twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಬಹುದಿನದ ಆಸೆಯನ್ನ ನುಚ್ಚುನೂರು ಮಾಡಿತು ಈ ಅಪಘಾತ

    |

    Recommended Video

    ಬಹುದಿನಗಳಿಂದ ದರ್ಶನ್ ಕಂಡ ಕನಸು ನನಸಾಗುವುದಿಲ್ಲ..! | Filmibeat Kannada

    'ಕುರುಕ್ಷೇತ್ರ' ಚಿತ್ರವನ್ನ ಯಶಸ್ವಿಯಾಗಿ ಮುಗಿಸಿ, 'ಯಜಮಾನ' ಹಾಗೂ 'ಒಡೆಯ' ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದ ದರ್ಶನ್, ನಿನ್ನ ರಾತ್ರಿ ಕಾರು ಅಪಘಾತಕ್ಕೆ ಒಳಗಾಗಿದ್ದಾರೆ. ಈ ಅಪಘಾತದಿಂದ ದರ್ಶನ್ ಕಂಡಿದ್ದ ಬಹುದಿನದ ಆಸೆಯೊಂದು ನುಚ್ಚು ನೂರಾಗಿದೆ.

    ಸದ್ಯ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಸನ ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಕೆಲದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಬಲಗೈಗೆ ಶಸ್ತ್ರ ಚಿಕಿತ್ಸೆ ಹಾಕಿರುವ ಹಿನ್ನೆಲೆ ಸುಮಾರು 10 ರಿಂದ 15 ದಿನಗಳ ಕಾಲ ವಿಶ್ರಾಂತಿ ಬೇಕಾಗಬಹುದು ಎಂದು ಪತ್ನಿ ವಿಜಯಲಕ್ಷ್ಮಿ ಹೇಳುತ್ತಿದ್ದಾರೆ.

    ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.? ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?

    ಅಲ್ಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಿದ್ದ ಅಭ್ಯಾಸವೆಲ್ಲವೂ ವ್ಯರ್ಥವಾಗಿದೆ. ಇದು ಸಹಜವಾಗಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಅಭಿಮಾನಿಗಳ ಜೊತೆ ಸ್ವತಃ ದರ್ಶನ್ ಗೆ ಕೂಡ ಇದು ಭಾರಿ ನಿರಾಸೆ ಉಂಟು ಮಾಡಿದೆ. ಅಷ್ಟಕ್ಕೂ, ಏನದು ಬಹುದಿನದ ಆಸೆ.? ಮುಂದೆ ಓದಿ.....

    ದಸರಾ ಉತ್ಸವದಲ್ಲಿ ದರ್ಶನ್ ಸರ್ಪ್ರೈಸ್

    ದಸರಾ ಉತ್ಸವದಲ್ಲಿ ದರ್ಶನ್ ಸರ್ಪ್ರೈಸ್

    ಜಗತ್ಪ್ರಸಿದ್ದ ಮೈಸೂರು ದಸರಾ ಅಕ್ಟೋಬರ್ 10 ರಿಂದ ಆರಂಭವಾಗಲಿದೆ. ಹೀಗಾಗಿ, ಎಲ್ಲ ರೀತಿಯ ಸಿದ್ಧತೆಗಳು ಜರುಗುತ್ತಿದೆ. ವಿಶೇಷ ಅಂದ್ರೆ, ಈ ಬಾರಿಯ ದಸರಾ ಉತ್ಸವದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬಹುದೊಡ್ಡ ಸರ್ಪ್ರೈಸ್ ಒಂದು ಕಾದಿತ್ತು. ಬಹುಶಃ ಆ ಸರ್ಪ್ರೈಸ್ ಈಗ ನಿರಾಸೆಯಾಗಬಹುದು.

    ಸ್ಪೋರ್ಟ್ಸ್ ಕಾರ್ ರೇಸರ್ ಆದ ದರ್ಶನ್: ಸಿನಿಮಾನಾ ಅಥವಾ ಕಾಂಪಿಟೇಶನ್.?ಸ್ಪೋರ್ಟ್ಸ್ ಕಾರ್ ರೇಸರ್ ಆದ ದರ್ಶನ್: ಸಿನಿಮಾನಾ ಅಥವಾ ಕಾಂಪಿಟೇಶನ್.?

    ಕಾರ್ ರೇಸ್‍ನಲ್ಲಿ ದರ್ಶನ್ ಭಾಗಿ

    ಕಾರ್ ರೇಸ್‍ನಲ್ಲಿ ದರ್ಶನ್ ಭಾಗಿ

    ನಾಡಹಬ್ಬ ದಸರಾ ಮಹೋತ್ಸವದ ವೇಳೆ ಸಾಹಸ ಕ್ರೀಡೆಯನ್ನು ಉತ್ತೇಜಿಸಲು ಇದೇ ಮೊದಲ ಬಾರಿಗೆ 'ಮೈಸೂರು ದಸರಾ ಗ್ರಾವೆಲ್ ಫೆಸ್ಟ್' ಕಾರ್ ರೇಸ್ ಅನ್ನು ಸಂಘಟಿಸಲಾಗುತ್ತಿದೆ. ಈ ಕಾರ್ ರೇಸ್‍ನಲ್ಲಿ ಖ್ಯಾತ ನಟ ದರ್ಶನ್ ತೂಗುದೀಪ್ ಭಾಗವಹಿಸಲಿದ್ದಾರೆ. ಇದಕ್ಕಾಗಿ ಸ್ವತಃ ದರ್ಶನ್ ತಯಾರಿ ಕೂಡ ನಡೆಸಿದ್ದರು.

    ವದಂತಿಗಳನ್ನ ನಂಬಬೇಡಿ: ದರ್ಶನ್ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ವೈದ್ಯರುವದಂತಿಗಳನ್ನ ನಂಬಬೇಡಿ: ದರ್ಶನ್ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ವೈದ್ಯರು

    ದರ್ಶನ್ ದೂರ ಉಳಿಯಬಹುದು

    ದರ್ಶನ್ ದೂರ ಉಳಿಯಬಹುದು

    ಆಟೋ ಕಾರ್ಸ್ ಆಟೋಮೊಟಿವ್ ಸ್ಫೋರ್ಟ್ಸ್ ಕ್ಲಬ್ ಆಫ್ ಮೈಸೂರು ಆಶ್ರಯದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ಅಕ್ಟೋಬರ್ 7 ಮತ್ತು 8 ರಂದು ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಕಾರ್ ರೇಸ್ ನಡೆಸಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ನಟ ದರ್ಶನ್ 2 ಕಾರುಗಳನ್ನು ಖರೀದಿ ಮಾಡಿದ್ದು, ಅಭ್ಯಾಸ ಮಾಡುತ್ತಿದ್ದರು. ಈಗ ಅಪಘಾತದಲ್ಲಿ ಬಲಗೈಗೆ ಪೆಟ್ಟಾಗಿರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಹೀಗಾಗಿ, ಸಹಜವಾಗಿ ವಿಶ್ರಾಂತಿ ಅಗತ್ಯವಿದೆ. ಬಹುಶಃ ಈ ರೇಸ್ ನಿಂದ ಈಗ ದರ್ಶನ್ ದೂರ ಉಳಿಯಬಹುದು.
    ಚಿತ್ರಕೃಪೆ: D - TEAM (R)

    ದರ್ಶನ್ ಅಪಘಾತದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ನೀಡಿದ ಪ್ರತಿಕ್ರಿಯೆದರ್ಶನ್ ಅಪಘಾತದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ನೀಡಿದ ಪ್ರತಿಕ್ರಿಯೆ

    ದರ್ಶನ್ ಫಿಟ್ ಆದ್ರೆ ಪಕ್ಕಾ ಭಾಗಿ

    ದರ್ಶನ್ ಫಿಟ್ ಆದ್ರೆ ಪಕ್ಕಾ ಭಾಗಿ

    ದರ್ಶನ್ ಅವರಿಗೆ ಹೆಚ್ಚು ವಿಶ್ರಾಂತಿ ಅಗತ್ಯವಿದ್ದರೇ ಖಂಡಿತಾ ಈ ಗ್ರಾವೆಲ್ ಫೆಸ್ಟ್ ಕಾರ್ ರೇಸ್ ನಿಂದ ಹಿಂದೆ ಸರಿಯುತ್ತಾರೆ. ಒಂದು ವೇಳೆ ದರ್ಶನ್ ಅದಕ್ಕೂ ಮುಂಚೆಯೇ ಫಿಟ್ ಆದ್ರೆ, ಪಕ್ಕಾ ಈ ರೇಸ್ ನಲ್ಲಿ ಭಾಗಿಯಾಗುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ದರ್ಶನ್ ಆರೋಗ್ಯ ಸ್ಥಿತಿ ಗಮನಿಸಿದ್ರೆ ಭಾಗಿಯಾಗಲ್ಲ ಎಂಬ ಅನುಮಾನವೇ ಹೆಚ್ಚಿದೆ.

    ಮೈಸೂರಿನಲ್ಲಿ ಕಾರು ಅಪಘಾತ, 'ದಾಸ' ದರ್ಶನ್ ಗೆ ಕೈ ಮುರಿತಮೈಸೂರಿನಲ್ಲಿ ಕಾರು ಅಪಘಾತ, 'ದಾಸ' ದರ್ಶನ್ ಗೆ ಕೈ ಮುರಿತ

    ಗಜಪಡೆಯನ್ನ ಸತ್ಕರಿಸಿದ 'ದಾಸ'

    ಗಜಪಡೆಯನ್ನ ಸತ್ಕರಿಸಿದ 'ದಾಸ'

    ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಸಂದೇಶ್ ನಾಗರಾಜ್ ಸರ್ ರವರು ಇತ್ತೀಚಿಗಷ್ಟೆ ಮೈಸೂರಿನ ಅರಮನೆಗೆ ಭೇಟಿ ನೀಡಿ ದಸರಾ ಗಜಪಡೆಯನ್ನ ಸತ್ಕರಿಸಿದ್ದರು.

    ಚಿತ್ರಕೃಪೆ: ಡಿ ಕಂಪನಿ

    English summary
    Kannada actor, Challenging star Darshan will not participate in Gravel Fest car race.
    Monday, September 24, 2018, 15:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X