For Quick Alerts
  ALLOW NOTIFICATIONS  
  For Daily Alerts

  'ಕಳೆದು ಹೋದ ಹುಡುಗ'ನನ್ನು ಹುಡುಕಲು ಹೊರಟ ರಘುರಾಮ್

  By Suneetha
  |

  'ಫೇರ್ ಅಂಡ್ ಲವ್ಲಿ' ಚಿತ್ರದ ಖ್ಯಾತಿಯ ನಿರ್ದೇಶಕ ಡಿ.ಪಿ ರಘುರಾಮ್ ಅವರು ಮುಂದಿನ ಹೊಸ ಪ್ರಾಜೆಕ್ಟ್ ಅನ್ನು ತಮ್ಮ ಹುಟ್ಟುಹಬ್ಬದ ದಿನದಂದು ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿಗೆ ತಪ್ಪದ ರಘುರಾಮ್ ಅವರು ಹೊಸ ಚಿತ್ರದ ಹೆಸರನ್ನು ಜಗಜ್ಜಾಹೀರು ಮಾಡಿದ್ದಾರೆ.

  ಜುಲೈ 9 ರಂದು ಹುಟ್ಟುಹಬ್ಬ ಆಚರಿಸಿಕೊಂಡ ನಿರ್ದೇಶಕ ರಘುರಾಮ್ ಅವರು ಅದೇ ದಿನದಂದು ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ. ಅಂದಹಾಗೆ ರಘುರಾಮ್ ಅವರ ಮುಂದಿನ ಚಿತ್ರದ ಹೆಸರು 'ಮಿಸ್ಸಿಂಗ್ ಬಾಯ್'. ನಿಜ ಜೀವನ ಕಥೆಯಾಧರಿತ ಈ ಚಿತ್ರದಲ್ಲಿ ಕಳೆದು ಹೋದ ಹುಡುಗನೊಬ್ಬನ ಕರುಣಾಜನಕ ಕಥೆಯನ್ನು ಬಿಡಿಸಿ ಹೇಳಲಿದ್ದಾರೆ.['ಫೇರ್ ಅಂಡ್ ಲವ್ಲಿ' ಫಿಲ್ಮಿಬೀಟ್ ಚಿತ್ರ ವಿಮರ್ಶೆ]

  'ತಾಯಿ ಮತ್ತು ತಾಯ್ನಾಡಿಗೆ' ಎಂಬ ಅಡಿಬರಹ ಹೊಂದಿರುವ 'ಮಿಸ್ಸಿಂಗ್ ಬಾಯ್' ಚಿತ್ರದ ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಮೂಲಗಳ ಪ್ರಕಾರ 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ನಟ ಗುರುನಂದನ್ ಅವರು ಈ ಚಿತ್ರದಲ್ಲಿ ನಾಯಕನ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಧೀಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.[ಸೆಂಚುರಿ ಸ್ಟಾರ್ ಶಿವರಾಜ್ ನೂತನ 'ಸಿಎಂ']

  ವಿ.ಹರಿಕೃಷ್ಣ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದು, ಜಗದೀಶ್ ವಾಲಿ ಅವರು ಕ್ಯಾಮೆರಾ ಕೈ ಚಳಕ ತೋರಲಿದ್ದಾರೆ. ನಟ ಗುರುನಂದನ್ ಅವರು ಸದ್ಯಕ್ಕೆ ಕೆ.ಎ ಸುರೇಶ್ ಮತ್ತು ನರೇಶ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.[ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?]

  English summary
  Kannada Director DP Raghuram had announced earlier that he would be announcing his next film on his birthday which is on the 09th of July. Likewise, Raghuram has announced the title of his new film and the film is titled as 'Missing Boy'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X