»   » ಅಭಿಮಾನಿಗಳು ಕೊಡುತ್ತಿರುವ ಭಿಕ್ಷೆ ಇದು: 'ದರ್ಶನ್ ಹೀಗೆ ಹೇಳಿದ್ಯಾಕೆ?

ಅಭಿಮಾನಿಗಳು ಕೊಡುತ್ತಿರುವ ಭಿಕ್ಷೆ ಇದು: 'ದರ್ಶನ್ ಹೀಗೆ ಹೇಳಿದ್ಯಾಕೆ?

Written By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಎಲ್ಲೆಲ್ಲೂ 'ಚಕ್ರವರ್ತಿ'ಯ ಕ್ರೇಜ್ ಜೋರಾಗಿದೆ.['ಚಕ್ರವರ್ತಿ' ಟಿಕೆಟ್ ಈಗಲೇ ಬುಕ್ ಮಾಡಿ, ಸ್ವಲ್ಪ ಲೇಟಾದ್ರು ನಿರಾಸೆ ಗ್ಯಾರೆಂಟಿ!]

ಮೂರು ಬಗೆಯ ವಿಭಿನ್ನ ಶೇಡ್, ಡೈಲಾಗ್ ಇಲ್ಲದ ಟ್ರೈಲರ್, ಅಂಡರ್ ವರ್ಲ್ಡ್ ಕಥೆ ಹೀಗೆ ಪ್ರತಿಯೊಂದು ವಿಷ್ಯದಲ್ಲೂ ಕುತೂಹಲ ಹುಟ್ಟಿಸಿರುವ 'ಚಕ್ರವರ್ತಿ' ಬಗ್ಗೆ ಮೊದಲ ಬಾರಿಗೆ ದರ್ಶನ್ ಮಾತನಾಡಿದ್ದಾರೆ. 'ಚಕ್ರವರ್ತಿ' ಚಿತ್ರದ ಬಿಡುಗಡೆಗೂ ಮುಂಚೆ ದಾಸ ದರ್ಶನ್ ಮಾತನಾಡಿದ್ದು, ಚಿತ್ರದ ಬಗ್ಗೆ ಹಲವು ವಿಷ್ಯಗಳನ್ನ ಹಂಚಿಕೊಂಡರು. ಮುಂದೆ ಓದಿ.....

'ಚಕ್ರವರ್ತಿ' ಯಾವ ವಿಭಾಗದ ಸಿನಿಮಾ?

''ಚಕ್ರವರ್ತಿ' ಭೂಗತ ಲೋಕದ ಕಥೆಯಿದೆ. ಅದರಲ್ಲೊಂದು ಪ್ರೇಮಕಥೆಯಿದೆ. ಅಂಡರ್ ವರ್ಲ್ಡ್ ಅಂದಾಕ್ಷಣ ಬರಿ ಹೊಡೆದಾಟ, ಬಡಿದಾಟವಲ್ಲದೇನೆ ಬೇರೆ ಇದೆ. 80ರ ದಶಕದಿಂದ ಇಲ್ಲಿಯವರೆಗೂ ಏನೆಲ್ಲ ಬಂತೋ ಅದೆಲ್ಲ ಈ ಚಿತ್ರದಲ್ಲಿದೆ'' - ದರ್ಶನ್, ನಟ ['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

80ರ ದಶಕದ ಕಥೆ, ಯಾವ ರೀತಿ ಚಾಲೆಂಜ್ ಆಗಿತ್ತು?

''80ರ ದಶಕವನ್ನ ತೋರಿಸವುದು ಸ್ವಲ್ಪ ಕಷ್ಟನೇ ಆಯ್ತು. ಯಾಕಂದ್ರೆ ಯಾವುದು ವಾಹನಗಳು ಸಿಕ್ತಾ ಇರಲಿಲ್ಲ. ಅಂಬಾಸೆಡರ್, ಮಾರುತಿ ವ್ಯಾನ್ ಹೀಗೆ ಎಲ್ಲವೂ ಹುಡುಕುವುದು ಕಷ್ಟ ಆಗಿತ್ತು'' - ದರ್ಶನ್, ನಟ [ 'ಮಲ್ಟಿಪ್ಲೆಕ್ಸ್' ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆ ಬರೆದ 'ಚಕ್ರವರ್ತಿ]

ಬಹುದೊಡ್ಡ ತಾರಬಳಗ. ಹೇಗಿತ್ತು ಅವರ ಜೊತೆ ಕೆಲಸ ಮಾಡಿದ ಅನುಭವ?

''9 ಜನ ಪ್ರಮುಖ ನಟರ ಜೊತೆಯಲ್ಲಿ ನಾನು ಅಭಿನಯಿಸಿರುವುದು ನನಗೆ ಸಿಕ್ಕ ಭಾಗ್ಯ. ಕುಮಾರ್ ಬಂಗಾರಪ್ಪ ಅವರು ಜೊತೆ ನಾನು ಆಕ್ಟ್ ಮಾಡಿದ್ದು ನನ್ನ ಪುಣ್ಯ ಅಂತಾನೇ ಹೇಳ್ಬಹುದು. ದೀಪಾ ಸನ್ನಿಧಿ ಅವರು ಎರಡನೇ ಬಾರಿ ನನ್ನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚೆನ್ನಾಗಿ ಇದೆ ಕಾಂಬಿನೇಷನ್. ಉಳಿದಂತೆ ಎಲ್ಲರೂ ಅದ್ಬುತವಾಗಿ ಅವರ ಪಾತ್ರಗಳಿಗೆ ತಕ್ಕ ನ್ಯಾಯ ಕೊಟ್ಟಿದ್ದಾರೆ. ತೆರೆ ಮೇಲೆ ನೋಡಿದ್ರೆ ಅದು ಗೊತ್ತಾಗುತ್ತೆ'' - ದರ್ಶನ್, ನಟ ['ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!]

ಮೊದಲ ಬಾರಿಗೆ ನಿಮ್ಮ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದಾರೆ?

''ಅರ್ಜುನ್ ಜನ್ಯ ಅವರ ಜೊತೆಯಲ್ಲಿ ಮೊದಲ ಸಿನಿಮಾ. ತುಂಬಾ ಖುಷಿ ಆಯಿತು. ತುಂಬಾ ಒಳ್ಳೊಳ್ಳೆ ಹಾಡುಗಳು ಕೊಟ್ಟಿದ್ದಾರೆ. ಚಕ್ರವರ್ತಿಗಾಗಿ ಹೆಚ್ಚು ಒಲವು ತೋರಿಸಿ ಸಂಗೀತ ಮಾಡಿದ್ದಾರೆ. ಪ್ರತಿಯೊಂದು ಸೀನ್ ಗೂ, ಪ್ರತಿಯೊಬ್ಬ ಹೀರೋಗೂ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ'' - ದರ್ಶನ್, ನಟ [ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?]

ಹೊರ ದೇಶಗಳಲ್ಲಿ 'ಚಕ್ರವರ್ತಿ' ಚಿತ್ರೀಕರಣ ಮಾಡಲಾಗಿದೆ. ಯಾವ ರೀತಿಯ ಲೊಕೇಶನ್ ಗಳನ್ನ ನೋಡಬಹುದು?

''ಕಥೆಗೆ ಬೇಕಾಗಿರುವುದರಿಂದ ಹೊರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೀವಿ. ಇಂಟ್ರೊಡಕ್ಷನ್ ಹಾಡೊಂದೇ ಬ್ಯಾಂಕಾಂಕ್ ಮಾಡಿರುವುದು. ಇನ್ನು ಉಳಿದಂತೆ ಕಥೆಗೆ ತಕ್ಕ ಹಾಗೆ ಸಿಂಗಾಪುರ್, ಮಲೆಶಿಯಾ, ಲಂಕಾವಿಯಲ್ಲಿ ಶೂಟ್ ಮಾಡಿದ್ದೀವಿ'' - ದರ್ಶನ್, ನಟ [ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ' ]

ಮಧ್ಯರಾತ್ರಿ 12 ಗಂಟೆಗೆ ನಿಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ?

''ಫ್ಯಾನ್ಸ್ ಕೊಡುತ್ತಿರುವ ಬಿಕ್ಷೆ ಇದು''. ಫಸ್ಟ್ ಟೈಮ್ ಅಂತಿದ್ದಾರೆ. ನನಗೆ ಗೊತ್ತಿಲ್ಲ. ಇದಕ್ಕೂ ಮುಂಚೆ ಆಗಿರಬಹುದಾ ಅಥವಾ ಇಲ್ವಾ ಅಂತ. ಬಟ್, ನನ್ನ ಸಿನಿಮಾ ಫಸ್ಟ್ ಟೈಮ್ ಆಗ್ತಿದೆ. ಅದು ಖುಷಿಯ ವಿಚಾರ'' - ದರ್ಶನ್, ನಟ [ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್]

'ಚಕ್ರವರ್ತಿ' ಚಿತ್ರದ ಟ್ರೈಲರ್ ಗೆ ಯ್ಯೂಟ್ಯೂಬ್ ನಲ್ಲಿ ಭರ್ಜರಿ ರೆಸ್ ಪಾನ್ಸ್ ಸಿಕ್ಕಿದೆ. ಅತಿ ಹೆಚ್ಚು ವೀಕ್ಷಕರು ನೋಡಿದ್ದಾರೆ?

''ಆಡಿಯೆನ್ಸ್ ನ ತಯಾರಿ ಮಾಡಬೇಕು. ಏನೂ ಹೇಳದೇನೆ ಬಂದ್ರೆ, ಅದು ರೀಚ್ ಆಗಲ್ಲ. ಬಟ್, ನಮ್ಮ ಟ್ರೈಲರ್ ಯಾವಾಗ ಬರುತ್ತೆ ಅಂತ ಮೊದಲೇ ಹೇಳಿದ್ವಿ. ಇದರಿಂದ ನಮ್ಮ ಆಡಿಯೆನ್ಸ್ ಕಾಯುತ್ತಿದ್ದರು. ಹೀಗಾಗಿ, ಟ್ರೈಲರ್ ಗೆ ಯಶಸ್ಸು ಸಿಕ್ತು ಅನಿಸುತ್ತೆ. ಎಲ್ಲ ಅಭಿಮಾನಿಗಳಿಂದನೇ'' - ದರ್ಶನ್, ನಟ

'ಚಕ್ರವರ್ತಿ' ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಏನ್ ಹೇಳ್ತಿರಾ?

''ನಾನೇನೂ ಹೇಳಲ್ಲ. 14 ತಾರೀಖು ಅವರೇ ನನಗೆ ಹೇಳ್ಬೇಕು. ಎಕ್ಸಾಂ ಬರಿದಿದ್ದೀನಿ. ಮಿಕ್ಕಿದ್ದೆಲ್ಲ ಅವರದ್ದೇ'' - ದರ್ಶನ್, ನಟ

ಚಕ್ರವರ್ತಿ ಬಗ್ಗೆ ದರ್ಶನ್ ಮಾತನಾಡಿರುವ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ

English summary
Challenging Star Darshan Talk About Chakravarthy Movie and shared his Expirence at Shooting in Pre Release Pressmeet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada