Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: ಧನ್ಯಾ ರಾಮ್‌ಕುಮಾರ್ 3ನೇ ಕನ್ನಡ ಸಿನಿಮಾ 'ಹೈಡ್ & ಸೀಕ್'!
ಕನ್ನಡದ ವರನಟ ಡಾ.ರಾಜಕುಮಾರ್ ಕುಟುಂಬದಿಂದ ಅವರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ರಾಜ್‌ಕುಮಾರ್ ಮಗಳ ಮಗಳು ಧನ್ಯಾ ರಾಮ್‌ಕುಮಾರ್ ಮೊದಲ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. 'ನಿನ್ನ ಸನಿಹಕೆ' ಸಿನಿಮಾದ ಮೂಲಕ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.
ರಾಜ್ ಕುಮಾರ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದು, ಬಿಗ್ ಪರದೆ ಮೇಲೆ ಕಾಣಿಸಿಕೊಂಡ ಮೊದಲ ನಟಿ ಧನ್ಯಾ ರಾಮ್‌ಕುಮಾರ್. ಧನ್ಯಾ ಉತ್ತಮ ಕಲಾವಿದೆ ಎನ್ನುವುದನ್ನು ತಮ್ಮ ಮೊದಲ ಸಿನಿಮಾದ ಮೂಲಕ ಈಗಾಗಲೇ ಸಾಬೀತು ಮಾಡಿದ್ದಾರೆ.
ಧನ್ಯಾ
ರಾಮ್‌ಕುಮಾರ್
ತೆಲುಗು,
ತಮಿಳಿಗೆ
ಎಂಟ್ರಿಗೆ
ಮುಹೂರ್ತ
ಫಿಕ್ಸ್!
'ನಿನ್ನ ಸನಿಹಕೆ' ಚಿತ್ರದ ಬಳಿಕ ಧನ್ಯಾ ಅವರನ್ನು ಹುಡುಕಿಕೊಂಡು ಸಾಲು-ಸಾಲು ಸಿನಿಮಾಗಳು ಬರುತ್ತಿವೆ. ಕನ್ನಡದಲ್ಲಿ ಕೂಡ ಒಂದಷ್ಟು ಕಥೆಗಳನ್ನು ಕೇಳಿ ಸಿನಿಮಾವನ್ನು ಒಪ್ಪಿಕೊಂಡಿರುವ ಧನ್ಯಾ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಸುದ್ದಿ ಹೊರ ಬಂದಿದೆ.

ಸಿಕ್ಕಾ ಪಟ್ಟೆ ಬ್ಯುಸಿ ಆದ್ರು ಧನ್ಯಾ ರಾಮ್‌ಕುಮಾರ್!
ಡಾ. ರಾಜ್‌ಕುಮಾರ್ ಕುಟುಂಬದಿಂದ ಬಣ್ಣದ ಲೋಕಕ್ಕೆ ನಾಯಕಿಯಾಗಿ ಎಂಟಿ ಕೊಟ್ಟ ಮೊದಲ ಹುಡುಗಿ ಅಂದರೆ ಅದು ಧನ್ಯಾ ರಾಮ್‌ಕುಮಾರ್. ಧನ್ಯಾ ರಾಮ್‌ಕುಮಾರ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಅವರ 3ನೇ ಕನ್ನಡ ಸಿನಿಮಾ ಪ್ರಕಟ ಆಗಿದೆ. ಈ ಬಗ್ಗೆ ಫಿಲ್ಮೀಬೀಟ್ ಜೊತೆಗೆ ಧನ್ಯಾ ರಾಮ್‌ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ತಮಿಳಿಗೆ
ಎಂಟ್ರಿ!
ವಿಜಯ್
ಸಿನಿಮಾದಲ್ಲಿ
ಧನ್ಯಾ
ರಾಮ್‌ಕುಮಾರ್?

ಧನ್ಯಾ ರಾಮ್‌ಕುಮಾರ್ 'ಹೈಡ್ & ಸೀಕ್'!
ಧನ್ಯಾ ರಾಮ್‌ಕುಮಾರ್ 'ನಿನ್ನ ಸನಿಹಕೆ' ಸಿನಿಮಾದ ಬಳಿಕಾ, ಕಾಲಪತ್ಥರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ನಟಿ ಧನ್ಯಾ ಅವರ 3ನೇ ಕನ್ನಡ ಸಿನಿಮಾ 'ಹೈಡ್ ಅಂಡ್ ಸೀಕ್'. ಈ ಚಿತ್ರದಲ್ಲಿ ಧನ್ಯಾ ಜೊತೆಗೆ ಅನೂಪ್ ರೇವಣ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಪುನೀತ್ ಗೌಡ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಸಿನಿಮ ಸೆಟ್ಟೇರಲಿದೆ.

ತೆಲುಗು- ತಮಿಳಿಗೆ ಧನ್ಯಾ ರಾಮ್‌ಕುಮಾರ್ ಎಂಟ್ರಿ!
ನಟಿ ಧನ್ಯಾ ರಾಮ್‌ಕುಮಾರ್‌ಗೆ ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಸಾಲು-ಸಾಲು ಸಿನಿಮಾ ಆಫರ್‌ಗಳು ಅಲ್ಲಿಂದಲೇ ಬರುತ್ತಿವೆಯಂತೆ. ಆದರೆ ಕಥೆಯನ್ನು ಕೇಳಿ, ಅಳೆದು ತೂಗಿ ತಮಗೆ ಸರಿಹೊಂದುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಧನ್ಯಾ. ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲೂ ಕೂಡ ಧನ್ಯಾ ರಾಮ್‌ಕುಮಾರ್ ಸಿನಿಮಾ ಮಾಡಲಿದ್ದಾರೆ.

ಸದ್ಯದಲ್ಲೇ ತಮಿಳು, ತೆಲುಗು ಸಿನಿಮಾ ಪ್ರಕಟ!
ಇನ್ನು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಸಿನಿಮಾಗಳನ್ನು ಮಾಡುತ್ತಿದ್ದು, ಕಥೆಯನ್ನು ಕೇಳಿ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಕೊನೆಯ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ದಿನದಲ್ಲಿ ಸಿನಿಮಾವನ್ನು ಪ್ರಕಟ ಮಾಡಲಾಗುತ್ತದೆ. ಈ ಮಾಹಿತಿಯನ್ನು ಆಯಾ ಸಿನಿಮಾ ತಂಡಗಳು ಅಧಿಕೃತವಾಗಿ ಪ್ರಕಟಗೊಳಿಸಲಿವೆ. ಇದಕ್ಕೆ ಸಕಲ ಸಿದ್ಧತೆ ಕೂಡ ನಡೆದಿವೆ.