»   » ದೂರದ ದೇಶದಿಂದಲೇ ಕಾವೇರಿಗೆ ದರ್ಶನ್ ಬೆಂಬಲ

ದೂರದ ದೇಶದಿಂದಲೇ ಕಾವೇರಿಗೆ ದರ್ಶನ್ ಬೆಂಬಲ

Posted By:
Subscribe to Filmibeat Kannada
ಕರ್ನಾಟಕದ ಜೀವನದಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಇಡೀ ಕನ್ನಡ ಚಿತ್ರೋದ್ಯಮ ಶನಿವಾರ (ಅ.6) ಫಿಲಂ ಚೇಂಬರ್ ಮುಂದೆ ಸೇರಿ ಪ್ರತಿಭಟಿಸಿತು. ಇಂದು ನಡೆದ ಕಾವೇರಿ ಹೋರಾಟಕ್ಕೆ ಹಾಗೂ ಕರ್ನಾಟಕ ಬಂದ್‌ಗೆ ಸಮಸ್ತ ಕನ್ನಡ ಚಿತ್ರೋದ್ಯಮ ಒಕ್ಕೊರಲಿನಿಂದ ಧ್ವನಿಗೂಡಿಸಿ ಬೆಂಬಲ ವ್ಯಕ್ತಪಡಿಸಿತು.

ಆದರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾತ್ರ ಎಲ್ಲೂ ಕಾಣದೆ ಇದ್ದದ್ದು ಅವರ ಕೋಟ್ಯಾಂತರ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಸದ್ಯಕ್ಕೆ ಅವರು 'ಬುಲ್ ಬುಲ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿದೆ.

ಆದಕಾರಣ ಅವರು ಕಾವೇರಿ ಹೋರಾಟಕ್ಕೆ ಬರಲು ಸಾಧ್ಯವಾಗಲಿಲ್ಲ. ಟಿವಿ ವಾಹಿನಿಗಳಿಗೆ ಅಲ್ಲಿಂದಲೇ ಕರೆ ಮಾಡಿದ ಅವರು ಕಾವೇರಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಕಾವೇರಿ ನನ್ನೊಬ್ಬನದಲ್ಲ. ಇದು ನಮ್ಮೆಲ್ಲರದ್ದು. ಕಾವೇರಿ ಎಂದೆಂದಿಗೂ ಕರ್ನಾಟಕದ ಸ್ವತ್ತು. ಶಾಂತಿಯುತವಾಗಿ ನಾವೆಲ್ಲರೂ ಹೋರಾಡೋಣ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.

ಕಲಾವಿದರ ಸಂಘದ ಅಧ್ಯಕ್ಷರಾದ ಅಂಬರೀಶ್ ಅವರ ನೇತೃತ್ವದಲ್ಲಿಇಡೀ ಚಲನಚಿತ್ರೋದ್ಯಮವು ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಬೆಳಗ್ಗೆ 11.30 ಗಂಟೆಗೆ ಸಭೆಸೇರಿ ಮೌನ ಪಾದಯಾತ್ರೆ ನಡೆಸಿತು. ಬಳಿಕ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಚಿತ್ರೋದ್ಯಮದ ಮನವಿಯನ್ನು ಸಲ್ಲಿಸಲಾಯಿತು. (ಒನ್ಇಂಡಿಯಾ ಕನ್ನಡ)

English summary
Kannada actor Challenging Star Darshan supports Cauvery protest and Karnataka Bandh from Switzerland, he is busy in shooting for his upcoming film Bulbul. Meanwhile Kannada film industry observing Bandh on 6th October in protest against against the Prime Minister’s directive to the State to release 9,000 cusecs of water every day to Tamil Nadu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada