»   » ಧ್ರುವ ಸರ್ಜಾ 'ಪೊಗರು' ಮೊದಲಾ 'ಭರ್ಜರಿ'ನಾ?

ಧ್ರುವ ಸರ್ಜಾ 'ಪೊಗರು' ಮೊದಲಾ 'ಭರ್ಜರಿ'ನಾ?

By: ಜೀವನರಸಿಕ
Subscribe to Filmibeat Kannada

ಧ್ರುವ ಸರ್ಜಾ ಎಲ್ಲಿಹೋದರು ಅಂತ ಹುಡುಕಾಡ್ತಿದ್ದವರಿಗೆ ಜಾಸ್ತಿ ಲೇಟಾದ್ರೆ ಕಷ್ಟ ಅಂತ ಧ್ರುವ ಎರಡೆರೆಡು ಸಿನಿಮಾ ಒಪ್ಪಿಕೊಂಡು ಭರ್ಜರಿ ಸುದ್ದಿಕೊಟ್ಟಿದ್ದಾರೆ. ಒಪ್ಪಿಕೊಂಡಿರೋ ಎರಡೂ ಚಿತ್ರಗಳು ಗೆಲುವಿನ ಅಲೆಯಲ್ಲಿರೋ ನಿರ್ದೇಶಕರದ್ದು ಎಂಬುದು ವಿಶೇಷ.

ಹಿಂದಿನ ಸಿನಿಮಾ 'ಬಹಾದ್ದೂರ್' ನಿರ್ದೇಶನ ಮಾಡಿದ್ದ ಚೇತನ್ ಜೊತೆಗೆ 'ಭರ್ಜರಿ' ಅನ್ನೋ ಟೈಟಲ್ ನಲ್ಲಿ ಸಿನಿಮಾ ಮಾಡ್ತಿರೋ ಧ್ರುವ ಸರ್ಜಾ ಮತ್ತೊಂದು ಕಡೆ ರನ್ನ ನಿರ್ದೇಶಕ ನಂದ ಕಿಶೋರ್ ಗೆ 'ಕಂದಿರೀಗ' ರೀಮೇಕ್ 'ಪೊಗರು' ಅನ್ನೋ ಟೈಟಲ್ ನಲ್ಲಿ ನಟಿಸೋದಕ್ಕೂ ಓಕೆ ಅಂದಿದ್ದಾರೆ. ['ಭರ್ಜರಿ'ಯಾಗಿ ಬರುತ್ತಿದ್ದಾರೆ 'ಬಹದ್ದೂರ್' ಧ್ರುವ ಸರ್ಜಾ]


Dhruva Sarja's Bharjari or Pogaru which one is first?

'ಪೊಗರು' ಚಿತ್ರದ ಆಡಿಯೋ ರೆಕಾರ್ಡಿಂಗ್ ಇಂದಿನಿಂದ (ಏ.21) ಶುರುವಾಗಿದೆ. ಆದ್ರೆ ಕನ್ಫ್ಯೂಶನ್ ಇರೋದು 'ಭರ್ಜರಿ' ಮೊದಲಾ? 'ಪೊಗರು' ಮೊದಲಾ ಅನ್ನೋದು. ಹಾಗೆ ನೋಡಿದ್ರೆ ನಂದಕಿಶೋರ್ ಇನ್ನೂ ಒಂದು ತಿಂಗಳು ಫ್ರೀ ಇಲ್ಲ.


ಇನ್ನೊಂದು ಕಡೆ ಚೇತನ್ ಅವರು 'ಭರ್ಜರಿ' ತಯಾರಿಯಲ್ಲಿದ್ದಾರೆ. ಯಾವುದು ಮೊದಲಾದ್ರೂ ಚಿತ್ರಪ್ರೇಮಿಗಳಿಗೆ 'ಭರ್ಜರಿ' ಪೊಗರಿನ ದರ್ಶನವಾಗೋದ್ರಲ್ಲಿ ಅನುಮಾನವಿಲ್ಲ. ಇಷ್ಟಕ್ಕೂ ಧ್ರುವ ಸರ್ಜಾ ಯಾಕಿಷ್ಟು ಟೈಮ್ ತಗೊಂಡ್ರು ಅಂದ್ರೆ...


'ಬಹದ್ದೂರ್' ಸಿನಿಮಾ ಆದ್ಮೇಲೆ ಧ್ರುವ ಸರ್ಜಾ 53 ಕಥೆಗಳನ್ನು ಕೇಳಿದ್ದಾರೆ. ಕಥೆ-ಚಿತ್ರಕಥೆ ವಿಷಯದಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿರುವ ಧ್ರುವ ಸರ್ಜಾ, ಬರೋಬ್ಬರಿ 53 ಕಥೆಗಳನ್ನ ಕೇಳಿ ರಿಜೆಕ್ಟ್ ಮಾಡಿದ್ದರು. ಇದೀಗ ಭರ್ಜರಿ ಮತ್ತು ಪೊಗರು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದ್ದಾರೆ.

English summary
After back to back two hit movies Dhruva Sarja's two movies are announced. One is Bharjari and another one is Pogaru. But fans are confused about which one is to release first?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada