For Quick Alerts
  ALLOW NOTIFICATIONS  
  For Daily Alerts

  ಡಾಲಿ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟೊಂದು ಇಷ್ಟ.!

  |
  Yajamana Movie: ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ? | FILMIBEAT KANNADA

  'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶ ಮಾಡಿದ ಧನಂಜಯ್ ಅಲ್ಲಿಂದ ಸ್ಪೆಷಲ್ ಸ್ಟಾರ್ ಎಂದೇ ಗುರುತಿಸಿಕೊಂಡರು. ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ ಅಂದ್ರೂ, ಧನಂಜಯ್ ವಿಶೇಷವಾಗಿ ಗಮನ ಸೆಳೆದಿದ್ದರು.

  'ಸ್ಪೆಷಲ್ ಸ್ಟಾರ್' ಆದ ಧನಂಜಯ್ 'ಜಯಗನರ 4th ಬ್ಲಾಕ್' ಎಂಬ ಕಿರುಚಿತ್ರ ಮಾಡಿದ್ರು. ರಾಟೇ, ಬಾಕ್ಸರ್, ಜೆಸ್ಸಿ, ಬದ್ಮಾಶ್, ಅಲ್ಲಮ, ಎರಡನೇ ಸಲ ಎಂಬ ಕಮರ್ಷಿಯಲ್ ಚಿತ್ರಗಳನ್ನ ಮಾಡಿದ್ರೂ, ಯಾವುದು ದೊಡ್ಡ ಸಕ್ಸಸ್ ಕೊಟ್ಟಿಲ್ಲ.

  ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ

  ಅದ್ಯಾವಾಗ ಟಗರು ಚಿತ್ರದಲ್ಲಿ ಡಾಲಿಯಾದ್ರೋ ಅಲ್ಲಿಂದ ಧನಂಜಯ್ ಲಕ್ ಬದಲಾಯ್ತು. ಹೀರೋ ಆಗಿ ಪಡೆಯದೇ ಇದ್ದ ಇಮೇಜ್ ಡಾಲಿ ಎಂಬ ಒಂದು ಕ್ಯಾರೆಕ್ಟರ್ ನಿಂದ ಗಳಿಸಿದ್ರು. ಈ ಸಕ್ಸಸ್ ಬಳಿಕ ಇಂಡಸ್ಟ್ರಿಯಲ್ಲಿ ಡಾಲಿ ಎಂದೇ ಫೇಮಸ್ ಆದ್ರು. ಇಂತಹ ಧನಂಜಯ್ ಅವರನ್ನ ಡಿ ಬಾಸ್ ದರ್ಶನ್ ಏನೆಂದು ಕರೆಯುತ್ತಾರೆ ಗೊತ್ತಾ? ಮುಂದೆ ಓದಿ....

  ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ

  ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ

  ಟಗರು ಚಿತ್ರದಲ್ಲಿ ಡಾಲಿಯಾಗಿದ್ದ ಧನಂಜಯ್, ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಆಗಿ ಮಿಂಚಿದ್ದಾರೆ. ಸದ್ಯ ಟ್ರೈಲರ್ ರಿಲೀಸ್ ಆಗಿದ್ದು ಮಿಠಾಯಿ ಸೂರಿಯ ಹವಾ ಜೋರಾಗಿಯೇ ಇದೆ ಎಂಬ ಸುಳಿವು ಸಿಕ್ಕಿದೆ. ಇಷ್ಟು ದಿನ ಡಾಲಿ ಆಗಿದ್ದ ಧನಂಜಯ್ ಇನ್ಮುಂದೆ ಮಿಠಾಯಿ ಸೂರಿ ಆದ್ರೂ ಅಚ್ಚರಿಯಿಲ್ಲ. ಹೀಗಂತ ಸ್ವತಃ ಧನಂಜಯ್ ಅವರೇ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಯುವರತ್ನನ ಪವರ್ ಹೆಚ್ಚಿಸಲು ಡಾಲಿ ಜೊತೆ ಚಿಟ್ಟೆನೂ ಎಂಟ್ರಿ.!

  ದರ್ಶನ್ ಗೂ ಇಷ್ಟ ಡಾಲಿ

  ದರ್ಶನ್ ಗೂ ಇಷ್ಟ ಡಾಲಿ

  ತನ್ನದೇ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರ ಮಾಡಿರುವ ಧನಂಜಯ್ ಅವರನ್ನ ದರ್ಶನ್ ಪ್ರೀತಿಯಿಂದ ಕರೆಯುವುದು ಡಾಲಿ ಅಂತ. ಧನಂಜಯ್ ಅವರನ್ನ ಎಲ್ಲೇ ಕಂಡ್ರು ಪ್ರೀತಿಯಿಂದ ಮಾತನಾಡಿಸುವ ದರ್ಶನ್, ಡಾಲಿ ಅಂತಾನೇ ಕೂಗ್ತಾರಂತೆ.

  ಶಿವಣ್ಣ, ದರ್ಶನ್ ನಂತರ ಪುನೀತ್ ಚಿತ್ರದಲ್ಲಿ ಡಾಲಿ ಧನಂಜಯ್

  'ಯಜಮಾನ' ಸೂಪರ್ ಎಂದ ಡಾಲಿ

  'ಯಜಮಾನ' ಸೂಪರ್ ಎಂದ ಡಾಲಿ

  ಇನ್ನು ದರ್ಶನ್ ಸಿನಿಮಾ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಧನಂಜಯ್ 'ಇದು ವಿಲನ್ ಪಾತ್ರವಲ್ಲ ಆದ್ರೆ ಚಿತ್ರಕ್ಕೆ ಪ್ರಮುಖ ಪಾತ್ರ' ಎಂದಿದ್ದಾರೆ. 'ದರ್ಶನ್ ಅವರು ಕೂಡ ಅಷ್ಟೇ ತುಂಬಾ ಚೆನ್ನಾಗಿ ನೋಡಿಕೊಳ್ತಾರೆ, ಊಟಕ್ಕೆ ಕೂತಾಗ ನಾನಿಲ್ಲ ಅಂದ್ರೆ ಯಾರನ್ನಾದರೂ ಕಳುಹಿಸಿ ಡಾಲಿನಾ ಕರೀರಿ ಅಂತ ಹೇಳ್ತಾರೆ' ಎಂದು ಹೇಳಿಕೊಂಡಿದ್ದಾರೆ.

  ಯಜಮಾನ ಚಿತ್ರದಲ್ಲಿ 'ಮಿಠಾಯಿ ಸೂರಿ' ವಿಲನ್ ಅಲ್ಲ.!

  ಯುವರತ್ನ ಚಿತ್ರದಲ್ಲಿ ಡಾಲಿ

  ಯುವರತ್ನ ಚಿತ್ರದಲ್ಲಿ ಡಾಲಿ

  'ಯಜಮಾನ' ಮುಗಿಸಿ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಧನಂಜಯ್ 'ಡಾಲಿ' ಎಂಬ ಹೆಸರಿನಲ್ಲೇ ಹೊಸದೊಂದು ಪ್ರಾಜೆಕ್ಟ್ ಆರಂಭಿಸಿದ್ದಾರೆ. ಇದರ ಜೊತೆಗೆ ದುನಿಯಾ ವಿಜಯ್ ಮತ್ತು ಧ್ರುವ ಸರ್ಜಾ ಚಿತ್ರಗಳಿಂದಲೂ ಆಫರ್ ಇದೆಯಂತೆ.

  English summary
  Kannada actor Dhananjaya loves challenging star darshan personality.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X