For Quick Alerts
  ALLOW NOTIFICATIONS  
  For Daily Alerts

  'ಹೆಡ್ ಬುಷ್' ಚಿತ್ರದ ಪೇಯ್ಡ್ ಪ್ರೀಮಿಯರ್ ಬುಕಿಂಗ್ಸ್ ಓಪನ್

  |

  ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ರೌಡಿಗಳಾಗಿ ಚಿತ್ರಮಂದಿರಕ್ಕೆ ಈ ವಾರ ಚಿತ್ರಮಂದಿರಕ್ಕೆ ಕಾಲಿಡಲಿದ್ದಾರೆ. ಚಿತ್ರ ಇದೇ ಶುಕ್ರವಾರ ( ಅಕ್ಟೋಬರ್ 21 ) ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಚಿತ್ರಕ್ಕೆ ಶೂನ್ಯ ಆಕ್ಷನ್ ಕಟ್ ಹೇಳಿದ್ದು, ಅಗ್ನಿ ಶ್ರೀಧರ್ ಚಿತ್ರಕತೆ ಇದೆ. ಬೆಂಗಳೂರಿನ ಅಂಡರ್‌ವರ್ಲ್ಡ್ ಕುರಿತ ಚಿತ್ರ ಇದಾಗಿದ್ದು, ಜಯರಾಜ್ ಕಾಲದ ರಕ್ತಸಿಕ್ತ ಕತೆಗಳನ್ನು ತೆರೆ ಮೇಲೆ ಕಾಣಬಹುದಾಗಿದೆ.

  ಇನ್ನು ಚಿತ್ರದ ಶುಕ್ರವಾರ ಬಿಡುಗಡೆಯಾಗಲಿದ್ದರೆ, ಇದಕ್ಕೂ ಒಂದು ದಿನ ಮುಂಚೆ ಅಂದರೆ ನಾಳೆ ( ಅಕ್ಟೋಬರ್ 20 ) ಗುರುವಾರ ಸಂಜೆ ಮತ್ತು ರಾತ್ರಿ ಹೆಡ್ ಬುಷ್ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಚಿತ್ರತಂಡ ಆಯೋಜಿಸುತ್ತಿದೆ. ಸದ್ಯಕ್ಕೆ ಬೆಂಗಳೂರಿನ ವೀರೇಶ್ ಚಿತ್ರಮಂದಿರ, ಮೈಸೂರಿನ ಡಿಆರ್‌ಸಿ ಹಾಗೂ ವಿಷನ್ ಸಿನಿಮಾಸ್‌ನಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳ ಮುಂಗಡ ಬುಕಿಂಗ್ ಆರಂಭಗೊಂಡಿದೆ.

  ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಗುರುವಾರ ಸಂಜೆ 7.05 ಹಾಗೂ ರಾತ್ರಿ 10 ಗಂಟೆಗೆ ಎರಡು ಶೋಗಳನ್ನು ಆಯೋಜಿಸಲಾಗಿದ್ದು ಈ ಎರಡೂ ಶೋಗಳೂ ಸಹ ಸೋಲ್ಡ್ ಔಟ್ ಆಗಿವೆ. ಮೈಸೂರಿನ ವಿಷನ್ ಸಿನಿಮಾಸ್‌ನಲ್ಲಿ ಸಂಜೆ 6.30ಕ್ಕೆ ಪ್ರದರ್ಶನ ಆಯೋಜನೆಗೊಂಡಿದೆ. ಇನ್ನು ಬೆಂಗಳೂರಿನ ವೀರೇಶ್ ಸಿನಿಮಾಸ್‌ನಲ್ಲಿ ರಾತ್ರಿ 7.15 ಮತ್ತು 10.15ಕ್ಕೆ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಈ ಎರಡೂ ಶೋಗಳ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿವೆ. ಇಷ್ಟೇ ಅಲ್ಲದೇ ಇನ್ನು ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆರಂಭಿಸುತ್ತೇವೆ ಎಂದು ಡಾಲಿ ಧನಂಜಯ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಇನ್ನು ಹೆಡ್ ಬುಷ್ ಚಿತ್ರ ಬಿಡುಗಡೆಗೂ ಮುನ್ನವೇ ಜಾಕ್‌ಪಾಟ್ ಹೊಡೆದಿದ್ದು ಜೀ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ಬರೋಬ್ಬರಿ 22 ಕೋಟಿಗೆ ಸೇಲ್ ಆಗಿದೆ.

  English summary
  Dhananjaya starrer Head Bush paid premiere show bookings opened . Read on
  Wednesday, October 19, 2022, 18:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X