»   » 'ಐಪಿಎಸ್ ರೂಪಾ' ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ, ಯಾರದು?

'ಐಪಿಎಸ್ ರೂಪಾ' ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ, ಯಾರದು?

Posted By:
Subscribe to Filmibeat Kannada

ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಂದ ಬಹಿರಂಗಗೊಂಡು ಜೈಲು ಅಕ್ರಮ ಕುರಿತು ನಿರ್ದೇಶಕ ಎ.ಎಂ.ಆರ್ ರಮೇಶ್ ಸಿನಿಮಾ ಮಾಡುವುದಾಗಿ ಸುದ್ದಿಯಾಗಿತ್ತು. ಈ ಚಿತ್ರ ನಿರ್ಮಾಣವಾಗುವುದು ಈಗ ಬಹುತೇಕ ಖಚಿತವಾಗಿದೆ.

ಇದೀಗ, ತೆರೆಯ ಮೇಲೆ ಡಿಐಜಿ ರೂಪಾ ಅವರ ಪಾತ್ರ ನಿರ್ವಹಿಸುವುದು ಯಾರು ಎಂಬ ಕುತೂಹಲ ಈಗ ಹೆಚ್ಚಾಗಿದೆ. ಈಗಾಗಲೇ ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟಿಯರ ಮೇಲೆ ನಿರ್ದೇಶಕರ ಕಣ್ಣು ಬಿದ್ದಿದೆ.

DIG Roopa will appear on silver screen very shortly as Roopa IPS | Filmibeat Kannada

ಹಾಗಿದ್ರೆ, ದಿಟ್ಟ ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಕೇಳಿ ಬರುತ್ತಿರುವ ಆ ನಾಯಕಿಯರು ಯಾರು? ಮುಂದೆ ಓದಿ....

ರೂಪಾ ಅವರನ್ನ ಭೇಟಿ ಮಾಡಿದ ರಮೇಶ್

ಇತ್ತೀಗಷ್ಟೇ ಡಿಐಜಿ ರೂಪಾ ಅವರನ್ನ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ಭೇಟಿ ಮಾಡಿದ್ದು, 'ರೂಪಾ ಐಪಿಎಸ್' ಸಿನಿಮಾ ಕುರಿತು ಗಂಭೀರವಾದ ಚರ್ಚೆ ನಡೆಸಿದ್ದಾರೆ. ಜೈಲು ಅಕ್ರಮ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಮಾತುಕಥೆ ನಡೆಸಿದ್ದಾರೆ.

ಚಿತ್ರ ನಿರ್ಮಾಣಕ್ಕೆ ಸಮ್ಮತಿ

ತಮ್ಮ ಕುರಿತು ಸಿನಿಮಾ ಮಾಡಲು ನಿರ್ದೇಶಕ ಎಂ.ಆರ್ ರಮೇಶ್ ಅವರಿಗೆ ರೂಪಾ ಅವರು ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಕರ್ತವ್ಯದ ಬಗ್ಗೆ ಸಿನಿಮಾ ನೋಡಲು ಅವರು ಕೂಡ ಕಾತುರರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರಂತೆ.

ಹಾಗಿದ್ರೆ, ತೆರೆಮೇಲೆ ರೂಪಾ ಯಾರು?

ದಿಟ್ಟ ಐಪಿಎಸ್ ಅಧಿಕಾರಿ ಪಾತ್ರಕ್ಕಾಗಿ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಅವರನ್ನ ಕರೆತರುವ ಯೋಚನೆ ಮಾಡಿದ್ದಾರೆ.

ಅನುಷ್ಕಾ ಅವರ ಹೆಸರು ಕೂಡ ಇದೆ

ಕೇವಲ ನಯನತಾರ ಮಾತ್ರವಲ್ಲದೇ, ನಟಿ ಅನುಷ್ಕಾ ಶೆಟ್ಟಿ ಅವರ ಹೆಸರು ಕೂಡ ರೂಪಾ ಪಾತ್ರದಲ್ಲಿ ಕೇಳಿಬರುತ್ತಿದೆ. ನಿರ್ದೇಶಕರು ಈ ಬಗ್ಗೆ ಅಪ್ರೋಚ್ ಮಾಡಬೇಕಿದೆ.

ಕನ್ನಡ ಹಾಗೂ ತಮಿಳಿನಲ್ಲಿ ರೂಪಾ ಸಿನಿಮಾ

ಎಲ್ಲ ಅಂದುಕೊಂಡಂತೆ ಆದರೆ, ಈ ಚಿತ್ರವನ್ನ ಕನ್ನಡ ಹಾಗೂ ತಮಿಳಿನಲ್ಲಿ ನಿರ್ದೇಶಿಸಿ, ನಿರ್ಮಾಣ ಮಾಡುವ ಯೋಚನೆಯಲ್ಲಿದ್ದಾರೆ ನಿರ್ದೇಶಕ ಎ.ಎಂ.ಆರ್ ರಮೇಶ್. ಸದ್ಯ, ಎ.ಎಂ.ಆರ್ ರಮೇಶ್ ಅವರು ರಾಜೀವ್ ಗಾಂಧಿ ಅವರ ಹ್ಯತೆಗೆ ಸಂಬಂಧಿಸಿದ 'ಆಸ್ಪೋಟ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ನಂತರ ಪರಪ್ಪನ ಅಗ್ರಹಾರ ಕುರಿತು ಸಿನಿಮಾ ಮಾಡಲಿದ್ದಾರೆ.

'ಪರಪ್ಪನ ಅಗ್ರಹಾರ' ವಿವಾದದ ಬಗ್ಗೆ ಬರಲಿದೆ 'ರೂಪಾ ಐಪಿಎಸ್' ಸಿನಿಮಾ.!

English summary
Director Amr ramesh Met Dig Roopa and Discuss about the movie. AMR Ramesh Planning to Do Movie on IPS Officer Roopa.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada