For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್, ಮದಕರಿ ನಾಯಕ ಬಳಿಕ ಡಿ-ಬಾಸ್ ಕೈಯಲ್ಲಿ 4 ಚಿತ್ರ, ಯಾವುದು ಮೊದಲು?

  |

  ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ರಾಬರ್ಟ್ ಭಾರಿ ಕುತೂಹಲ ಮೂಡಿಸಿದೆ. ಆ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಈಗ ಗಂಡಗಲಿ ಮದಕರಿ ನಾಯಕ ಚಿತ್ರದ ಸೆಟ್ಟೇರಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ ಚಿತ್ರದುರ್ಗದಲ್ಲಿ ಅಧಿಕೃತವಾಗಿ ಆರಂಭವಾಗಿದೆ.

  'ಒಡೆಯ' ಬಿಡುಗಡೆಗೂ ಮೊದಲೇ ದರ್ಶನ್ ಮತ್ತೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ ಸಂದೇಶ್'ಒಡೆಯ' ಬಿಡುಗಡೆಗೂ ಮೊದಲೇ ದರ್ಶನ್ ಮತ್ತೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ ಸಂದೇಶ್

  ಈ ಎರಡು ಸಿನಿಮಾ ಈ ವರ್ಷದಲ್ಲೇ ಬರುವ ಸಾಧ್ಯತೆ ಇದೆ. ಈ ಚಿತ್ರದ ಬಳಿಕ ಡಿ ಬಾಸ್ ಕೈಯಲ್ಲಿ ನಾಲ್ಕು ಸಿನಿಮಾ ಇದೆ. ಇವುಗಳಲ್ಲಿ ಯಾವುದು ಮೊದಲು ಆರಂಭವಾಗುತ್ತೆ? ಮುಂದೆ ಓದಿ....

  ವರ್ಷಕ್ಕೆ ಮೂರು ಸಿನಿಮಾ ಮಾಡ್ಬೇಕು

  ವರ್ಷಕ್ಕೆ ಮೂರು ಸಿನಿಮಾ ಮಾಡ್ಬೇಕು

  ವರ್ಷಕ್ಕೆ ಮೂರು ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೀನಿ ಎಂದು ಸ್ವತಃ ದರ್ಶನ್ ಅವರೇ ಈ ಹಿಂದೆ ತಿಳಿಸಿದ್ದರು. ಈ ಮಾತಿನಂತೆ 2019ರಲ್ಲಿ ಯಜಮಾನ, ಕುರುಕ್ಷೇತ್ರ, ಒಡೆಯ ಬಂದಿತ್ತು. ಈ ವರ್ಷಕ್ಕೆ ಯಾವುದು ಸಿನಿಮಾ ಎಂದು ನೋಡಿದರೆ ರಾಬರ್ಟ್ ಮತ್ತು ಗಂಡುಗಲಿ ಮದಕರಿ ನಾಯಕ ಕಾಣುತ್ತಿದೆ. ಆಮೇಲೆ ಯಾವ ಸಿನಿಮಾ?

  ಮಿಲನ ಪ್ರಕಾಶ್ ಪ್ರಾಜೆಕ್ಟ್

  ಮಿಲನ ಪ್ರಕಾಶ್ ಪ್ರಾಜೆಕ್ಟ್

  ಈ ಹಿಂದೆ ತಾರಕ್ ಸಿನಿಮಾ ಮಾಡಿದ್ದ ನಿರ್ದೇಶಕ ಮಿಲನ ಪ್ರಕಾಶ್ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ಅವರು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಆದರೆ, ಸಿನಿಮಾ ಯಾವಾಗ ಸೆಟ್ಟೇರಬಹುದು ಎಂಬ ಮಾಹಿತಿ ಸದ್ಯಕ್ಕಿಲ್ಲ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?

  ಶೈಲಜಾ ನಾಗ್ ಜೊತೆ ಇನ್ನೊಂದು ಚಿತ್ರ

  ಶೈಲಜಾ ನಾಗ್ ಜೊತೆ ಇನ್ನೊಂದು ಚಿತ್ರ

  ಯಜಮಾನ ಸಿನಿಮಾದ ಯಶಸ್ಸಿನ ಬಳಿಕ ಅದೇ ನಿರ್ಮಾಪಕರ ಜೊತೆ ಇನ್ನೊಂದು ಸಿನಿಮಾ ಮಾಡುವುದಾಗಿ ಸ್ವತಃ ದರ್ಶನ್ ತಿಳಿಸಿದ್ದರು. ಸಿನಿಮಾ ರಿಲೀಸ್ ಗೂ ಮುಂಚೆಯೇ ನಿರ್ಮಾಪಕಿ ಶೈಲಜಾ ನಾಗ್ ಅವರು ಡಿ ಬಾಸ್ ಗೆ ಅಡ್ವಾನ್ಸ್ ನೀಡಿದ್ದರು. ಹಾಗಾಗಿ, ಈ ಚಿತ್ರವೂ ಖಚಿತ. ಆದರೆ, ಯಾವಾಗ ಎಂಬುದು ಈಗ ಉತ್ತರ ಇಲ್ಲದ ಪ್ರಶ್ನೆ.

  ಎಂಜೆ ರಾಮಮೂರ್ತಿ ಚಿತ್ರ

  ಎಂಜೆ ರಾಮಮೂರ್ತಿ ಚಿತ್ರ

  ದರ್ಶನ್ ಅವರ ಚೊಚ್ಚಲ ಸಿನಿಮಾ ಮೆಜೆಸ್ಟಿಕ್ ನಿರ್ಮಿಸಿದ್ದ ಎಂಜೆ ರಾಮಮೂರ್ತಿ ಅವರ ಜೊತೆಯಲ್ಲಿ ಡಿ ಬಾಸ್ ಇನ್ನೊಂದು ಸಿನಿಮಾ ಮಾಡಲಿದ್ದಾರೆ. ಈ ಬಗ್ಗೆಯೂ ನಿರ್ಮಾಪಕರು ಅಧಿಕೃತವಾಗಿ ಹೇಳಿದ್ದರು. ಈ ಸಿನಿಮಾದ ತಯಾರಿ ಎಲ್ಲಿಗೆ ಬಂದಿದೆ ಎನ್ನುವುದು ಕುತೂಹಲವಾಗಿ ಉಳಿದುಕೊಂಡಿದೆ.

  ವಿನೋದ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಡಿ-ಬಾಸ್ವಿನೋದ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಡಿ-ಬಾಸ್

  ಸಂದೇಶ್ ಕಂಬೈನ್ಸ್ ಜೊತೆ ಡಿ ಬಾಸ್

  ಸಂದೇಶ್ ಕಂಬೈನ್ಸ್ ಜೊತೆ ಡಿ ಬಾಸ್

  ಐರಾವತ ಹಾಗೂ ಒಡೆಯ ಸಿನಿಮಾ ನಿರ್ಮಿಸಿದ್ದ ಸಂದೇಶ್ ಕಂಬೈನ್ಸ್ ಸಂಸ್ಥೆ ಜೊತೆ ದರ್ಶನ್ ಅವರು ಇನ್ನೊಂದು ಚಿತ್ರ ಮಾಡೋದು ಖಚಿತವಾಗಿದೆ. ಸ್ವತಃ ದರ್ಶನ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಡೆಯ ಸಿನಿಮಾ ಬಿಡುಗಡೆಗೂ ಮುಂಚೆ ಇನ್ನೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ್ದಾರೆ ಎಂದು ದಾಸ ಇತ್ತೀಚಿಗಷ್ಟೆ ಪ್ರೆಸ್ ಮೀಟ್ನಲ್ಲಿ ಬಹಿರಂಗಪಡಿಸಿದ್ದರು.

  ಭಾರತದ ಯಾವುದೇ ಸಿನಿಮಾಗೂ 'ಮದಕರಿ' ಕಮ್ಮಿ ಇರೋಲ್ಲ- ರಾಜೇಂದ್ರ ಸಿಂಗ್ ಬಾಬುಭಾರತದ ಯಾವುದೇ ಸಿನಿಮಾಗೂ 'ಮದಕರಿ' ಕಮ್ಮಿ ಇರೋಲ್ಲ- ರಾಜೇಂದ್ರ ಸಿಂಗ್ ಬಾಬು

  ಸರ್ಪ್ರೈಸ್ ಕೊಟ್ಟರೂ ಕೊಡಬಹುದು

  ಸರ್ಪ್ರೈಸ್ ಕೊಟ್ಟರೂ ಕೊಡಬಹುದು

  ಈ ನಾಲ್ಕು ಚಿತ್ರಗಳ ನಿರ್ಮಾಪಕರು ದರ್ಶನ್ ಜೊತೆ ಸಿನಿಮಾ ಮಾಡುವುದು ಪಕ್ಕಾ. ಯಾವುದು ಮೊದಲ ಆರಂಭವಾಗುತ್ತೆ, ನಂತರ ಯಾರ ಸಿನಿಮಾ ಬರುತ್ತೆ ಎಂದು ಹೇಳಲು ಸದ್ಯಕ್ಕೆ ಕಷ್ಟ. ಈ ಮಧ್ಯೆ ಐತಿಹಾಸಿಕ ಅಥವಾ ಪೌರಾಣಿಕ ಚಿತ್ರ ಆಫರ್ ಬಂದ್ರೆ ಸಾಲಿನಲ್ಲಿರುವ ಸಿನಿಮಾಗಳಿಗೂ ಮುಂಚೆ ಆ ಚಿತ್ರ ಸೆಟ್ಟೇರಿದರೂ ಅಚ್ಚರಿ ಇಲ್ಲ.

  English summary
  Challenging star darshan's robert and gandugali madakari nayaka movie set to release in 2020. after these project which producer joins with D Boss?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X