For Quick Alerts
  ALLOW NOTIFICATIONS  
  For Daily Alerts

  ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.!

  |
  Yajamana Movie: ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.! | FILMIBEAT KANNADA

  ದರ್ಶನ್ ಸಿನಿಮಾಗಳಲ್ಲಿ ಡೈಲಾಗ್ ಗಳಿಗೇನೂ ಕೊರತೆ ಇರಲ್ಲ. ಅದೂ ಮಾಸ್ ಸಿನಿಮಾ ಆಗ್ಬಿಟ್ರೆ ಅಭಿಮಾನಿಗಳಿಗೆ ಹಬ್ಬನೇ. ಇದೀಗ, ಮಾಸ್ ಮತ್ತು ಕ್ಲಾಸ್ ಗೆ ಆಡಿಯೆನ್ಸ್ ಗೆ ತಕ್ಕ ಹಾಗೆ ಯಜಮಾನ ಸಿನಿಮಾ ಮಾಡಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ ಡಿ ಬಾಸ್.

  ಇಷ್ಟು ದಿನ ಹಾಡುಗಳ ಮೂಲಕ ಅಬ್ಬರಿಸಿದ್ದ ಶಿವನಂದಿ ಈಗ ಟ್ರೈಲರ್ ಮೂಲಕ ಶಿವರಾತ್ರಿ ಆಚರಿಸಲು ಸೂಚನೆ ನೀಡಿದ್ದಾರೆ. ಯಜಮಾನನ ಟ್ರೈಲರ್ ಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, ಯೂಟ್ಯೂಬ್ ನಲ್ಲಂತೂ ರೆಕಾರ್ಡ್ ಗಳೆಲ್ಲಾ ಉಡೀಸ್ ಆಗಿದೆ.

  ಬರೆದಿಟ್ಟುಕೊಳ್ಳಿ, ದರ್ಶನ್ 50ನೇ ಚಿತ್ರ ಪಕ್ಕಾ ಆಯ್ತು

  ಅದ್ಧೂರಿಯಾಗಿ ಮೂಡಿಬಂದಿರುವ ಯಜಮಾನ ಟ್ರೈಲರ್ ನಲ್ಲಿ ಎರಡು ಡೈಲಾಗ್ ಗಳು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈ ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದು, ಅದೇ ರೀತಿ ಚರ್ಚೆ ಕೂಡ ಹೆಚ್ಚಾಗ್ತಿದೆ. ಅಷ್ಟಕ್ಕೂ, ಆ ಎರಡು ಡೈಲಾಗ್ ಯಾವುದು. ಏನದು ಚರ್ಚೆ ಎಂದು ಮುಂದೆ ಓದಿ.....

  ಸ್ವಂತ ಬ್ರಾಂಡೋ.....

  ಸ್ವಂತ ಬ್ರಾಂಡೋ.....

  ''ಅಕಾಶಕ್ಕೆ ತಲೆಕೊಟ್ಟು....

  ಭೂಮಿಗೆ ಬೆವರಿಳಿಸಿ....

  ನಿಯತ್ತಿಂದ ಕಟ್ಟಿರೋ....

  ಸ್ವಂತ ಬ್ರಾಂಡೋ....., ಸೌಂಡ್ ಜಾಸ್ತಿನೇ ಇರುತ್ತೆ''

  'ಯಜಮಾನ' ಟ್ರೇಲರ್ : ಶಿವನಂದಿಯಾಗಿ ಅಬ್ಬರಿಸಿದ ಡಿ ಬಾಸ್

  ಹೇ ಕ್ಯಾಡ್ಬರೀಸ್...

  ಹೇ ಕ್ಯಾಡ್ಬರೀಸ್...

  ''ಹೇ ಕ್ಯಾಡ್ಬರೀಸ್....

  ಆನೆ ನಡೆದಿದ್ದೇ ದಾರಿ....

  ಬರ್ತಾ ಇದ್ದೀನಿ....

  ತಾಕತ್ ಇದ್ರೆ ಕಟ್ಟಾಕೋ.....''

  'ಯಜಮಾನ' ಕುರಿತು ಕಾಡುತ್ತಿರುವ ದೊಡ್ಡ ಪ್ರಶ್ನೆ?

  ಕೌಂಟರ್ ಕೊಟ್ರಾ ದರ್ಶನ್

  ಕೌಂಟರ್ ಕೊಟ್ರಾ ದರ್ಶನ್

  ಈ ಎರಡು ಡೈಲಾಗ್ ಗಳನ್ನ ಗಮನಿಸಿದ ನೆಟ್ಟಿಗರು, ಇತರೆ ನಟರಿಗೆ ಡಿ ಬಾಸ್ ತನ್ನದೇ ಸ್ಟೈಲ್ ನಲ್ಲಿ ಕೌಂಟರ್ ಕೊಟ್ಟಿದ್ದಾರೆ ಎಂದು ಚರ್ಚೆ ಮಾಡ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಕೆಲವು ಟ್ರೋಲ್, ಪೋಸ್ಟ್ ಗಳು ಹರಿದಾಡುತ್ತಿದೆ.

  6 ನಿಮಿಷದಲ್ಲಿ ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.!

  ಯಾರು ಕ್ಯಾಡ್ಬರೀಸ್, ಯಾರು ಆನೆ?

  ಯಾರು ಕ್ಯಾಡ್ಬರೀಸ್, ಯಾರು ಆನೆ?

  ಹೇ ಕ್ಯಾಡ್ಬರೀಸ್ ಎಂದು ದರ್ಶನ್ ಈ ಹಿಂದೆ ನವಗ್ರಹ ಸಿನಿಮಾದಲ್ಲಿ ಬಳಸಿದ್ದರು. ನಂತರು ಅದು ಟ್ರೆಂಡ್ ಆಗಿತ್ತು. ಈಗ ಯಜಮಾನ ಚಿತ್ರದಲ್ಲೂ ಬಳಿಸಿದ್ದಾರೆ. ಹಾಗಾಗಿ ಕ್ಯಾಡ್ಬರೀಸ್ ಪದ ಮತ್ತೆ ಸದ್ದು ಮಾಡಿದೆ. ಇನ್ನು ಅದರ ಜೊತೆ ಆನೆ ಕಟ್ಟಾಕೋ ತಾಕತ್ ಯಾರಿಗೆ ಇದೆ ಸವಾಲು ಹಾಕಿ ಚಿತ್ರಮಂದಿರಕ್ಕೆ ಬರ್ತಿದ್ದಾರೆ. ಇದೆಲ್ಲವೂ ಸಿನಿಮಾಗೆ, ಕತೆಗೆ ಪೂರಕವಾಗಿ ಸಂಭಾಷಣೆ ಇರಬಹುದು. ಆದ್ರೆ, ನೆಟ್ಟಿಗರು ಮಾತ್ರ ಇದರ ಹಿಂದೆ ಕೌಂಟರ್ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  English summary
  Challenging star darshan starrer Yajamana movie trailer has released. movie directed by p kumar and v harikrishna

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X