಲ್ ಮಾಸ್.....'' ಎಂದು ವಿಲನ್ ಡೈಲಾಗ್ ಹೊಡಿತಾನೆ. ಅದಕ್ಕೆ ತಿರುಗೇಟು ನೀಡುವ ರಾಬರ್ಟ್ ''ಹೇ ತುಕಾಲಿ,,,ನೀನು ಮಾಸ್ ಆದ್ರೆ, ನಾನು ಆ ಮಾಸ್‌ಗೆ.........'' ಎನ್ನುವ ಡೈಲಾಗ್ ಹೆಚ್ಚು ಸದ್ದು ಮಾಡ್ತಿದೆ. ಡಿ ಬಾಸ್‌ಗೆ ಹೇಳಿ ಮಾಡಿಸಿದಂತಿದೆ ಈ ಡೈಲಾಗ್ ಎಂದು ಅಭಿಮಾನಿಗಳು ಖುಷ್ ಆಗಿದ್ದಾರೆ.

  ಶಬರಿ ಮತ್ತು ರಾವಣ

  ಶಬರಿ ಮತ್ತು ರಾವಣ

  ಟ್ರೈಲರ್‌ ಕೊನೆಯಲ್ಲಿ ಬರುವ ಡೈಲಾಗ್ ಸಹ ಮರೆಯುವಂತಿಲ್ಲ. ''ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು....ರಾವಣನ ಮುಂದೆ ಗೆಲ್ಲೋದು ಗೊತ್ತು.....ಕೌಂಡೌನ್ ಸ್ಟಾರ್ಟ್‌'' ಎಂದು ಡಿ ಬಾಸ್ ಹೇಳುವ ಡೈಲಾಗ್ ರಾಬರ್ಟ್ ಮೇಲೆ ಹೆಚ್ಚಿನ ಕುತೂಹಲ ಮೂಡಿಸಿದೆ.

  ದಾಸನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಸ್ಟಾರ್ ಗಳು | Filmibeat Kannada
  English summary
  Challenging star Darshan Starrer Roberrt Movie Dialogues sounding in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X