»   » ಹುಟ್ಟುಹಬ್ಬದ ದಿನ ಐರಾವತ ಏರಲಿರುವ ದರ್ಶನ್

ಹುಟ್ಟುಹಬ್ಬದ ದಿನ ಐರಾವತ ಏರಲಿರುವ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂತಸ ಸುದ್ದಿ. ಅವರು ಮತ್ತೊಂದು ಅದ್ದೂರಿ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಇದೇ ಫೆಬ್ರವರಿ 16ಕ್ಕೆ ಮೂವತ್ತೇಳನೇ ವರ್ಷಕ್ಕೆ ಅಡಿಯಿಡುತ್ತಿದ್ದು, ಇದೇ ಸಂದರ್ಭದಲ್ಲಿ ಅವರು 'ಐರಾವತ' ಏರುತ್ತಿರುವುದು ವಿಶೇಷ.

ಅಂಬಾರಿ, ಅದ್ದೂರಿ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರ ದರ್ಶನ್ ಹುಟ್ಟುಹಕ್ಕೆ ಸೆಟ್ಟೇರುತ್ತಿದೆ.

Darshan's Airavatha will be launched on his birthday

'ಇಟ್ಸ್ ಎ ಬ್ರಾಂಡ್' ಎಂಬ ಟ್ಯಾಗ್ ಲೈನ್ ಇದಕ್ಕಿದೆ. ದರ್ಶನ್ ಅವರ ಪ್ರಿನ್ಸ್ ಚಿತ್ರ ನಿರ್ಮಿಸಿ ಕೈಸುಟ್ಟಿಕೊಂಡಿದ್ದ ಸಂದೇಶ್ ನಾಗರಾಜ್ ಅವರು ಮತ್ತೊಮ್ಮೆ ದರ್ಶನ್ ಮೇಲೆ ನಂಬಿಕೆಯಿಟ್ಟು ಹಣ ಸುರಿಯುತ್ತಿದ್ದಾರೆ. ಅದ್ದೂರಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದರೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಎಂಬ ಮಾತುಗಳು ಕೇಳಿಬರುತ್ತಿವೆ.

ಎಪಿ ಅರ್ಜುನ್ ಮೇಲಿನ ಇಟ್ಟಿರುವ ಅಪಾರ ವಿಶ್ವಾಸವೇ ದರ್ಶನ್ ಈ ಚಿತ್ರದಲ್ಲಿ ಅಭಿನಯಿಸಲು ಕಾರಣ. ಇನ್ನೂ ವಯಸ್ಸಿನಲ್ಲಿ ಅರ್ಜುನ್ ಚಿಕ್ಕವರು. ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಚಿತ್ರ ಮಾಡಕ್ಕೆ ಬರಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಆದರೆ ದರ್ಶನ್ ಮಾತ್ರ ಅವರ ವಯಸ್ಸನ್ನು ಗಮನಿಸದೆ ಟ್ಯಾಲೆಂಟ್ ಗಮನಿಸಿ ಐರಾವತ ಏರುತ್ತಿದ್ದಾರೆ. (ಏಜೆನ್ಸೀಸ್)

English summary
Challenging Star Darshan's much awaited film Airavatha will be launched on his birthday on February 16. The film directed by AP Arjun (Ambari Arjun) will follow Mahesh Sukhadhare's Ambareesha, whose shooting is in full swing.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada