For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆಗೆ ನಟಿಸೋದು ಖುಷಿಯ ವಿಚಾರ ಎಂದ ಸಿಂಗಂ ವಿಲನ್

  By Naveen
  |

  ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಈಗಾಗಲೇ ಚಿತ್ರದ ನಟಿ ತಾನ್ಯ ಹೋಪೆ ತಮ್ಮ ಪಾತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ನಟ ಧನಂಜಯ ಕೂಡ ಶೂಟಿಂಗ್ ಮುಗಿಸಿದ್ದು ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ಭರದಿಂದ ಸಾಗಿದೆ.

  ಪಿ ಕುಮಾರ್ ನಿರ್ದೇಶನದಲ್ಲಿ ಮುಡಿ ಬರುತ್ತಿರುವ 'ಯಜಮಾನ' ಸಿನಿಮಾದ ಕ್ಲೈಮ್ಯಾಕ್ಸ್ ಫೈಟಿಂಗ್ ಶೂಟಿಂಗ್ ಶುರುವಾಗಿದೆ. ದರ್ಶನ್ ಎದುರಿನಲ್ಲಿ ನಟ ಥಾಕೂರ್ ಅನೂಪ್ ಸಿಂಗ್ ಅಭಿನಯ ಮಾಡುತ್ತಿದ್ದು, ಈ ಬಗ್ಗೆ ಅನೂಪ್ ಸಿಂಗ್ ತಮ್ಮ ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.

  'ಯಜಮಾನ'ನಾದ ಡಿ ಬಾಸ್ : ಅಂದು ವಿಷ್ಣು ಇಂದು ದರ್ಶನ್

  "ಕನ್ನಡ ಸಿನಿಮಾದಲ್ಲಿ ಹಾಗೂ ದರ್ಶನ್ ಜೊತೆಯಲ್ಲಿ ಅಭಿನಯ ಮಾಡುತ್ತಿರುವುದು ಖುಷಿಯ ವಿಚಾರ. ಹಾರ್ಡ್ ವರ್ಕ್ ಮಾಡಿರುವುದರ ಪ್ರತಿಫಲ ಇಂದು ಚಿತ್ರೀಕರಣದ ಸಮಯದಲ್ಲಿ ಕಾಣುತ್ತಿದೆ" ಎಂದು ನಟ ಥಾಕೂರ್ ಅನೂಪ್ ಸಿಂಗ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  ಸದ್ಯ 'ಯಜಮಾನ' ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಶೈಲಜಾ ನಾಗ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಶ್ರೀಷ ಕುದುವಳ್ಳಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದು. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

  English summary
  Kannada actor Darshan's 51th movie Yajamana. The movie is producing by Shailaja Nag and P.Kumar will be directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X