twitter
    For Quick Alerts
    ALLOW NOTIFICATIONS  
    For Daily Alerts

    ಸಿಗರೇಟ್, ಕುಡಿತದಿಂದ ದೂರವಿದ್ದರೂ ಕ್ಯಾನ್ಸರ್ ಗೆ ಬಲಿಯಾದರು ಪಿ.ಎನ್.ಸತ್ಯ

    By Naveen
    |

    Recommended Video

    ನಿರ್ದೇಶಕ ಪಿ ಎನ್ ಸತ್ಯ ನಿಧನ | ಡೈರೆಕ್ಟರ್ ಅರಸು ಅಂತಾರೆ ಏನಂತಾರೆ? | Filmibeat Kannada

    ಚಿತ್ರರಂಗದಲ್ಲಿ ಅನೇಕ ನಿರ್ದೇಶಕರು ಚಟಗಳಿಗೆ ಗುಲಾಮರಾಗಿರುತ್ತಾರೆ. ಸಿಗರೇಟ್ ಎಳೆಯದೆ ಇದ್ದರೆ ಎಷ್ಟೋ ನಿರ್ದೇಶಕರಿಗೆ ಬರೆಯಲು ಮೂಡೇ ಬರುವುದಿಲ್ಲ. ಇನ್ನೂ ಎಷ್ಟೋ ನಿರ್ದೇಶಕರು ದಿನಕ್ಕೆ ಒಂದು ಪೆಗ್ ಹಾಕಲೇಬೇಕು ಎಂಬ ನಿಯಮವನ್ನು ತಮಗೆ ತಾವೇ ಮಾಡಿಕೊಂಡಿರುತ್ತಾರೆ. ಆದರೆ ನಿರ್ದೇಶಕ ಪಿ.ಎನ್.ಸತ್ಯ ಮಾತ್ರ ಸಿಗರೇಟ್, ಕುಡಿತದಿಂದ ದೂರ ಇದ್ದರು.

    ಪಿ.ಎನ್.ಸತ್ಯ ಅವರ ಮಾಸ್ ಸಿನಿಮಾಗಳನ್ನು ನೋಡಿದರೆ ಅವರಿಗೆ ಸಹ ಸಿಗರೇಟ್, ಕುಡಿತದ ಅಭ್ಯಾಸ ಇರುತ್ತದೆ ಎನ್ನುವ ಲೆಕ್ಕಾಚಾರ ಅನೇಕರಿಗೆ ಇರುತ್ತದೆ. ಆದರೆ ನಿಜ ಏನೆಂದರೆ ಸತ್ಯ ಒಂದು ದಿನವೂ ಸಿಗರೇಟ್, ಕುಡಿತ ಮಾಡಿದವರಲ್ಲ. ಯಾವುದೇ ಕೆಟ್ಟ ಅಭ್ಯಾಸ ಅವರಿಗೆ ಇರಲಿಲ್ಲ.

    ಅಗಲಿದ ಆಪ್ತ ಸ್ನೇಹಿತ ಪಿ.ಎನ್.ಸತ್ಯ ಬಗ್ಗೆ ನಟ ದರ್ಶನ್ ನುಡಿಅಗಲಿದ ಆಪ್ತ ಸ್ನೇಹಿತ ಪಿ.ಎನ್.ಸತ್ಯ ಬಗ್ಗೆ ನಟ ದರ್ಶನ್ ನುಡಿ

    ಅಂದಹಾಗೆ, ಈ ವಿಷಯವನ್ನು ಸ್ವತಃ ಅವರ ಜೊತೆಗೆ ಕೆಲಸ ಮಾಡಿದ್ದ ನಿರ್ದೇಶಕ ಅರಸು ಅಂತಾರೆ ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪಿ.ಎನ್.ಸತ್ಯ ಅವರ ಗುಣಗಳ ಬಗ್ಗೆ ತಿಳಿಸಿದ್ದಾರೆ. ಮುಂದೆ ಓದಿ...

    ದುಶ್ಚಟಗಳಿಂದ ದೂರವಿದ್ದರು

    ದುಶ್ಚಟಗಳಿಂದ ದೂರವಿದ್ದರು

    ''ಸಿಗರೇಟ್ ಕುಡಿತ ದಂತಹ ದುಶ್ಚಟಗಳಿಂದ ಅಂತರವನ್ನು ಕಾಯ್ದಕೊಂಡಿದ್ದ ಮಾಸ್ ಡೈರೆಕ್ಟರ್ ಸತ್ಯ ಸರ್ ಇನ್ನು ನೆನಪು ಮಾತ್ರ. ಆದರೆ ಅವರ ಸರಳತೆ ಹಾಗೂ ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಸದಾ ಜೀವಂತ. ಮಿಸ್ ಯು ಸರ್ ಆತ್ಮಕ್ಕೆ ಶಾಂತಿ ಸಿಗಲಿ'' - ಅರಸು ಅಂತಾರೆ, ನಿರ್ದೇಶಕ

    ಸತ್ಯ ಸರ್ ಜೊತೆಗೆ ಕೆಲಸ ಮಾಡಿದ್ದೆ

    ಸತ್ಯ ಸರ್ ಜೊತೆಗೆ ಕೆಲಸ ಮಾಡಿದ್ದೆ

    ''ನಾನು ಪೂರ್ಣ ಪ್ರಮಾಣದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಮೊದಲ ಚಿತ್ರ ಸತ್ಯ ಸರ್ ನಿರ್ದೇಶಿಸಿದ 'ಕೆಂಚ'. ಪ್ರಜ್ವಲ್ ಈ ಚಿತ್ರದ ನಾಯಕರಾಗಿದ್ದರು. ಸತ್ಯ ಸರ್ ಸರಳ ಜೀವಿ. ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದ ವ್ಯಕ್ತಿತ್ವ. ಅವರಾಯಿತು ಅವರ ಕೆಲಸವಾಯಿತು.'' - ಅರಸು ಅಂತಾರೆ, ನಿರ್ದೇಶಕ

    ಅಗಲಿದ ಆಪ್ತ ಸ್ನೇಹಿತ ಪಿ.ಎನ್.ಸತ್ಯ ಬಗ್ಗೆ ನಟ ದರ್ಶನ್ ನುಡಿಅಗಲಿದ ಆಪ್ತ ಸ್ನೇಹಿತ ಪಿ.ಎನ್.ಸತ್ಯ ಬಗ್ಗೆ ನಟ ದರ್ಶನ್ ನುಡಿ

    ಮಾಸ್ ಕತೆಗಳ ಕಡೆಗೇ ಹೆಚ್ಚು ಒಲವು

    ಮಾಸ್ ಕತೆಗಳ ಕಡೆಗೇ ಹೆಚ್ಚು ಒಲವು

    ''ಸದಾ ಮಾಸ್ ಕತೆಗಳ ಕಡೆಗೇ ಹೆಚ್ಚು ಒಲವು 'ಮೆಜೆಸ್ಟಿಕ್', 'ದಾಸ', 'ಶಾಸ್ತ್ರಿ', 'ಗೂಳಿ' ಅವರಿಗೆ ಹೆಸರು ತಂದುಕೊಟ್ಟ ಚಿತ್ರಗಳು. ಒಂದು ಕಾಲದಲ್ಲಿ ಕನ್ನಡ ನಿರ್ದೇಶಕರ ಸಾಲಿನಲ್ಸಿ ಮುಂಚೂಣಿಗರಾಗಿದ್ದು ಮಾಸ್ ಡೈರೆಕ್ಟರ್ ಎಂದೇ ನಾಮಾಂಕಿತರಾಗಿದ್ದರು.'' - ಅರಸು ಅಂತಾರೆ, ನಿರ್ದೇಶಕ

    ಸಾವಿನ ಸುದ್ದಿ ಜೀರ್ಣಿಸಿಕೊಳ್ಳಲಾಗುತ್ತಿಲ್ಲ

    ಸಾವಿನ ಸುದ್ದಿ ಜೀರ್ಣಿಸಿಕೊಳ್ಳಲಾಗುತ್ತಿಲ್ಲ

    ''ಇತ್ತೀಚಿನ ಅವರ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರಕ್ಕೆ ನನ್ನ ಕೈಲಿ ಎರಡು ಹಾಡು ಬರೆಸಿ ನನ್ನ ಕೆಲಸವನ್ನು ಕೊಂಡಾಡಿದ್ದರು.ಸ್ವಲ್ಪ ತಿಂಗಳಿನ ಗ್ಯಾಪ್ ನ ಬಳಿಕ ಸಿಕ್ಕಾಗ ಯಾವುದೋ ಆಪರೇಷನ್ ಗೆ ಒಳಗಾಗಿ ತೀರಾ ಸಣ್ಣಗಾಗಿದ್ದರು. ಬಟ್ ಅದೇ ಲವಲವಿಕೆಯಿತ್ತು. ನಿನ್ನೆ ಕೇಳಿದ ಶಾಕಿಂಗ್ ಸುದ್ದಿ ಅವರ ಅಕಾಲಿಕ ಮರಣ. ನಿಜಕ್ಕೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ'' - ಅರಸು ಅಂತಾರೆ, ನಿರ್ದೇಶಕ

    ಪಿ.ಎನ್.ಸತ್ಯ ಅವರಿಗೆ ಟ್ವಿಟ್ಟರ್ ನಲ್ಲಿ ನಮನ ಸಲ್ಲಿಸಿದ ಸುದೀಪ್ ಪಿ.ಎನ್.ಸತ್ಯ ಅವರಿಗೆ ಟ್ವಿಟ್ಟರ್ ನಲ್ಲಿ ನಮನ ಸಲ್ಲಿಸಿದ ಸುದೀಪ್

    ಮದ್ಯಾಹ್ನ ಅಂತ್ಯ ಸಂಸ್ಕಾರ

    ಮದ್ಯಾಹ್ನ ಅಂತ್ಯ ಸಂಸ್ಕಾರ

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿರ್ದೇಶಕ ಪಿ.ಎನ್.ಸತ್ಯ ನಿನ್ನೆ ಸಂಜೆ 7.30 ಸುಮಾರಿಗೆ ನಿಧನರಾದರು. ಸದ್ಯ ಪಿ.ಎನ್.ಸತ್ಯ ಅವರ ಮೃತ ದೇಹವನ್ನು ಅಂತಿಮ ದರ್ಶನಕ್ಕಾಗಿ 11.30ರ ವರೆಗೆ ಇಡಲಾಗಿದೆ. ಆ ಬಳಿಕ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಮದ್ಯಾಹ್ನ 3 ಗಂಟೆಗೆ ಬನಶಂಕರಿಯ ಹಿಂದೂ ರುಧ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.

    English summary
    Kannada Director PN Sathya passes away. director arasu anthare spoke about PN Sahtya behavior.
    Sunday, May 6, 2018, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X