For Quick Alerts
  ALLOW NOTIFICATIONS  
  For Daily Alerts

  ಡಾಲಿ ಮುಂದಿನ ಚಿತ್ರ ತೆಲುಗಿನಲ್ಲಿ 'ಒನ್ಸ್ ಅಪಾನ್ ಟೈಮ್ ಇನ್ ದೇವರಕೊಂಡ'; ರಿಲೀಸ್ ಡೇಟ್ ಫಿಕ್ಸ್

  |

  ಈ ವರ್ಷ ಡಾಲಿ ಧನಂಜಯ್ ಅಭಿನಯದ ಒಟ್ಟು ಐದು ಚಿತ್ರಗಳು ಬಿಡುಗಡೆಯಾಗಿದ್ದು ಎಲ್ಲವೂ ಸಹ ಸಾಮಾನ್ಯ ಎನಿಸಿಕೊಂಡಿವೆ. ಹಿಂದಿನ ವರ್ಷಗಳಲ್ಲಿ ಧನಂಜಯ್ ಅಭಿನಯದ ಚಿತ್ರಗಳು ಮಾಡುತ್ತಿದ್ದಷ್ಟು ಸದ್ದು ಮಾಡುವಲ್ಲಿ ಈ ವರ್ಷ ತೆರೆ ಕಂಡ ಚಿತ್ರಗಳು ಯಶಸ್ವಿಯಾಗಿಲ್ಲ. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೆ ಹೆಡ್ ಬುಷ್ ಚಿತ್ರದಿಂದ ದೊಡ್ಡ ಮಟ್ಟದ ವಿವಾದಕ್ಕೂ ಒಳಗಾಗಿದ್ದ ಧನಂಜಯ್ ಅಭಿನಯದ ಮುಂದಿನ ಚಿತ್ರ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಬಿಡುಗಡೆ ದಿನಾಂಕ ಈಗ ಘೋಷಣೆಯಾಗಿದೆ.

  ಕುಶಾಲ್ ಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರವನ್ನು ಡಿಸೆಂಬರ್ 30ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತಾಗಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇನ್ನು ಈ ಚಿತ್ರ ತೆಲುಗಿನಲ್ಲೂ ಸಹ ಬಿಡುಗಡೆಯಾಗಲಿದ್ದು ತೆಲುಗಿನಲ್ಲಿ 'ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ' ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

  ಈ ಚಿತ್ರದಲ್ಲಿ ಧನಂಜತ್ ಹಿರೋಶಿಮಾ ಪಾತ್ರದಲ್ಲಿ ಕಾಣಿಸಿಕೊಂಡರೆ, ಯಶ್ ಶೆಟ್ಟಿ ನಾಗಾಸಾಕಿ, ಅಧಿತಿ ಪ್ರಭುದೇವ ರುಕ್ಮಿಣಿ, ಪ್ರಾಣ್ಯ ಪಿ ರಾವ್ ಚುಕ್ಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಭಾವನಾ ಹಾಗೂ ಪ್ರಕಾಶ್ ಬೆಳವಾಡಿ ಕೂಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಧನಂಜಯ್ ಲುಕ್ ತುಂಬಾ ವಿಭಿನ್ನವಾಗಿದ್ದು ಗುಂಗುರು ಕೂದಲಿನಲ್ಲಿ ರಗಡ್ ಆಗಿ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಇನ್ನು ಧನಂಜಯ್ ತಮಿಳಿನ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದು, ಸದ್ಯ ಕೈನಲ್ಲಿ ಕನ್ನಡದ ಹೊಯ್ಸಳ, ಉತ್ತರಕಾಂಡ ಚಿತ್ರಗಳಿವೆ. ಇವುಗಳ ಜೊತೆಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಪಾರ್ಟ್ 2 ಚಿತ್ರದಲ್ಲಿಯೂ ಸಹ ಧನಂಜಯ್ ಜಾಲಿ ರೆಡ್ಡಿ ಪಾತ್ರ ಮುಂದುವರೆಯಲಿದೆ.

  English summary
  Dhananjay starrer Once Upon a time in Jamaligudda schedule to release on December 30th
  Sunday, November 13, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X