twitter
    For Quick Alerts
    ALLOW NOTIFICATIONS  
    For Daily Alerts

    ಚೊಚ್ಚಲ ನಿರ್ದೇಶನದಲ್ಲಿ ಜೈಕಾರ ಹಾಕಿಸಿಕೊಂಡ ಡೈರೆಕ್ಟರ್ಸ್

    By Bharath Kumar
    |

    ಸ್ಟಾರ್ ಡೈರೆಕ್ಟರ್ ಸಿನಿಮಾಗಳು ಅಂದ್ರೆ ಪ್ರೇಕ್ಷಕರು ವರ್ಷಗಳ ಕಾಲ ಕಾದು ನೋಡ್ತಾರೆ. ಯೋಗರಾಜ್ ಭಟ್, ದುನಿಯಾ ಸೂರಿ, ಓ ಪ್ರಕಾಶ್ ರಾವ್, ಉಪೇಂದ್ರ ಹೀಗೆ ಇಂತವರ ಚಿತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ ಸ್ಯಾಂಡಲ್ ವುಡ್ ಮಂದಿ.

    ಮತ್ತೊಂದೆಡೆ ಚೊಚ್ಚಲ ನಿರ್ದೇಶನದಲ್ಲೇ ಹೊಸ ಭರವಸೆ ಮೂಡಿಸಿ, ಒಂದೇ ಚಿತ್ರದ ಮೂಲಕ ಸ್ಟಾರ್ ಪಟ್ಟ ಪಡೆದುಕೊಳ್ಳುವ ಡೈರೆಕ್ಟರ್ ಗಳು ಪ್ರತಿವರ್ಷವೂ ಇಂಡಸ್ಟ್ರಿಗೆ ಬರ್ತಿದ್ದಾರೆ.

    ನೇರ ಚಿತ್ರಗಳ ಮುಂದೆ ಮಕಾಡೆ ಮಲಗಿದ 'ರೀಮೇಕ್' ಚಿತ್ರಗಳುನೇರ ಚಿತ್ರಗಳ ಮುಂದೆ ಮಕಾಡೆ ಮಲಗಿದ 'ರೀಮೇಕ್' ಚಿತ್ರಗಳು

    ಈ ವರ್ಷವೂ ಹಲವು ನಿರ್ದೇಶಕರು ತಮ್ಮ ಮೊದಲ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದಾರೆ. ಫಸ್ಟ್ ಸಿನಿಮಾ ಮುಗಿಸಿದ ಮೇಲೆ ಈ ನಿರ್ದೇಶಕರಿಗೆ ಒಳ್ಳೊಳ್ಳೆ ಆಫರ್ ಗಳು ಬರ್ತಿದೆ. ಈ ವರ್ಷ ಪರಿಚಯವಾದ ನವನಿರ್ದೇಶಕರ ಆಯ್ಕೆ ಮಾಡಲಾಗಿದೆ. ನಿಮಗೆ ಹೆಚ್ಚು ಇಷ್ಟವಾಗಿದ್ದು ಯಾರು ಎಂದು ಕಾಮೆಂಟ್ ಮಾಡಿ ತಿಳಿಸಿ. ಮುಂದೆ ಓದಿ.....

    'ಚೌಕ' ಸೂತ್ರದಾರ

    'ಚೌಕ' ಸೂತ್ರದಾರ

    'ಚೌಕ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ತರುಣ್ ಸುಧೀರ್. ಮೊದಲ ಸಿನಿಮಾವನ್ನೇ ಸೂಪರ್ ಹಿಟ್ ಮಾಡಿದ ಕೀರ್ತಿ ಪಡೆದುಕೊಂಡರು. 'ಚೌಕ' ಸಿನಿಮಾ ಶತದಿನ ಆಚರಿಸಿಕೊಂಡಿತು. ಅಷ್ಟೇ ಅಲ್ಲದೇ, ನಾಲ್ಕು ಜನ ಸ್ಟಾರ್ ನಟರನ್ನ ಒಂದೇ ಸಿನಿಮಾದಲ್ಲಿ ಒಟ್ಟುಗೂಡಿಸಿ ಎಲ್ಲರಿಗೂ ಹೊಸ ಇಮೇಜ್ ನೀಡಿದರು. ಇದರ ಪರಿಣಾಮ 'ಚೌಕ' ವರ್ಷದ ಮೋಸ್ಟ್ ಎಂಟರ್ ಟೈನರ್ ಚಿತ್ರವಾಗಿ ಹೊರಹೊಮ್ಮಿದೆ.

    ಈ ವರ್ಷ ಚಿತ್ರರಂಗ ಕಳೆದುಕೊಂಡ 'ಅನರ್ಘ್ಯ ರತ್ನ'ಗಳುಈ ವರ್ಷ ಚಿತ್ರರಂಗ ಕಳೆದುಕೊಂಡ 'ಅನರ್ಘ್ಯ ರತ್ನ'ಗಳು

    ಟಿ.ಎಸ್ ನಾಗಾಭರಣ ಪುತ್ರ

    ಟಿ.ಎಸ್ ನಾಗಾಭರಣ ಪುತ್ರ

    ಕನ್ನಡದ ಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ ಅವರ ಪುತ್ರ ಪನ್ನಗಾಭರಣ ಈ ವರ್ಷ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾದರು. 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ತಂದೆಯ ಮಾರ್ಗವನ್ನ ಅನುಸರಿಸಿದರು. ನಟನೆಯ ಜೊತೆ ನಿರ್ದೇಶನಕ್ಕಳಿದ ಪನ್ನಗಾಭರಣ ಅವರಿಗೆ ಉತ್ತಮ ಸ್ವಾಗತ ಸಿಕ್ಕಿದೆ.

    'ಚಕ್ರವರ್ತಿ' ಚಿಂತನ್

    'ಚಕ್ರವರ್ತಿ' ಚಿಂತನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳಲ್ಲಿ ಸತತವಾಗಿ ಕೆಲಸ ಮಾಡುತ್ತಿದ್ದ ಚಿಂತನ್ ಕೊನೆಗೆ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ. ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಮೂಲಕ ತಮ್ಮ ಚೊಚ್ಚಲ ಸಿನಿಮಾ ಮಾಡಿದ್ದಾರೆ. ಈ ವರ್ಷ ಗಮನ ಸೆಳೆದ ನಿರ್ದೇಶಕರಲ್ಲಿ ಚಿಂತನ್ ಕೂಡ ಒಬ್ಬರಾಗಿದ್ದಾರೆ.

    ರಾಜ್ ಬಿ ಶೆಟ್ಟಿ

    ರಾಜ್ ಬಿ ಶೆಟ್ಟಿ

    'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಕನ್ನಡಕ್ಕೆ ದೊರೆತ ಭರವಸೆಯ ನಿರ್ದೇಶಕ. ಸರಳವಾದ ಕಥೆಯನ್ನಿಟ್ಟು ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಿದರು. ನಟನೆ, ನಿರ್ದೇಶನ ಎರಡರಲ್ಲೂ ಮೋಡಿ ಮಾಡಿದರು. ಇವರ ನಿರ್ದೇಶನಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿತ್ತು.

    ಈ ವರ್ಷ ಎಂಟ್ರಿ ಕೊಟ್ಟ ನವನಟರಲ್ಲಿ ನಿಮ್ಮ ನೆಚ್ಚಿನ ಹೀರೋ ಯಾರು?ಈ ವರ್ಷ ಎಂಟ್ರಿ ಕೊಟ್ಟ ನವನಟರಲ್ಲಿ ನಿಮ್ಮ ನೆಚ್ಚಿನ ಹೀರೋ ಯಾರು?

    'ಮಫ್ತಿ' ನರ್ತನ್

    'ಮಫ್ತಿ' ನರ್ತನ್

    ವರ್ಷದ ಕೊನೆಯಲ್ಲಿ ತೆರೆಕಂಡ 'ಮಫ್ತಿ' ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಓಟ ಕಾಣ್ತಿದೆ. ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿಯಷ್ಟೇ ಸುದ್ದಿ ಮಾಡುತ್ತಿರುವುದು ನಿರ್ದೇಶಕ ನರ್ತನ್. ಅದ್ಭುತವಾದ ಮೇಕಿಂಗ್, ಜನರು ನಿರೀಕ್ಷಿಸುವಂತಹ ಮನರಂಜನೆ ನೀಡಿ ಗೆಲವು ಕಂಡಿದ್ದಾರೆ. ಬಹುಶಃ ಈ ಚಿತ್ರದ ನಂತರ ನರ್ತನ್ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಬಹುದು.

    ರವೀಂದ್ರನಾಥ್

    ರವೀಂದ್ರನಾಥ್

    'ಪುಷ್ಪಕ ವಿಮಾನ' ಚಿತ್ರದ ಮೂಲಕ ನಟ ರಮೇಶ್ ಅರವಿಂದ್ 100ನೇ ಸಿನಿಮಾ ಪೂರೈಸಿದರು. ಜೊತೆ ರವೀಂದ್ರ ನಾಥ್ ಎಂಬ ನವ ನಿರ್ದೇಶಕನನ್ನ ಪರಿಚಯಿಸಿದರು. ಜನರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಿ ಗಮನ ಸೆಳೆದರು ರವೀಂದ್ರ ನಾಥ್.

    ಪ್ರದೀಪ್ ವರ್ಮ

    ಪ್ರದೀಪ್ ವರ್ಮ

    ಕನ್ನಡದ ಪ್ರಮುಖ ನಾಯಕಿಯರನ್ನ ಒಟ್ಟುಗೂಡಿಸಿ 'ಉರ್ವಿ' ಎಂಬ ಥ್ರಿಲ್ಲಿಂಗ್ ಸಿನಿಮಾ ಮಾಡಿದ ನಿರ್ದೇಶಕ ಪ್ರದೀಪ್ ವರ್ಮ. ಮಹಿಳಾ ಪ್ರಧಾನವಾದ ಕಥೆಯನ್ನ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದರು. ಈ ವರ್ಷ ಇಂಡಸ್ಟ್ರಿಗೆ ಡೈರೆಕ್ಟರ್ ಆಗಿ ಡೆಬ್ಯೂ ಮಾಡಿದ ನವ ನಿರ್ದೇಶಕರಲ್ಲಿ ಪ್ರದೀಪ್ ಕೂಡ ಒಬ್ಬರು.

    ಈ ವರ್ಷ ಸ್ಯಾಂಡಲ್ ವುಡ್ ಗೆ ಬಂದ ಬೆಳದಿಂಗಳ ಬಾಲೆಯರಿವರುಈ ವರ್ಷ ಸ್ಯಾಂಡಲ್ ವುಡ್ ಗೆ ಬಂದ ಬೆಳದಿಂಗಳ ಬಾಲೆಯರಿವರು

    ರೋಹಿತ್ ಪದಕಿ

    ರೋಹಿತ್ ಪದಕಿ

    'ದಯವಿಟ್ಟು ಗಮನಿಸಿ' ಚಿತ್ರದ ಮೂಲಕ ನಿರ್ದೇಶಕ ರೋಹಿತ್ ಪದಕಿ ಡೈರೆಕ್ಟರ್ ಆಗಿ ಪರಿಚಯವಾದರು. ನಾಲ್ಕು ವಿಭಿನ್ನ ಕಥೆಗಳನ್ನ ಒಂದೇ ಸಿನಿಮಾದಲ್ಲಿ ಹೇಳುವ ಮೂಲಕ ಒಂದು ಕ್ಲಾಸ್ ಸಿನಿಮಾ ನೀಡಿದರು.

    English summary
    2017 witnessed many newcomers entering Sandalwood. Among those here is the list of Talented New directors who made promising entry into Sandalwood in 2017.
    Friday, December 15, 2017, 20:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X