For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾರನ್ನು ಡೈಲಾಗ್ ಕಿಂಗ್ ಮಾಡ್ತಿದ್ದಾರೆ ಚೇತನ್

  By ಕುಸುಮ
  |

  ಸ್ಯಾಂಡಲ್ವುಡ್ನಲ್ಲಿ ಅಬ್ಬರದ ಡೈಲಾಗ್ ಹೊಡೆದೇ 'ಬಹಾದ್ದೂರ್' ಸಿನಿಮಾಗೆ ಹೈಪ್ ಕೊಟ್ಟ ನಿರ್ದೇಶಕ ಚೇತನ್. ಬಹಾದ್ದೂರ್ ಸಿನಿಮಾದಲ್ಲಿ ಮತ್ತೊಮ್ಮೆ ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜಾ ಜೋಡಿ ಮಿಂಚಿದ ನಂತರ 'ಭರ್ಜರಿ' ಓಪನಿಂಗ್ನಲ್ಲೂ ಕಾಣಿಸಿದ್ದು ಅದೇ ಡೈಲಾಗ್ಗಳ ಅಬ್ಬರ.

  ಅರ್ಜುನ್ ಸರ್ಜಾ, ಪವರ್ಸ್ಟಾರ್ ಪುನೀತ್, ಕ್ರೇಜಿಸ್ಟಾರ್ ರವಿಚಂದ್ರನ್ರಂತಹಾ ದಿಗ್ಗಜರು ಸೇರಿದ್ದ ಚಿತ್ರದ ಮುಹೂರ್ತಕ್ಕೆ ರೆಡಿಯಾಗಿದ್ದ ಫಸ್ಟ್ ಶಾಟ್ನಲ್ಲಿ ಧ್ರುವ ಸರ್ಜಾ, ಹುಲಿ ಸಿಂಹ ಆನೆ ಅಂತ ಕಾಡುಪ್ರಾಣಿಗಳ ಬಗ್ಗೆ ಡೈಲಾಗ್ ಹೇಳಿ ಭರ್ಜರಿ ಚಪ್ಪಾಳಿ ಗಿಟ್ಟಿಸಿಕೊಂಡ್ರು.

  'ಭರ್ಜರಿ' ಚಿತ್ರತಂಡದ ಮೂಲಗಳ ಪ್ರಕಾರ, ಈ ಸಿನಿಮಾದಲ್ಲೂ ಕೂಡ ಡೈಲಾಗ್ಗಳದ್ದೇ ಹವಾ ಅಂತೆ. ಧ್ರುವ ಸರ್ಜಾ ಮಾಸ್ ಡೈಲಾಗ್ ಮೂಲಕವೇ ವಿಲನ್ ಪತರಗುಟ್ಟುವಂತೆ ಮಾಡ್ತಾರಂತೆ! ಡೈಲಾಗ್ ಗಳು ಹೇಗೆ ಇರಲಿ ಮನಸು ಮುಟ್ಟುವ ಸಿನಿಮಾ ಮಾಡಿ ಅಂತ ಸಿನಿಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ. ['ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ]


  'ಭರ್ಜರಿ' 15 ಕೋಟಿ ಬಜೆಟ್ನಲ್ಲಿ ತಯಾರಾಗುತ್ತಿರೋ ಆರ್‌ಎಸ್ ಪ್ರೊಡಕ್ಷನ್ಸ್ ಚಿತ್ರ. ಚಿತ್ರ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗ್ತಿರೋದ್ರಿಂದ ಫೈಟ್ಸ್ಗಳೂ ಕೂಡ ಅಷ್ಟೇ ಡಿಫ್ರೆಂಟ್ ಆಗಿರಲಿವೆಯಂತೆ. ಭರ್ಜರಿ ಒಂದು ಫ್ಯಾಮಿಲಿ ಕಥೆಯ ಜೊತೆಗೆ ಲವಲವಿಕೆಯ ಪ್ರೇಮಕಥೆ ಇರುವ ಸಿನಿಮಾವಾಗಿದ್ದು ಡಿಂಪಲ್ ಬ್ಯೂಟಿ ರಚಿತಾ ರಾಮ್ ಅವರು ಧ್ರುವ ಸರ್ಜಾಗೆ ಮೊದಲ ಬಾರಿ ಜೋಡಿಯಾಗಿದ್ದಾರೆ. [ಡಿಂಪಲ್ ಕೆನ್ನೆಯ ನಟಿಯರಿಗಾಗಿ ನಡೆಯುತ್ತಿದೆ 'ಭರ್ಜರಿ' ಹುಡುಕಾಟ]

  ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುವ ಧ್ರುವ ಸರ್ಜಾ ಅವರ 'ಭರ್ಜರಿ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿಯೇ ನಡೆಯುತ್ತಿದೆ. ಇನ್ನು ಒಂದು ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ನಿರ್ದೇಶಕ ಚೇತನ್ ಫಿಲ್ಮಿಬೀಟ್‌ಗೆ ತಿಳಿಸಿದರು. ಭರ್ಜರಿ ಸಿನೆಮಾ ಭರ್ಜರಿಯಾಗಿಯೇ ತೆರೆ ಮೇಲೆ ಬರೋಕೆ ಬರೋಬ್ಬರಿ 4 ಅಥವಾ 5 ತಿಂಗಳಾದ್ರೂ ಬೇಕು.

  English summary
  Dhruva Sarja to become dialogue king in his forth coming Kannada movie Bharjari. Dialogues are being written to make Dhruva dialogue king. The cinema is directed by Chetan. Rachita Ram is the heroine of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X