»   » 'ದಯವಿಟ್ಟು ಗಮನಿಸಿ' ಚಿತ್ರದ ಬಿಡುಗಡೆ ದಿನಾಂಕ ನಿಗದಿ

'ದಯವಿಟ್ಟು ಗಮನಿಸಿ' ಚಿತ್ರದ ಬಿಡುಗಡೆ ದಿನಾಂಕ ನಿಗದಿ

Posted By:
Subscribe to Filmibeat Kannada

ರೋಹಿತ್ ಪದಕಿ ನಿರ್ದೇಶನ ಮಾಡುತ್ತಿರುವ ನಿರೀಕ್ಷೆಯ ಸಿನಿಮಾ 'ದಯವಿಟ್ಟು ಗಮನಿಸಿ' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಚಿತ್ರ ಶುರುವಾದಗನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕುತೂಹಲ ಹೆಚ್ಚಿಸುತ್ತಾ ಬಂದಿರುವ ಸಿನಿಮಾ ಮುಂದಿನ ತಿಂಗಳು ತೆರೆಮೇಲೆ ಬರಲಿದೆ.

ಕರ್ನಾಟದಲ್ಲಿ ಅಕ್ಟೋಬರ್ 20 ರಂದು 'ದಯವಿಟ್ಟು ಗಮನಿಸಿ' ಚಿತ್ರಮಂದಿರಕ್ಕೆ ಲಗ್ಗೆಯಿಡಲಿದೆ. ಆದ್ರೆ, ಅದಕ್ಕೂ ಮುಂಚೆ ಅಂದ್ರೆ, ಅಕ್ಟೋಬರ್ 15 ರಂದು ಆಸ್ಟ್ರೇಲಿಯಾದಲ್ಲಿ ಈ ಸಿನಿಮಾ ಪ್ರೀಮಿಯರ್ ಕಾಣಲಿದೆ.

Dayavittu Gamanisi Will release on October 20th

ಅಂದ್ಹಾಗೆ, 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ದೊಡ್ಡ ತಾರಬಳಗ ಹೊಂದಿದ್ದು, ರಘು ಮುಖರ್ಜಿ, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಸಂಗೀತ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್, ಸಂಯುಕ್ತ ಹೊರನಾಡು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

Dayavittu Gamanisi Will release on October 20th

ಕನ್ನಡ ಚಿತ್ರರಂಗದಲ್ಲಿ ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ರೋಹಿತ್ ಪದಕಿ ಈ ಚಿತ್ರದ ಮೂಲಕ ತಮ್ಮ ಚೊಚ್ಚಲ ನಿರ್ದೇಶನ ಮಾಡಿದ್ದಾರೆ. ಚಿತ್ರದ ಒಂದು ವಿಶೇಷ ಹಾಡಿನಲ್ಲಿ ನಟಿ ಮೇಘನಾ ರಾಜ್ ಹೆಜ್ಜೆ ಹಾಕಿದ್ದಾರೆ. ಇನ್ನುಳಿದಂತೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ.

ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗದ್ದು, ಚಿತ್ರದ ಎರಡು ವಿಶೇಷ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.

English summary
Rohith Padaki directoinal 'Dayavittu Gamanisi' is all set to release on 20th of October.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada