For Quick Alerts
  ALLOW NOTIFICATIONS  
  For Daily Alerts

  ಶೆಟ್ಟಿ ಗ್ಯಾಂಗ್ ಸೇರಿದ ದಿಗಂತ್! 'ಕಿರಿಕ್ ಪಾರ್ಟಿ' ಮಾದರಿಯ ಸಿನಿಮಾ!

  |

  ಕಳೆದ ತಿಂಗಳಾಂತ್ಯದಲ್ಲಿ ಆಗಿದ್ದ ಗಾಯದಿಂದ ದಿಗಂತ್ ಬಹುತೇಕ ಚೇತರಿಸಿಕೊಂಡಿದ್ದಾರೆ. ಇನ್ನೂ ಚಿತ್ರೀಕರಣಕ್ಕೆ ಮರಳಿಲ್ಲವಾದರೂ, ಕೆಲವೇ ದಿನಗಳಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

  ಈ ನಡುವೆ ದಿಗಂತ್‌ಗೆ ಹೊಸ ಸಿನಿಮಾದ ಆಫರ್‌ ಒಂದು ಅರಸಿ ಬಂದಿದೆ. ರಕ್ಷಿತ್ ಶೆಟ್ಟಿಯ ಪರಮ್ವಹ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ದಿಗಂತ್. ವಿಶೇಷವೆಂದರೆ ದಿಗಂತ್‌ ಜೊತೆಗೆ ರಿಷಬ್ ಶೆಟ್ಟಿ ಸಹ ಅದೇ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

  ತೆಲುಗು ಟಾಪ್ ನಟರ ಬಗ್ಗೆ ಕೃತಿ ಶೆಟ್ಟಿ ಕಮೆಂಟ್!ತೆಲುಗು ಟಾಪ್ ನಟರ ಬಗ್ಗೆ ಕೃತಿ ಶೆಟ್ಟಿ ಕಮೆಂಟ್!

  'ಕಿರಿಕ್ ಪಾರ್ಟಿ' ಮಾದರಿಯಲ್ಲಿಯೇ ಮನೊರಂಜನಾತ್ಮಕ ಕಾಲೇಜ್ ಕತೆ ಇದಾಗಿರದ್ದು, 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಕೆಲಸ ಮಾಡಿದ ಅಭಿಜಿತ್ ಮಹೇಶ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

  ಸದ್ಯಕ್ಕೆ ಕತೆ, ಚಿತ್ರಕತೆಯನ್ನು ಅಭಿಜಿತ್ ಮಹೇಶ್ ಪೂರ್ಣಗೊಳಿಸಿದ್ದು, ಇತರೆ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಜಾರಿಯಲ್ಲಿದೆ. ಅದಾದ ಕೂಡಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

  ಕಿರಿಕ್ ಪಾರ್ಟಿಗೆ 'ಸೆವೆನ್ ಆಡ್ಸ್' ಹೆಸರಿನಲ್ಲಿ ಏಳು ಜನ ಕತೆಗಾರರಾಗಿ, ಸಹಾಯಕರಾಗಿ ಕೆಲಸ ಮಾಡಿದ್ದರು. ಅವರಿಗೆಲ್ಲ ಸಿನಿಮಾ ನಿರ್ಮಾಣ ಮಾಡುವ ಕನಸು ರಕ್ಷಿತ್ ಶೆಟ್ಟಿಯದ್ದಾಗಿತ್ತು. ಅಂತೆಯೇ ಪರಮ್ವಹಾ ಸ್ಟುಡಿಯೋಸ್‌ನಿಂದ ರಕ್ಷಿತ್ ಶೆಟ್ಟಿ ಇದೀಗ ಅವರೆಲ್ಲರಿಗೂ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ.

  ಅಭಿಜಿತ್ ಮಹೇಶ್ ಅಲ್ಲದೆ 'ಕಿರಿಕ್ ಪಾರ್ಟಿ' ತಂಡದಲ್ಲಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಸಹ ಹೊಸದೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದು ಇದಕ್ಕೂ ಸಹ ರಕ್ಷಿತ್ ಶೆಟ್ಟಿಯವರೇ ಬಂಡವಾಳ ಹೂಡುತ್ತಿದ್ದಾರೆ.

  ಈ ಹಿಂದೆಯೇ 'ಸೆವೆನ್ ಆಡ್ಸ್' ನ ನಿರ್ದೇಶಕರ ಸಿನಿಮಾಕ್ಕೆ ಬಂಡವಾಳ ಹೂಡುವ ನಿರ್ಣಯ ಮಾಡಿದ್ದರು.ಇದೀಗ '777 ಚಾರ್ಲಿ' ಸಿನಿಮಾದ ಯಶಸ್ಸಿನ ಹುಮ್ಮಸ್ಸಿನಲ್ಲಿ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದ್ದಾರೆ. ಜೊತೆಗೆ ಪ್ರತಿಭಾವಂತ ಸಹಾಯಕ ನಿರ್ದೇಶಕರಿಗೆ ಅವಕಾಶವನ್ನೂ ನೀಡುತ್ತಿದ್ದಾರೆ.

  ಇನ್ನು ನಟ ದಿಗಂತ್ ಕೈಯಲ್ಲಿ ಈಗಾಗಲೇ ಕೆಲವು ಸಿನಿಮಾಗಳಿವೆ. ದಿಗಂತ್ ನಟಿಸಿರುವ 'ಗಾಳಿಪಟ 2' ಸಿನಿಮಾ ಇನ್ನಷ್ಟೆ ತೆರೆಗೆ ಬರಲಿದೆ. 'ಮಾರಿಗೋಲ್ಡ್', 'ಎಡಗೈ ಅಪಘಾತಕ್ಕೆ ಕಾರಣ', ಹೆಸರಿಡದ ಇನ್ನೊಂದು ಸಿನಿಮಾ ದಿಗಂತ್ ಕೈಯಲ್ಲಿದೆ. ಇದರ ಜೊತೆಗೆ ಈಗ ರಿಷಬ್ ಶೆಟ್ಟಿ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ರಿಷಬ್ ಶೆಟ್ಟಿ ಕೈಯಲ್ಲೂ ಹಲವು ಸಿನಿಮಾಗಳಿವೆ. ಅವರೇ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಬೆನ್ನಲ್ಲೆ 'ಬೆಲ್ ಬಾಟಂ 2', 'ನಾಥೂರಾಮ್', 'ರುದ್ರಪ್ರಯಾಗ' ಸಿನಿಮಾಗಳಲ್ಲಿ ರಿಷಬ್ ನಟಿಸುತ್ತಿದ್ದಾರೆ. ಹಾಗೂ ಶಿವರಾಜ್ ಕುಮಾರ್‌ಗಾಗಿ ಒಂದು ಸಿನಿಮಾ, ರಕ್ಷಿತ್ ಶೆಟ್ಟಿಗಾಗಿ ಮತ್ತೊಂದು ಸಿನಿಮಾವನ್ನು ನಿರ್ದೆಶನ ಸಹ ಮಾಡಲಿದ್ದಾರೆ.

  English summary
  Actor Diganth Manchale and Rishab Shetty acting in same movie. Rakshit Shetty producing the movie.
  Monday, July 11, 2022, 9:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X