For Quick Alerts
  ALLOW NOTIFICATIONS  
  For Daily Alerts

  ಹೊಸ ನಿರ್ಧಾರಕ್ಕೆ ಬಂದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  By Bharath Kumar
  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂಡಸ್ಟ್ರಿಗೆ ಬಂದು ಸುಮಾರು 6 ವರ್ಷ ಆಗೋಗಿದೆ. ಆದ್ರೆ, ಇಲ್ಲಿಯವರೆಗೂ ಮಾಡಿರುವುದು ಮಾತ್ರ ಮೂರೇ ಸಿನಿಮಾ. ಆ ಮೂರು ಚಿತ್ರವೂ ಸೂಪರ್ ಹಿಟ್ ಎನ್ನುವುದು ಧ್ರುವಗೆ ಸಿಕ್ಕಿರೋ ಯಶಸ್ಸು.

  ಆದ್ರೆ, ಧ್ರುವ ಸರ್ಜಾ ಯಾಕೆ ಎರಡು ವರ್ಷಕ್ಕೊಂದು ಸಿನಿಮಾ ಮಾಡ್ತಾರೆ, ವರ್ಷಕ್ಕೆ ಒಂದು ಅಥವಾ ಎರಡು ಮಾಡಬಹುದು ಅಲ್ವಾ ಎಂದು ಅವರ ಅಭಿಮಾನಿಗಳು ಕಾಯ್ತಿರುರ್ತಾರೆ. ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂಬ ಕಾರಣಕ್ಕೋ ಏನೋ ಧ್ರುವ ಹೊಸ ನಿರ್ಧಾರ ಮಾಡಿಬಿಟ್ಟಿದ್ದಾರೆ.

  ಹೌದು, ಇನ್ಮುಂದೆ ಆಕ್ಷನ್ ಪ್ರಿನ್ಸ್ ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರಂತೆ. ಒಂದು ಸಿನಿಮಾದ ನಂತರವೇ ಇನ್ನೊಂದು ಸಿನಿಮಾವನ್ನ ಆರಂಭಿಸುತ್ತಾರಂತೆ.

  ಸದ್ಯ, ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎರಡು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಒಂದು ಪಾತ್ರಕ್ಕಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮತ್ತೆ ಇನ್ನೊಂದು ಪಾತ್ರಕ್ಕಾಗಿ ಮತ್ತೆ ತೂಕ ಹೆಚ್ಚಿಸಿಕೊಂಡಿದ್ದಾರೆ.

  'ಪೊಗರು' ಚಿತ್ರದ ಮೇಲೆ ಇರುವ ಆತ್ಮವಿಶ್ವಾಸದಿಂದ ಈ ರೀತಿಯ ಪ್ರಯತ್ನ ಮಾಡಿರುವ ಧ್ರುವ, ಮತ್ತಷ್ಟು ಬ್ಯುಸಿಯಾಗಲಿದ್ದಾರೆ. ಪೊಗರು ಸಿನಿಮಾದ ನಂತರ ಉದಯ್ ಮೆಹ್ತಾ ನಿರ್ಮಾಣ ಹಾಗೂ ನಂದಕಿಶೋರ್ ನಿರ್ದೇಶನದ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

  ಅದಾದ ಬಳಿಕ ಜಗ್ಗುದಾದ ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶನದ ಸಿನಿಮಾ ಆರಂಭವಾಗಲಿದೆ. ಈ ಚಿತ್ರದ ಮಾತುಕತೆ ಇನ್ನು ನಡೆಯುತ್ತಿದೆ. ಇದರ ಜೊತೆಗೆ ಮತ್ತಷ್ಟು ಚಿತ್ರಗಳ ಮಾತುಕತೆ ಆಗುತ್ತಿದೆ.

  English summary
  Kannada actor dhruva sarja has taken new decision about his films. Presently he was busy in nanda kishore directional movie pogaru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X