»   » ಗಾಸಿಪ್ ಗಳಿಗೆಲ್ಲ ಕ್ಯಾರೆ ಅನ್ನದ ದೀಪಾ ಸನ್ನಿಧಿ

ಗಾಸಿಪ್ ಗಳಿಗೆಲ್ಲ ಕ್ಯಾರೆ ಅನ್ನದ ದೀಪಾ ಸನ್ನಿಧಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಸಾರಥಿ', ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಪರಮಾತ್ಮ', ರಾಕಿಂಗ್ ಸ್ಟಾರ್ ಯಶ್ ಜೊತೆ 'ಜಾನು', ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಕ್ಕರೆ' ಸಿನಿಮಾ ಮಾಡಿದ್ದ ಬೆಡಗಿ ದೀಪಾ ಸನ್ನಿಧಿ.

ಇಂತಿಪ್ಪ ಸುಂದರಿ ದೀಪಾ, ಸ್ಯಾಂಡಲ್ ವುಡ್ ಕಡೆ ಮುಖ ಮಾಡಿ ಎರಡು ವರ್ಷಗಳಾಗಿವೆ. ಕಾಲಿವುಡ್ ನಲ್ಲಿ ಬಿಜಿಯಾಗಿರುವ ದೀಪಾ ಸನ್ನಿಧಿ, ಮೊನ್ನೆಯಷ್ಟೇ ಸಿಲಿಕಾನ್ ಸಿಟಿಗೆ ಬಂದಿದ್ದರು.

Deepa Sannidhi clarifies about her rumours with Siddharth

ಬೆಂಗಳೂರಿನ ಮೀನಾಕ್ಷಿ ಮಾಲ್ ನ ಮಳಿಗೆಯೊಂದರ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೀಪಾ ಸನ್ನಿಧಿ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರಂತೆ. ''ಸುಖಾಸುಮ್ಮನೆ ಸಿನಿಮಾಗಳನ್ನ ಒಪ್ಪಿಕೊಳ್ಳುವುದಿಲ್ಲ. ಪಾತ್ರದಲ್ಲಿ ಪರ್ಫಾಮೆನ್ಸ್ ಗೆ ಪ್ರಾಮುಖ್ಯತೆ ಇರಬೇಕು'' ಅನ್ನೋದು ದೀಪಾ ಸನ್ನಿಧಿ ಮನದಾಳ. [ಅವಕಾಶ ಸಿಗದವರಲ್ಲ, ಇವರು `ಅವಕಾಶ' ಕೊಡದವರು!]

Deepa Sannidhi clarifies about her rumours with Siddharth

ಕಾಲಿವುಡ್ ನ ಚಾಕಲೇಟ್ ಬಾಯ್ ಸಿದ್ದಾರ್ಥ್ ಜೊತೆಗಿನ ಲವ್ವಿ-ಡವ್ವಿ ಅಫೇರ್ ಬಗ್ಗೆ ಕೂಡ ಮನಬಿಚ್ಚಿ ಮಾತನಾಡಿದ ದೀಪಾ ಸನ್ನಿಧಿ, ''ಅಲ್ಲಿನ ಇಂಡಸ್ಟ್ರಿ ತುಂಬಾ ದೊಡ್ಡದ್ದು. ಗಾಸಿಪ್ ಗಳೆಲ್ಲಾ ಕಾಮನ್. ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದೇ ಇಲ್ಲ'' ಅಂತ ಹೇಳ್ತಾರೆ. [ಹಾಲು-ಜೇನಿನಂತಿದ್ದ ಜೋಡಿ 'ಪ್ರೇಮ'ಕ್ಕೆ ಹುಳಿ ಹಿಂಡಿದ ನಟಿಯಾರು?]

ಅಲ್ಲಿಗೆ, ಸಿದ್ದಾರ್ಥ್ ಮತ್ತು ದೀಪಾ ಸನ್ನಿಧಿ ನಡುವಿನ ಅಫೇರ್ ಬಗ್ಗೆ ಹರಿಡಿದ್ದ ಗಾಸಿಪ್ ಗೆ ಖುದ್ದು ದೀಪಾ ಸನ್ನಿಧಿ ಫುಲ್ ಸ್ಟಾಪ್ ಇಟ್ಟಿದ್ದಾರೆ.

English summary
Kannada Actress Deepa Sannidhi has cleared the air about all the gossips surrounding with her and Tamil Actor Siddharth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada