»   » ದಿನಕರ್ ಆಕ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

ದಿನಕರ್ ಆಕ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

Posted By:
Subscribe to Filmibeat Kannada

ದರ್ಶನ್ ಸಹೋದರ ದಿನಕರ್ ತೂಗುದೀಪ 'ಚಕ್ರವರ್ತಿ' ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ ದಿನಕರ್ ಅವರ ಫಸ್ಟ್ ಲುಕ್ ಪೋಸ್ಟರ್ ಗಳು ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದೆ.[ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?]

ಖಡಕ್ ಸ್ಟೈಲ್ ನಲ್ಲಿ ದಿನಕರ್ ಎಂಟ್ರಿ ಆಗ್ತಿದ್ದು, ಕನ್ನಡಕ್ಕೊಬ್ಬ ಖಳನಾಯಕ ಸಿಕ್ಕ ಎಂಬ ಆಶಯ ಹುಟ್ಟಿಕೊಂಡಿದೆ. ಚೊಚ್ಚಲ ಚಿತ್ರದಲ್ಲಿಯೇ ಅಣ್ಣನ ಸಿನಿಮಾದಲ್ಲಿ ಅಭಿನಯಿಸಿರುವುದು ಮತ್ತೊಂದು ವಿಶೇಷ. ಹಾಗಾದ್ರೆ, ಸಹೋದರನ ಅಭಿನಯದ ಬಗ್ಗೆ ದಾಸ ಏನ್ ಹೇಳಿದ್ದಾರೆ ಅಂತ ಮುಂದೆ ಓದಿ......

ಇಂಡಸ್ಟ್ರಿಗೊಬ್ಬ ವಿಲನ್ ಸಿಕ್ಕ!

''ನಮ್ಮಲ್ಲಿ ವಿಲನ್ ಗಳು ತುಂಬಾ ಕಮ್ಮಿಯಿದ್ದಾರೆ. ಇಂಡಸ್ಟ್ರಿಗೆ ವಿಲನ್ ಬರ್ತಾರೆ ಅಂದ್ರೆ ಅದಕ್ಕಿಂತ ಮತ್ತೇನು ಬೇಕು. ನಾನು ಅವನಿಗೆ ಹೇಳ್ತಿದ್ದಿನಿ. ಇದೊಂದೆ ಅಲ್ಲ. ಮೇನ್ ಸ್ಟ್ರೀಮ್ ಇದೆ. ಅದರ ಕಡೆ ಕೂಡ ಗಮನ ಹರಿಸು ಅಂತ'' - ದರ್ಶನ್, ನಟ

ಎಲ್ಲರ ಇನ್ ಪುಟ್ ತಗೊಳ್ತಿದ್ದ!'

''ದಿನಕರ್ ಗೆ ಪ್ರತಿಯೊಬ್ಬರು ಇನ್ ಪುಟ್ ಕೊಟ್ಟಿದ್ದಾರೆ. ಅದು ಚೆನ್ನಾಗಿರುತ್ತೆ, ಹೀಗೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ. ಯಾರೇ ಹೇಳೀದ್ರು ಅದನ್ನ ತಗೊಳ್ತಿದ್ದ'' - ದರ್ಶನ್, ನಟ

ದಿನಕರ್ ಮುಂದಿನ ಜರ್ನಿ!

''ಮುಂದಿನ ಸಿನಿಮಾಗಳ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನ ದಿನಕರ್ ಗೆ ಬಿಟ್ಟಿದ್ದು'' -ದರ್ಶನ್, ನಟ

ದಿನಕರ್ ಗೆ ಚೊಚ್ಚಲ ಚಿತ್ರ!

ಅಂದ್ಹಾಗೆ, ದಿನಕರ್ ತೂಗುದೀಪ ಇದೇ ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ವಿಲನ್ ಆಗಿ ಬಣ್ಣ ಹಚ್ಚಿರುವ ದಿನಕರ್, ದರ್ಶನ್ ಎದುರು ಅಬ್ಬರಿಸಿಲಿದ್ದಾರೆ. ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ತೆರೆಮೇಲೆ ತೂಗುದೀಪ ಸಹೋದರರ ಜುಗಲ್ ಬಂದಿ ಕುತೂಹಲ ಮೂಡಿಸಿದೆ.

English summary
Challenging Star Darshan Talk About Dinakar Toogudeepa Performance in Chakravarthy Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada