»   » ಸಿಂಪಲ್ಲಾಗಿ ಕಾಯ್ತಾ ಇರಿ 'ಬಹುಪರಾಕ್' ಬರ್ತಾ ಇದೆ

ಸಿಂಪಲ್ಲಾಗಿ ಕಾಯ್ತಾ ಇರಿ 'ಬಹುಪರಾಕ್' ಬರ್ತಾ ಇದೆ

By: ಜೀವನರಸಿಕ
Subscribe to Filmibeat Kannada

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ನಿರ್ದೇಶಕ ಸುನಿ ನಿರ್ದೇಶನದ 'ಬಹುಪರಾಕ್' ಚಿತ್ರದ ಶೂಟಿಂಗ್ ಮುಗಿದಿದೆ. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮೇಘನಾ ಸುಂದರ್ ರಾಜ್ ಜೋಡಿಯಾಗಿರೋ 'ಬಹುಪರಾಕ್' ಚಿತ್ರ 2014ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

ಇಲ್ಲಿ ಶ್ರೀನಗರ ಕಿಟ್ಟಿ ಅನ್ನೋ ಸ್ಟಾರ್ ಒಬ್ಬರ ಸಿನಿಮಾಗೆ ಅಭಿಮಾನಿಗಳು ಹೇಗೆ ಕಾಯ್ತಿದ್ದಾರೋ ಹಾಗೇ ಸುನಿ ನಿರ್ದೇಶಕನ ಸಿನಿಮಾಗೆ ಕಾಯ್ತಿದ್ದಾರೆ. ಯಾಕಂದ್ರೆ ತನ್ನ ಅದ್ಭುತ ಮೇಕಿಂಗ್ ಮತ್ತು ಡೈಲಾಗ್ ಗಳಿಂದ ಯುವ ಸಿನಿಪ್ರೇಮಿಗಳಿಗೆ ಥ್ರಿಲ್ ಕೊಟ್ಟ ನಿರ್ದೇಶಕ ಸುನಿಯವರ ಎರಡನೇ ಚಿತ್ರ ಇದು. [ನಾಯಕಿ ಎದೆಗೇ ಕೈಹಾಕಿದ ನಾಯಕ]


ಬಹುಪರಾಕ್ ಚಿತ್ರ ಸಾಕಷ್ಟು ವಿಶೇಷತೆಗಳನ್ನ ಹೊಂದಿದ್ದು ಅದ್ಧೂರಿಯಾಗಿ ಶೂಟ್ ಮಾಡಿರೋ ಸಿನಿಮಾ. ಬರುವ ಫೆಬ್ರುವರಿ ಅಥವಾ ಮಾರ್ಚ್ ವೇಳೆಗೆ ತಯಾರಾಗಲಿರೋ ಸಿನಿಮಾ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ರಿಲೀಸಾಗಿ ಹೆಚ್ಚೂ ಕಡಿಮೆ ಒಂದು ವರ್ಷಕ್ಕೆ ಸರಿಯಾಗಿ 'ಬಹುಪರಾಕ್' ತೆರೆಗೆ ಬರಲಿದೆ.

ಇಲ್ಲೂ ಸುನಿಯವರ ಸಿಂಪಲ್ ಡೈಲಾಗ್ ಗಳ ಥ್ರಿಲ್ ಇರಲಿದೆಯಂತೆ. ಅದೆಲ್ಲಾ ಹೇಗಿರುತ್ತೆ ಅಂತ ನೋಡೋಕೆ ಅಲ್ಲೀವರ್ಗೂ ಕಾಯ್ಲೇಬೇಕು. ತೀರಾ ಇತ್ತೀಚೆಗೆ ಈ ಚಿತ್ರಕ್ಕಾಗಿ ಕಾಕ್ಸ್ ಟೌನ್ ಸ್ಮಶಾನದಲ್ಲಿ ಐಟಂ ಹಾಡನ್ನು ಚಿತ್ರೀಕರಿಸಲಾಯಿತು. [ಎಂದೆಂದಿಗೂ ಚಿತ್ರದಿಂದ ಕಿಟ್ಟಿ ಔಟ್]

ಐಟಂ ಹಾಡಿನ ಸಾಹಿತ್ಯವನ್ನು ಬರೆದವರು ಚಿತ್ರದ ನಿರ್ದೇಶಕರು ಸುನಿ. "ಸಾಂಗ್ ಬೇಕಾ ಐಟಂ ಸಾಂಗ್..." ಎಂದು ಸಾಗುವ ಹಾಡಿಗೆ ಭಾವನಾ ತಮ್ಮ ಮೈಮಾಟ ತೋರಿಸಿದ್ದಾರೆ. ಗಾಳಿಪಟ, ವಾರೆವ್ಹಾ ಚಿತ್ರಗಳಲ್ಲಿ ಅಭಿನಯಿಸಿದ್ದ ಭಾವನಾ ರಾವ್ ಈ ಚಿತ್ರದ ಮೂಲಕ ಐಟಂ ಲೋಕಕ್ಕೆ ಲಗ್ಗೆ ಹಾಕಿದ್ದಾರೆ.

English summary
Diamond Star Srinagara Kitty upcoming movie 'Bahuparak' ready. The movie is suppose to release in February 2014 directed by Sunil Kumar. starring Srinagara Kitty, Meghana Sundar Raj and others in the cast. Produced by Hemanth.
Please Wait while comments are loading...