»   » ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!

ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!

Posted By:
Subscribe to Filmibeat Kannada

ಇಂದು ಬೆಳಗ್ಗೆ ಟಿವಿ ಆನ್ ಮಾಡಿದ ತಕ್ಷಣ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕಾಣುತ್ತಿದ್ದವರು ಬುಲೆಟ್ ಪ್ರಕಾಶ್! ಇದುವರೆಗೂ ಕಾಮಿಡಿ ಸೀನ್ ಗಳಿಂದ ಕನ್ನಡ ಚಿತ್ರರಂಗದಲ್ಲಿ ಸುದ್ದಿ ಮಾಡಿದ್ದ ಬುಲೆಟ್ ಪ್ರಕಾಶ್ ಇಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಆಪ್ತ ಸ್ನೇಹಿತ ದಿನಕರ್ ತೂಗುದೀಪ ವಿರುದ್ಧ ಜೀವ ಬೆದರಿಕೆ ದೂರು ನೀಡಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ನಿನ್ನೆ ತಡ ರಾತ್ರಿ ದಿನಕರ್ ತೂಗುದೀಪ ಮತ್ತವರ ಆಪ್ತ ಪಿಸ್ತಾ ಸೀನ ಹಾಗು ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಜೊತೆ ಬುಲೆಟ್ ಪ್ರಕಾಶ್ ಗಲಾಟೆ ಮಾಡಿಕೊಂಡಿದ್ದಾರೆ.

ದರ್ಶನ್ ಗಾಗಿ ಬುಲೆಟ್ ಪ್ರಕಾಶ್ ನಿರ್ಮಾಣ ಮಾಡುತ್ತಿರುವ 'ಸುಲ್ತಾನ್' ಸಿನಿಮಾ ವಿಷಯವಾಗಿ ದಿನಕರ್ ತೂಗುದೀಪ ಮತ್ತು ಬುಲೆಟ್ ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದು, ಅದು ಹಲ್ಲೆವರೆಗೂ ಹೋಗಿದ್ದರಿಂದ ಬುಲೆಟ್ ಪ್ರಕಾಶ್ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. [ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

ಇದಿಷ್ಟು ಬುಲೆಟ್ ಪ್ರಕಾಶ್ ರವರ ವರಸೆ ಆದರೆ, ನಿರ್ದೇಶಕ ದಿನಕರ್ ತೂಗುದೀಪ ಹೇಳುವ ಕಥೆಯೇ ಬೇರೆ. 'ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ' ಅಂತ ದಿನಕರ್ ತೂಗುದೀಪ ಮಾಧ್ಯಮಗಳ ಮುಂದೆ ಬಾಂಬ್ ಸಿಡಿಸಿದ್ದಾರೆ.

ಹಾಗಾದ್ರೆ, ನಿನ್ನೆ ರಾತ್ರಿ ನಿಜವಾಗಲೂ ನಡೆದದ್ದು ಏನು? ಮಾಧ್ಯಮಗಳಿಗೆ ದಿನಕರ್ ತೂಗುದೀಪ ಏನು ಹೇಳಿಕೆ ನೀಡಿದ್ದಾರೆ? ಇದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಹತ್ತು ದಿನದ ಹಿಂದೆ ನಡೆದದ್ದು ಏನು?

''ಹತ್ತು ದಿನದ ಹಿಂದೆ ಬುಲೆಟ್ ಪ್ರಕಾಶ್ ದು ಪ್ರೋಗ್ರಾಂ ಬಂತು ಟಿವಿಯಲ್ಲಿ. ಅವನು ದರ್ಶನ್ ಜೊತೆ ಸಿನಿಮಾ ಮಾಡುತ್ತಿರುವುದು, ತಮಿಳು 'ಪೂಜೈ' ರೀಮೇಕ್. ಅದಕ್ಕೆ 'ಸುಲ್ತಾನ್' ಅಂತ ಟೈಟಲ್ ಇಟ್ಟಿರುವುದು ಎಲ್ಲಾ ಪ್ರೋಗ್ರಾಂ ನಲ್ಲಿ ಬಂತು. ಅಷ್ಟಕ್ಕೂ ಈ ಸಿನಿಮಾ ದರ್ಶನ್ ರವರ 52ನೇ ಸಿನಿಮಾ'' - ದಿನಕರ್ ತೂಗುದೀಪ

ಈಗಲೇ ಪಬ್ಲಿಸಿಟಿ ಯಾಕೆ?

''ಜಗ್ಗುದಾದಾ' 47ನೇ ಸಿನಿಮಾ. 48ನೇ ಚಿತ್ರ 'ಚಕ್ರವರ್ತಿ', 49ನೇ ಸಿನಿಮಾ ಮಿಲನ ಪ್ರಕಾಶ್ ರವರದ್ದು. 50ನೇ ಸಿನಿಮಾ ನನ್ನದು 'ಸರ್ವಾಂತರ್ಯಾಮಿ', 51 ನೇಯದ್ದು ಬಿ.ಸುರೇಶ್ ಸಿನಿಮಾ. ಇದಾದ ಮೇಲೆ ಬುಲೆಟ್ ಪ್ರಕಾಶ್ ರದ್ದು. ಆರು ಸಿನಿಮಾ ಆಗ್ಬೇಕು ಅಂದ್ರೆ ಇನ್ನೂ ಮೂರು ವರ್ಷ ಆದರೂ ಬೇಕು. ಅಷ್ಟು ಬೇಗ ಪ್ರಮೋಷನ್ ಮಾಡಿಕೊಂಡು ಬಂದ್ರೆ, ಮಧ್ಯದಲ್ಲಿ ಇರೋರಿಗೆ, ಈ ಸಿನಿಮಾ ಮಧ್ಯದಲ್ಲಿ ಬಂದುಬಿಟ್ಟರೆ ಅಂತ ಟೆನ್ಷನ್ ಆಗಲ್ವಾ'' - ದಿನಕರ್ ತೂಗುದೀಪ

ದಿನಕರ್ ತೂಗುದೀಪ ಹೇಳಿದ್ದೇನು?

''ನಾನು ಬುಲೆಟ್ ಗೆ ಫೋನ್ ಮಾಡಿ ಈಗಲೇ ಪ್ರಮೋಷನ್ ಬೇಡ. ನಿನ್ನ ಸಿನಿಮಾ ಯಾವಾಗ ಬರುತ್ತೆ ಅವಾಗ ಮಾತನಾಡು. ಸುಮ್ನೆ unnecessary ಪ್ರಮೋಷನ್ ಬೇಡ ಅಂತ ಹೇಳ್ದೆ. ಆಗ 'ಆಯ್ತು ಮಗ' ಅಂತ ಇಟ್ಟ'' - ದಿನಕರ್ ತೂಗುದೀಪ

'ಮಾಸ್ತಿ ಗುಡಿ' ಮುಹೂರ್ತದಲ್ಲಿ ಆಗಿದ್ದೇನು?

''ಮೊನ್ನೆ 'ಮಾಸ್ತಿ ಗುಡಿ' ಸಿನಿಮಾ ಸೆಟ್ ನಲ್ಲಿ. ಮುಹೂರ್ತದ ದಿನ ನಾನು ಯಾರ ಹತ್ರನೋ ಹೇಳಿದ್ನಂತೆ, 'ಬುಲೆಟ್ ಸುಮ್ನೆ ಹೇಳಿಕೊಂಡು ಓಡಾಡುತ್ತಿದ್ದಾನೆ. ಆ ಸಿನಿಮಾ ಆಗಲ್ಲ' ಅಂತ. ನಾನು ಯಾರ ಹತ್ರ ಹೇಳಿದ್ದೀನಿ ಹಾಗೆ. ಅವನೇ ಕ್ಲಾರಿಟಿ ಕೊಡಬೇಕು. ನಾನು ಯಾರ ಹತ್ರನೂ ಹಾಗೇ ಹೇಳಿಲ್ಲ'' - ದಿನಕರ್ ತೂಗುದೀಪ

ನಿನ್ನೆ ರಾತ್ರಿ ಆಗಿದ್ದೇನು?

''ನಿನ್ನೆ ರಾತ್ರಿ ನನಗೆ ಫೋನ್ ಮಾಡಿ ಕುಡಿದು ಬಿಟ್ಟು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ಫೋನ್ ನಲ್ಲಿ ಮಾತನಾಡುವುದು ಬೇಡ. ನೇರವಾಗಿ ಮಾತನಾಡೋಣ ಅಂತ ಹೆಬ್ಬಾಳದ ಹತ್ತಿರ ನಮ್ಮದು ಡಿ.ಟಿ.ಎಸ್ ಸ್ಟುಡಿಯೋ ಇದೆ. ಮಂಜರಿ ಅಂತ. ಅಲ್ಲಿಗೆ ಬಾ ಅಂದ'' - ದಿನಕರ್ ತೂಗುದೀಪ

ಏನೂ ಮಾತನಾಡಲಿಲ್ಲ!

''ರಾತ್ರಿ 11.30 ಕ್ಕೆ ಅವನು ಕುಡಿದು ಬಿಟ್ಟಿದ್ದಾನೆ ಫುಲ್. ಜೊತೆಗೆ ಮಗಳನ್ನೂ ಕರೆದುಕೊಂಡು ಬಂದಿದ್ದಾನೆ. ಮಗಳ ಮುಂದೆ ಏನು ಮಾತನಾಡೋದು ಅಂತ ನಾನು ಸುಮ್ಮನಾದೆ. ಹೊರಡುವಾಗ ಅವನೇ ಬಾಯಿಗೆ ಬಂದ ಹಾಗೆ ಮಾತನಾಡಿದ್ದು. ಆಮೇಲೆ ಎಲ್ಲರ ಹತ್ರ ಮಾತನಾಡಿ ನಾನು ಜೀವ ಬೆದರಿಕೆ ಹಾಕಿದ್ದೀನಿ ಅಂತ ಫೋನ್ ಮಾಡಿ ಹೇಳಿದ್ದಾನೆ'' - ದಿನಕರ್ ತೂಗುದೀಪ

ಬರೀ ಸುಳ್ಳು

''ಈಗ ಸಿನಿಮಾಗೂ ಜೀವ ಬೆದರಿಕೆ ಹಾಕುವುದಕ್ಕೂ ಏನು ಸಂಬಂಧ. ಸಿಕ್ಕಾಪಟ್ಟೆ ಸುಳ್ಳು ಹೇಳ್ತಾನೆ ಅವನು'' - ದಿನಕರ್ ತೂಗುದೀಪ

ಎಲ್ಲಾ ಕಡೆ ಯಾಕೆ ಹೇಳಿಕೊಂಡು ಬರ್ಬೇಕು?

''ದರ್ಶನ್ ಡೇಟ್ಸ್ ಮೇನ್ಟೇನ್ ಮಾಡುವುದು ಮಲ್ಲಿಕಾರ್ಜುನ್. ಜೊತೆಗೆ ನಾನೂ ಇದ್ದೀನಿ. ಸಿನಿಮಾ ಬಗ್ಗೆ ಪ್ರಮೋಷನ್ ಆಗಬೇಕು ಅಂದ್ರೆ ಒಂದು ದರ್ಶನ್ ಮಾತನಾಡಬೇಕು, ಇಲ್ಲಾ ಅಂದ್ರೆ ಬುಲೆಟ್ ಮಾತನಾಡಬೇಕು. ದರ್ಶನ್ ಎಲ್ಲೂ ಹೇಳಿಲ್ಲ. ಇವರು ಯಾಕೆ ಎಲ್ಲಾ ಕಡೆ ಹೇಳಿಕೊಂಡು ಬರ್ತಿದ್ದಾರೆ'' - ದಿನಕರ್ ತೂಗುದೀಪ

ಸಿನಿಮಾ ಆಗುತ್ತಾ?

''ಸಣ್ಣ ವಿಷ್ಯವನ್ನ ಇಷ್ಟು ದೊಡ್ಡದು ಮಾಡಿದ ಮೇಲೆ ಮುಂದೆ ರಿಲೇಶನ್ ಶಿಪ್ ಹೇಗಿರುತ್ತೆ ಸ್ವಲ್ಪ ಯೋಚನೆ ಮಾಡಿ. ಮುಂದೆ ಈ ಸಿನಿಮಾ ಆಗುತ್ತೋ, ಇಲ್ವೋ ಅನ್ನೋದು ದೊಡ್ಡ question mark'' - ದಿನಕರ್ ತೂಗುದೀಪ

English summary
Bullet Prakash has lodged complaint in Amruthahalli Police Station, Bengaluru against Director Dinakar Toogudeepa for threatening him last night (February 3rd). Director Dinakar Toogudeepa has reacted to this issue in the media. Read the article to know Dinakar Toogudeepa's reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada