For Quick Alerts
  ALLOW NOTIFICATIONS  
  For Daily Alerts

  ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ

  |
  ಮತ್ತೆ ನಟರಾಕ್ಷಸನ ಆಗಮನ..! | FILMIBEAT KANNADA

  ಡಾಲಿ ಪಾತ್ರದ ಮೂಲಕ ಹೊಸ ಇಮೇಜ್ ಗಿಟ್ಟಿಸಿಕೊಂಡ ಧನಂಜಯ್ ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡ್ತಿದ್ದಾರೆ ಎಂಬುದನ್ನ ಹೇಳಿದ್ವಿ. ಇದೀಗ, ಡಾಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಮತ್ತೆ ನಟರಾಕ್ಷಸನ ಆಗಮನದ ಸುಳಿವು ಸಿಕ್ಕಿದೆ.

  ಟಗರು ಚಿತ್ರದಲ್ಲಿ ಧನಂಜಯ್ ಹೇಗಿದ್ರೋ ಅದೇ ಗೆಟಪ್ ನಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ ಡಾಲಿ. ಕೈಯಲ್ಲಿ ಬಿಯರ್ ಬಾಟಲ್, ಗನ್, ದುಡ್ಡು ಹಿಡಿದಿರುವ ವಿಭಿನ್ನ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಮತ್ತೆ ರಕ್ತ ಹರಿಸುವ ವಿಲನ್ ನೋಡಬಹುದು.

  ಈ ಚಿತ್ರವನ್ನ 'ಗಣಪ' ಖ್ಯಾತಿಯ ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದು, ಎರಡನೇ ಸಲ ನಿರ್ಮಾಪಕ ಯೋಗೇಶ್ ನಾರಾಯಣ್ ನಿರ್ಮಿಸಲಿದ್ದಾರಂತೆ. ಅಂದ್ಹಾಗೆ, ಡಾಲಿ ಚಿತ್ರದ ಫೋಟೋಶೂಟ್ ಮಾಡಿರುವುದು ಖ್ಯಾತ ಛಾಯಗ್ರಾಹಕ ಮಹೇಂದ್ರ ಸಿಂಹ.

  ಧನಂಜಯ್ ಸದ್ಯ ದುನಿಯಾ ಸೂರಿ ನಿರ್ದೇಶನಕ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ದರ್ಶನ್ ನಟನೆಯ ಯಜಮಾನ ಚಿತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಈ ಕಡೆ ಪುನೀತ್ ಅಭಿನಯಿಸಲಿರುವ ಯುವರತ್ನ ಚಿತ್ರದಲ್ಲೂ ಬಣ್ಣ ಹಚ್ಚಲಿದ್ದಾರೆ.

  Read more about: dhananjaya ಧನಂಜಯ್
  English summary
  Dhananjay is all set to get back to playing a 'bad man' in his upcoming film, Daali. now, daali movie first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X