»   » ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ: ಅಭಿನಯ ಶಾರದೆ ಹೆಸರಲ್ಲಿ ಮೃತ್ಯುಂಜಯ ಹೋಮ

ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ: ಅಭಿನಯ ಶಾರದೆ ಹೆಸರಲ್ಲಿ ಮೃತ್ಯುಂಜಯ ಹೋಮ

Posted By:
Subscribe to Filmibeat Kannada
ಜಯಂತಿ ಅವರ ಹೆಸರಲ್ಲಿ ಮೃತ್ಯುಂಜಯ ಹೋಮ | Filmibeat Kannada

ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಯಂತಿ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ.

ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆ ಬಳಿಯಿರುವ ವಿಕ್ರಂ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಜಯಂತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ಸತೀಶ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಜಯಂತಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವುದರಿಂದ ವೆಂಟಿಲೇಟರ್ ತೆಗೆಯಲಾಗಿದೆ. ಇಂದು ತೀವ್ರ ನಿಗಾ ಘಟಕದಿಂದ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

ಜಯಂತಿ ಅವರ ಆರೋಗ್ಯ ಸ್ಥಿತಿ ವಿಚಾರಿಸಲು ಅನೇಕ ಗಣ್ಯರು ಹಾಗೂ ಕನ್ನಡ ಚಿತ್ರರಂಗದ ಕಲಾವಿದರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

Day 3: Kannada Veteran Actress Jayanthi health condition

ಇಂದು ನಟಿ ಜಯಂತಿ ವಾರ್ಡ್ ಗೆ ಶಿಫ್ಟ್ : ಸುಳ್ಳು ವದಂತಿಗಳಿಗೆ ಬ್ರೇಕ್

ಇತ್ತ ಹಿರಿಯ ನಟಿ ಜಯಂತಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ನಿರ್ಮಾಪಕ ಭಾ.ಮಾ.ಹರೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಮೃತ್ಯುಂಜಯ ಹೋಮ ಮಾಡಿಸಿದ್ದಾರೆ.

ನಿನ್ನೆಯಷ್ಟೇ ವಿಕ್ರಂ ಆಸ್ಪತ್ರೆಗೆ ಭೇಟಿ, ಜಯಂತಿ ಆರೋಗ್ಯ ವಿಚಾರಿಸಿದ್ದ ಭಾ.ಮಾ.ಹರೀಶ್ ಮತ್ತು ಸ್ನೇಹಿತರು ಇಂದು ಬೆಳಗ್ಗೆ ಬೆಂಗಳೂರಿನ ರಾಜಾಜಿನಗರದ ಸಂಜೀವಿನಿ ವೀರಾಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ನೆರವೇರಿಸಿದರು.

English summary
Kannada Veteran Actress Jayanthi is recovering well says Dr.Sathish, Vikram Hospital, Bengaluru. Jayanthi is suffering from Asthama. She had been admitted to Vikram Hospital, Bengaluru on Monday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X