For Quick Alerts
  ALLOW NOTIFICATIONS  
  For Daily Alerts

  ಧನಂಜಯ್ 'ಹೆಡ್‌ಬುಷ್' ಆಟ ಶುರು.. ಪೇಯ್ಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್.. ಎಲ್ಲೆಲ್ಲೂ ಡಾನ್ ಜಯರಾಜ್ ಆರ್ಭಟ!

  |

  ರಿಷಬ್ ಶೆಟ್ಟಿ 'ಕಾಂತಾರ' ಆರ್ಭಟ ಕಮ್ಮಿ ಆಗುವುದಕ್ಕೂ ಮೊದಲೇ ಧನಂಜಯ ನಟನೆಯ 'ಹೆಡ್‌ಬುಷ್' ಥಿಯೇಟರ್‌ಗೆ ಬರ್ತಿದೆ. ನಾಳೆ(ಅಕ್ಟೋಬರ್ 21) ಈ ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಇಂದು ಸಂಜೆಯಿಂದಲೇ ಕೆಲವೆಡೆ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗ್ತಿದೆ. ಕೆಲ ಶೋಗಳು ಹೌಸ್‌ಫುಲ್ ಆಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

  ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್‌ವರ್ಲ್ಡ್' ಪುಸ್ತಕ ಆಧರಿಸಿ ನಿರ್ದೇಶಕ ಶೂನ್ಯ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. 70- 80ರ ದಶಕದ ಬೆಂಗಳೂರು ಭೂಗತಲೋಕದ ಕಥೆಯನ್ನು ಚಿತ್ರದಲ್ಲಿ ಅನಾವರಣ ಮಾಡಲಾಗುತ್ತಿದೆ. ಡಾನ್ ಜಯರಾಜ್‌ ಆಗಿ ಡಾಲಿ ಧನಂಜಯ ಅಬ್ಬರಿಸಿದ್ದರೆ ಕೊತ್ವಾಲ್ ರಾಮಚಂದ್ರನ ಪಾತ್ರದಲ್ಲಿ ವಸಿಷ್ಠ ಸಿಂಹ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ. ಧನಂಜಯ್ ಹಲವು ದಿನಗಳಿಂದ ಬೆಲ್‌ಬಾಟಂ ತೊಟ್ಟು ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ರಾಜ್‌ ಕಪ್‌ಗಾಗಿ ದುಬೈಗೆ ಹೋಗಿದ್ದಾಗಲೂ ಇದೇ ಲುಕ್‌ನಲ್ಲಿ ಗಮನ ಸೆಳೆದಿದ್ದರು.

  Head Bush Trailer: ಲಾಂಗ್ ಹಿಡ್ದು ಜಯರಾಜ್ ಬರೆದ ಬೆಂಗಳೂರು ಭೂಗತಲೋಕದ ರಕ್ತಸಿಕ್ತ ಅಧ್ಯಾಯ!Head Bush Trailer: ಲಾಂಗ್ ಹಿಡ್ದು ಜಯರಾಜ್ ಬರೆದ ಬೆಂಗಳೂರು ಭೂಗತಲೋಕದ ರಕ್ತಸಿಕ್ತ ಅಧ್ಯಾಯ!

  ಡಾಲಿ ಧನಂಜಯ್ ಜೊತೆಗೆ ವಸಿಷ್ಠ ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಲೂಸ್ ಮಾದ ಯೋಗಿ, ಶ್ರುತಿ ಹರಿಹರನ್, ರಘು ಮುಖರ್ಜಿ, ಪಾಯಲ್ ರಜಪೂತ್ ಸೇರಿದಂತೆ ದೊಡ್ಡ ತಾರಾಗಣ 'ಹೆಡ್‌ಬುಷ್' ಸಿನಿಮಾದಲ್ಲಿದೆ. ಚರಣ್ ರಾಜ್ ಸಂಗೀತ, ಸುನೋಜ್ ವೇಲಾಯುಧನ್ ಛಾಯಾಗ್ರಹಣ ಚಿತ್ರಕ್ಕಿದೆ. ನಟನೆಯ ಜೊತೆಗೆ ನಟ ಧನಂಜಯ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಪೇಯ್ಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್

  ಪೇಯ್ಡ್ ಪ್ರೀಮಿಯರ್ ಶೋಗಳು ಹೌಸ್‌ಫುಲ್

  ಬೆಂಗಳೂರು, ಮೈಸೂರು, ತುಮಕೂರಿನಲ್ಲಿ ಇಂದು(ಅಕ್ಟೋಬರ್ 20) ಸಂಜೆಯಿಂದಲೇ
  'ಹೆಡ್‌ಬುಷ್' ಸಿನಿಮಾ ರಿಲೀಸ್ ಆಗ್ತಿದೆ. ಪೇಯ್ಡ್ ಪ್ರೀಮಿಯರ್ ಶೋಗಳ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಕೆಲ ಶೋಗಳ ಟಿಕೆಟ್ಸ್ ಸೋಲ್ಡ್‌ಔಟ್ ಆಗೋಗಿದೆ. ಹಾಗಾಗಿ ಪ್ರೀಮಿಯರ್‌ ಶೋಗಳಿಗೆ ಹೌಸ್‌ಫುಲ್‌ ಓಪನಿಂಗ್ ಸಿಗಲಿದೆ. ಬೆಂಗಳೂರಿನಲ್ಲಿ 17, ಮೈಸೂರಿನಲ್ಲಿ 7, ಶಿವಮೊಗ್ಗ, ದಾವಣಗೆರೆ ಹಾಗೂ ತುಮಕೂರಿನಲ್ಲಿ ತಲಾ 2 ಪೇಯ್ಡ್ ಪ್ರೀಮಿಯರ್‌ ಶೋಗಳು ನಡೆಯಲಿದೆ. ಈಗಾಗಲೇ ಬಹುತೇಕ ಶೋಗಳ ಟಿಕೆಟ್ಸ್ ಮಾರಾಟವಾಗಿದೆ.

  ದುಬೈನಿಂದ ಬರ್ತಾ ಇದ್ದಂತೆ ಕಾಂತಾರಗೆ ಜನ ನುಗ್ತಿರೋದು ನೋಡಿ ಮನವಿ ಇಟ್ಟ ಡಾಲಿ ಧನಂಜಯದುಬೈನಿಂದ ಬರ್ತಾ ಇದ್ದಂತೆ ಕಾಂತಾರಗೆ ಜನ ನುಗ್ತಿರೋದು ನೋಡಿ ಮನವಿ ಇಟ್ಟ ಡಾಲಿ ಧನಂಜಯ

  ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ಚಿತ್ರ ರಿಲೀಸ್

  ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ಚಿತ್ರ ರಿಲೀಸ್

  ಕರ್ನಾಟಕ ಮಾತ್ರವಲ್ಲದೇ ಮುಂಬೈ, ಚೆನ್ನೈ, ಪುಣೆ ಸೇರಿದಂತೆ ಹೊರ ರಾಜ್ಯಗಳಲ್ಲೂ ಏಕಕಾಲಕ್ಕೆ 'ಹೆಡ್‌ಬುಷ್' ಸಿನಿಮಾ ತೆರೆಗೆ ಬರ್ತಿದೆ. ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿಲ್ಲ. ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲೇ ಎಲ್ಲಾ ಕಡೆ ರಿಲೀಸ್ ಮಾಡಲಾಗ್ತಿದೆ. ಧನಂಜಯ ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಶುರು ಮಾಡಿದ್ದಾರೆ. ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಸದ್ಯ 'ಕಾಂತಾರ' ಸಿನಿಮಾ ಹೊರ ರಾಜ್ಯಗಳಲ್ಲಿ ಸಖತ್ ಸದ್ದು ಮಾಡ್ತಿದ್ದು, ಅದರ ಹಿಂದೆ 'ಹೆಡ್‌ಬುಷ್' ಹಾವಳಿ ಶುರುವಾಗಲಿದೆ.

  'ಹೆಡ್‌ಬುಷ್' ರಿಲೀಸ್‌ಗೂ ಮೊದಲೇ ಡಾಲಿ ಸೇಫ್!

  'ಹೆಡ್‌ಬುಷ್' ರಿಲೀಸ್‌ಗೂ ಮೊದಲೇ ಡಾಲಿ ಸೇಫ್!

  ಜೀ ಸಂಸ್ಥೆ 22 ಕೋಟಿ ರೂ.ಗೆ 'ಹೆಡ್‌ಬುಷ್' ಚಿತ್ರದ ಥ್ರಿಯೇಟ್ರಿಕಲ್, ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಖರೀದಿಸಿದೆ. ಬರೀ ಸಿನಿಮಾ ಮೇಕಿಂಗ್ ವಿಷ್ಯುವಲ್ಸ್ ನೋಡಿ ಸಂಸ್ಥೆ ಇಂತಾದೊಂದು ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಬಹಳ ಅದ್ಧೂರಿಯಾಗಿ 'ಹೆಡ್‌ಬುಷ್' ಪ್ರೀ ರಿಲೀಸ್ ಈವೆಂಟ್ ಕೂಡ ನಡೆದಿತ್ತು.

  ಭಾರೀ ಕುತೂಹಲ ಕೆರಳಿಸಿರುವ 'ಹೆಡ್‌ಬುಷ್'

  ಭಾರೀ ಕುತೂಹಲ ಕೆರಳಿಸಿರುವ 'ಹೆಡ್‌ಬುಷ್'

  ಬೆಂಗಳೂರು ಭೂಗತಲೋಕದ ಬಗ್ಗೆ ಸಾಕಷ್ಟು ಜನ ಮಾತನಾಡುತ್ತಿರುತ್ತಾರೆ. ಡಾನ್ ಜಯರಾಜ್, ಕೊತ್ವಾಲನ ಆರ್ಭಟದ ಬಗ್ಗೆ ಅವರಿವರು ಹೇಳಿರುವುದನ್ನು ಮಾತ್ರ ಕೇಳಿದ್ದೇವೆ. 'ಹೆಡ್‌ಬುಷ್' ಚಿತ್ರದಲ್ಲಿ ಆ ದಿನಗಳನ್ನು ದೃಶ್ಯರೂಪಕ್ಕೆ ಇಳಿಸಲಾಗಿದೆ. ಈಗಾಗಲೇ ಟ್ರೈಲರ್‌ನಲ್ಲಿ ಡಾನ್ ಜಯರಾಜ್‌ ಆಗಿ ಡಾಲಿ ಅಬ್ಬರ ನೋಡಿದ ಸಿನಿ ರಸಿಕರು ಫಿದಾ ಆಗಿದ್ದಾರೆ. ಸದಾ ಸಿಗರೇಟು ಹಿಡಿದು ಚಿಟಿಕೆ ಹೊಡೆಯುವ ಸ್ಟೈಲ್, ಲುಕ್ಕು, ಮ್ಯಾನರಿಸಂ ಗಮನ ಸೆಳೆದಿದೆ. ತೆರೆಮೇಲೆ ಕಂಪ್ಲೀಟ್ ಸಿನಿಮಾ ನೋಡಲು ಸಿನಿರಸಿಕರು ಕಾತರರಾಗಿದ್ದಾರೆ.

  English summary
  Dhananjaya Starrer Head Bush Many Paid Premier Show are Sold Out. Directed by Shoonya, the film is a Political gangster drama based on Don Jayaraj, the first underworld don from Bengaluru. Know More.
  Thursday, October 20, 2022, 17:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X