For Quick Alerts
  ALLOW NOTIFICATIONS  
  For Daily Alerts

  'ಖಡಕ್' ಧರ್ಮಗೆ ಸ್ಟೈಲಿಶ್ ನಟಿ ಅನುಷಾ ರೈ ನಾಯಕಿ

  |

  ಧರ್ಮ ಕೀರ್ತಿರಾಜ್ ಅಭಿನಯದ 'ಖಡಕ್' ಸಿನಿಮಾ ಇತ್ತೀಚಿಗಷ್ಟೆ ಸೆಟ್ಟೇರಿತ್ತು. ಆರ್.ಟಿ. ನಗರದ ಸಾಯಿಬಾಬು ದೇವಸ್ಥಾನದಲ್ಲಿ ಮುಹೂರ್ತ ಮಾಡಿಕೊಂಡಿದ್ದ ಈ ಚಿತ್ರಕ್ಕೆ 'ಡಿ ಬಾಸ್' ದರ್ಶನ್ ಕ್ಲಾಪ್ ಮಾಡಿ ಶುಭ ಕೋರಿದ್ದರು.

  ಲವರ್ ಬಾಯ್ ಇಮೇಜ್ ನಿಂದ ಆಕ್ಷನ್ ಹೀರೋ ಆಗಿ ಮಿಂಚುತ್ತಿರುವ ಧರ್ಮ ಕೀರ್ತಿರಾಜ್ 'ಖಡಕ್' ಸಿನಿಮಾದಲ್ಲಿ ಮತ್ತಷ್ಟು ಮಾಸ್ ಹೀರೋ ಆಗಿ ಅಬ್ಬರಿಸಲಿದ್ದಾರೆ. ಧರ್ಮಗೆ ಈ ಚಿತ್ರದಲ್ಲಿ ನಾಯಕಿಯಾಗಿ ಯುವನಟಿ ಅನುಷಾ ರೈ ಕಾಣಿಸಿಕೊಂಡಿದ್ದಾರೆ. ಮಾಡರ್ನ್ ಕಾಲೇಜ್ ಹುಡುಗಿ ಪಾತ್ರದಲ್ಲಿ ಅನುಷಾ ನಟಿಸುತ್ತಿದ್ದು, ಸಿನಿಮಾ ಬಗ್ಗೆ ತಾವು ಕೂಡ ಥ್ರಿಲ್ಲಿಂಗ್ ಆಗಿದ್ದಾರಂತೆ.

  'ರಾಜಕುಮಾರಿ'ಯಾಗಿ ಬಂದ ಆಂಜನೇಯನ ಭಕ್ತೆ ಅನುಷಾ ರೈ

  ಅದರಲ್ಲೂ ನೆಚ್ಚಿನ ನಟ ದರ್ಶನ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು, ಮತ್ತಷ್ಟು ಜೋಶ್ ತಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ ಅನುಷಾ. ನಟಿ ಅನುಷಾ ಬಗ್ಗೆ ಹೇಳುವುದಾರೇ ಈಗಾಗಲೇ ಮಹಾಭಾವರು, ಗೋಸಿಗ್ಯಾಂಗ್, ಬಿಎಂಡಬ್ಲ್ಯೂ, ಕರ್ಷಣಂ ಅಂತಹ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಾಜಕುಮಾರಿ, ನಾಗಕನ್ನಿಕೆ, ಅಣ್ಣಯ್ಯ ಅಂತಹ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

  ಇನ್ನುಳಿದಂತೆ ರಾಜರತ್ನ ಖಡಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಲ್ಲಿ ಮತ್ತು ಸಿದ್ದರಾಮಯ್ಯ ಸಿಂಗಾಪುರ ಬಂಡವಾಳ ಹಾಕಿದ್ದಾರೆ. ಧರ್ಮಕೀರ್ತಿರಾಜ್ ಎದುರು ವಿಲನ್ ಆಗಿ ಕಬೀರ್ ದುಹಾನ್ ಸಿಂಗ್ ನಟಿಸುತ್ತಿರುವುದು ವಿಶೇಷ. ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿರುವ ಖಡಕ್ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ.

  English summary
  Kannada actor Dharma keerthiraj starrer new movie kadak start shooting. the movie directed by rajarathna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X