ರುಸ್ತುಂ ಸೆಟ್ ನಲ್ಲಿ ಕಾಣಿಸಿಕೊಂಡ ಶಿವಣ್ಣನ ಅಳಿಯ

Recommended Video

ರುಸ್ತುಂ ಸೆಟ್ ನಲ್ಲಿ ಕಾಣಿಸಿಕೊಂಡ ಶಿವಣ್ಣನ ಅಳಿಯ..! | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ರುಸ್ತುಂ ಚಿತ್ರೀಕರಣ ಬಹುತೇಕ ಮುಗಿಯುತ್ತಾ ಬಂದಿದೆ.

ಇತ್ತೀಚಿಗಷ್ಟೆ ರುಸ್ತುಂ ಚಿತ್ರದ ಮೇಕಿಂಗ್ ಫೋಟೋಗಳು ಬಿಡುಗಡೆಯಾಗಿದ್ದು, ಶಿವಣ್ಣನ ನಯಾ ಲುಕ್ ಅಭಿಮಾನಿಗಳ ಕಣ್ಣುಕುಕ್ಕುತ್ತಿದೆ. ಇದರ ಬೆನ್ನಲ್ಲೆ ಈಗ ಚಿತ್ರೀಕರಣ ಸೆಟ್ ಗೆ ಶಿವರಾಜ್ ಕುಮಾರ್ ಅವರ ಅಳಿಯ ಅಂದ್ರೆ, ಸಹೋದರಿಯ ಮಗ ಧೀರನ್ ರಾಮ್ ಕುಮಾರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

Dheeran ram kumar visit to rustum film set

ಹೌದು, ಮಾವನ 'ರುಸ್ತುಂ' ಸಿನಿಮಾ ಸೆಟ್ ಗೆ ಭೇಟಿ ಮಾಡಿದ ಧೀರನ್, ಮಾವನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಹಂಚಿಕೊಂಡಿದ್ದಾರೆ. ಅಂದ್ಹಾಗೆ, ಧೀರನ್ ಮೊದಲ ಸಿನಿಮಾ 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಮೊದಲ ಸಿನಿಮಾದ ತಯಾರಿಯಲ್ಲಿರುವ ಧೀರನ್, ಮಾವ ಶಿವಣ್ಣ ಅಭಿನಯದ ರುಸ್ತುಂ ಸೆಟ್ ಗೆ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ.

Dheeran ram kumar visit to rustum film set

ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ 'ರುಸ್ತುಂ' ಅಡ್ಡಾದಲ್ಲಿ ಕಾಣಿಸಿಕೊಂಡಿದ್ದರು. ಅಂದ್ಹಾಗೆ, ರುಸ್ತುಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿರುವುದು ಸಾಹಸ ನಿರ್ದೇಶಕ ರವಿವರ್ಮ. ಇದು ಇವರ ಚೊಚ್ಚಲ ಸಿನಿಮಾ. ಚಿತ್ರದಲ್ಲಿ ರಚಿತಾ ರಾಮ್, ಶ್ರದ್ದಾ ಶ್ರೀನಾಥ್ ಮತ್ತು ಮಯೂರಿ ಮೂವರು ನಾಯಕಿಯರು ನಟಿಸಿದ್ದಾರೆ. ವಿಶೇಷ ಅಂದರೆ ಖ್ಯಾತ ನಟ ವಿವೇಕ್ ಓಬೆರಾಯ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Shivaraj kumar son in law dheeran ram kumar visit to rustum film set. earlier puneeth rajkumar also visit to rustum shooting set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X