Just In
Don't Miss!
- News
ಕರ್ನಾಟಕದಲ್ಲಿ 573 ಕೊರೊನಾ ಸೋಂಕಿತರು ಪತ್ತೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊರೊನಾ ಲಾಕ್‌ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಂಡ ದಿಗಂತ್
ಕೊರೊನಾ ಲಾಕ್‌ಡೌನ್ ಎಲ್ಲರನ್ನೂ ಮನೆಯಲ್ಲಿಯೇ ಉಳಿಯುವಂತೆ ಮಾಡಿತು. ಲಾಕ್‌ಡೌನ್ ಎಂಬುದು ಹಲವರನ್ನು ಇನ್ನಷ್ಟು ಆಲಸಿಗಳನ್ನಾಗಿ ಮಾಡಿದರೆ ಕೆಲವರು ಹೊಸತನ್ನು ಕಲಿತುಕೊಳ್ಳಲು ದಾರಿ ಮಾಡಿಕೊಟ್ಟಿತು.
ಕೊರೊನಾ ಲಾಕ್‌ಡೌನ್‌ನ ಅಮೂಲ್ಯ ಸಮಯವನ್ನು ಸದ್ಬಳಕೆ ಮಾಡಿಕೊಂಡ ಹಲವರಲ್ಲಿ ನಟ ದಿಗಂತ್ ಸಹ ಒಬ್ಬರು. ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ಸಕ್ರಿಯರಾಗಿದ್ದ ದಿಗಂತ್ ಹಲವು ಹೊಸತನ್ನು ಕಲಿತುಕೊಂಡಿದ್ದಾರೆ, ಹೊಸ-ಹೊಸ ಸಾಹಸಗಳಿಗೆ ಕೈ ಹಾಕಿದ್ದಾರೆ.
ಫೋಟೋ ವೈರಲ್; ಬೀಚ್ ನಲ್ಲಿ ದಿಗಂತ್ ಮತ್ತು ಐಂದ್ರಿತಾ ದಂಪತಿಯ ಮಸ್ತಿ
ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ದಿಗಂತ್ ಹೇಳಿರುವಂತೆ, ಈ ಲಾಕ್‌ಡೌನ್ ಅವಧಿಯಲ್ಲಿ ಅವರು 'ರಾಕ್ ಕ್ಲೈಂಬಿಗ್, ಕುಂಫು, ಸರ್ಫಿಂಗ್ ಕ್ರೀಡೆಗಳನ್ನು ಕಲಿತಿದ್ದಾರೆ. ಇವುಗಳನ್ನು ಕಲಿಯಬೇಕು ಎಂದು ಬಹಳ ದಿನಗಳಿಂದಲೂ ಆಸೆಯಿಟ್ಟುಕೊಂಡಿದ್ದರು ದಿಗಂತ್.

ದಿಗಂತ್ ದೈನಂದಿನ ಜೀವನದ ಭಾಗವಾದ ಸೈಕ್ಲಿಂಗ್
ಸೈಕ್ಲಿಂಗ್ ಆಸಕ್ತಿಯನ್ನು ಹವ್ಯಾಸವನ್ನಾಗಿ ಸಹ ಬದಲಾಯಿಸಿಕೊಂಡಿದ್ದಾರೆ ದಿಗಂತ್, ಈಗ ಸೈಕ್ಲಿಂಗ್ ಎಂಬುದು ದಿಗಂತ್ ಅವರ ಜೀವನದ ಭಾಗವೇ ಆಗಿ ಹೋಗಿದೆ. ನೂರಾರು ಕಿ.ಮೀ ಸೈಕಲ್ ತುಳಿಯುತ್ತಾರೆ ನಟ ದಿಗಂತ್, ಇತ್ತೀಚೆಗಷ್ಟೆ, ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ತುಳಿದಿದ್ದರು ಅವರು.
ಬೆಂಗಳೂರು to ಹಾಸನ: 192 ಕಿ.ಮೀ ಸೈಕಲ್ ತುಳಿದ ದಿಗಂತ್!

ಈ ವರ್ಷ ನನಗೆ ಉತ್ತಮವಾಗಿಯೇ ಇತ್ತು: ದಿಗಂತ್
'ಈ ವರ್ಷ ನನಗೆ ಉತ್ತಮವಾಗಿಯೇ ಇತ್ತು ಎಂದಿರುವ ದಿದಗಂತ್, 'ಗಾಳಿಪಟ 2', 'ಹುಟ್ಟುಹಬ್ಬದ ಶುಭಾಶಯ', 'ಮಾರಿಗೋಲ್ಡ್', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. 'ಹುಟ್ಟುಹಬ್ಬದ ಶುಭಾಶಯ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ತೆಲುಗಿನ 'ಎವರು' ಸಿನಿಮಾದ ರೀಮೇಕ್ ನಲ್ಲಿ ನಟಿಸಲಿದ್ದೇನೆ, ಆರು ತಿಂಗಳು ಕೆಲಸವಿಲ್ಲದೇ ಕೂತಿದ್ದರೂ ಸಹ ವರ್ಷಾಂತ್ಯದಲ್ಲಿ ಮತ್ತೆ ಬ್ಯುಸಿಯಾಗಿದ್ದೇನೆ' ಎಂದಿದ್ದಾರೆ ದಿಗಂತ್.

ಇಬ್ಬರು ನಿರ್ದೇಶಕರೊಂದಿಗೆ ಮಾತುಕತೆ
ಇಷ್ಟೇ ಅಲ್ಲದೆ, ದಿಗಂತ್ ಅವರ ಸಾಹಸಕ್ರೀಡೆಗಳನ್ನು ಕಂಡು ಸ್ಪೂರ್ತಿಪಡೆದು ಕತೆಯೊಂದನ್ನು ಹೆಣೆದು ಕೊಂಡು ಬಂದಿದ್ದಾರಂತೆ ನಿರ್ದೇಶಕ ಶ್ರೀನಿವಾಸ್. ಶಾರ್ಪ್ ಶೂಟರ್ ಸಿನಿಮಾದ ನಿರ್ದೇಶಕ ಗೌಸ್ ಫೀರ್ ಜೊತೆಗೆ ಸಹ ಸಿನಿಮಾ ಒಂದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ದಿಗಂತ್.

ಸಿಸಿಬಿ ವಿಚಾರಣೆ ಎದುರಿಸಿದ ನಟ ದಿಗಂತ್
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಹೆಸರು ಕೇಳಿಬಂದಿತ್ತು. ಅವರನ್ನು ಹಾಗೂ ಪತ್ನಿ ಐಂದ್ರಿತಾ ರೇ ಅನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ನಂತರ ದಿಗಂತ್ ಅವರನ್ನು ವಿಚಾರಣೆಗೆ ಕರೆಯಲಿಲ್ಲ.