For Quick Alerts
  ALLOW NOTIFICATIONS  
  For Daily Alerts

  'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು!

  By Naveen
  |

  'ಟಗರು' ಸಿನಿಮಾ ಇತ್ತೀಚಿಗಷ್ಟೆ 50 ದಿನಗಳನ್ನು ಪೂರೈಸಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾವಾಗಿ 'ಟಗರು' ಹೊರಹೊಮ್ಮಿದೆ. ಕರ್ನಾಟಕದಲ್ಲಿ ಮಾತ್ರದಲ್ಲದೆ ಹೊರ ದೇಶದಲ್ಲಿಯೂ 'ಟಗರು' ಗುಟುರು ಹಾಕುತ್ತಿದೆ.

  ಒಂದು ಕಡೆ 'ಟಗರು' ಗೆಲುವು ಅಭಿಮಾನಿಗಳಲ್ಲಿಯೂ ಖುಷಿ ತಂದಿದೆ. ಇನ್ನೊಂದು ಕಡೆ 'ಟಗರು' ಸಿನಿಮಾದ ನಂತರ ನಿರ್ದೇಶಕ ಸೂರಿ ಅವರ ಮುಂದಿನ ಸಿನಿಮಾ ಎಂಬ ನಿರೀಕ್ಷೆ ಕೂಡ ಹೆಚ್ಚಾಗಿತ್ತು. ಸೂರಿ 'ದೊಡ್ಮನೆ ಹುಡ್ಗ' ಸಿನಿಮಾದ ಹಿಂದೆಯೇ ಶುರು ಮಾಡಿದ್ದ 'ಕೆಂಡಸಂಪಿಗೆ' ಚಿತ್ರದ ಮೊದಲನೇ ಮತ್ತು ಮೂರನೇ ಭಾಗ ಬಾಕಿ ಇದ್ದು, 'ಟಗರು' ಸಿನಿಮಾದ ನಂತರ ಆ ಸಿನಿಮಾಗಳನ್ನು ಸೂರಿ ಕೈಗೆತ್ತಿಕೊಳ್ಳಬಹುದು ಎಂಬ ಲೆಕ್ಕಾಚಾರ ಇತ್ತು.

  ಆದರೆ ಸದ್ಯ ಸೂರಿ ತಮ್ಮ ಕನಸಿನ ಸಿನಿಮಾ 'ಕೆಂಡಸಂಪಿಗೆ' ಪಾರ್ಟ್ 1 'ಕಾಗೆ ಬಂಗಾರ' ಚಿತ್ರವನ್ನು ಕೈ ಬಿಟ್ಟಿದ್ದಾರೆ. ಮುಂದೆ ಓದಿ...

  ಕಾಗೆ ಬಂಗಾರ ಕೈ ಬಿಟ್ಟ ಸೂರಿ

  ಕಾಗೆ ಬಂಗಾರ ಕೈ ಬಿಟ್ಟ ಸೂರಿ

  ನಿರ್ದೇಶಕ ಸೂರಿ 'ಕೆಂಡಸಂಪಿಗೆ' ಕಥೆಯನ್ನು ಮೂರು ಭಾಗದಲ್ಲಿ ಹೇಳುವ ಪ್ಲಾನ್ ಮಾಡಿದ್ದರು. ಅದೇ ರೀತಿ ಪಾರ್ಟ್ 2 'ಗಿಣಿಮರಿ ಕೇಸ್' ಚಿತ್ರ ಮೊದಲು 2015ರಲ್ಲಿ ಬಂದಿತ್ತು. ಇದರ ನಂತರ ಸೂರಿ ಪಾರ್ಟ್ 1 'ಕಾಗೆ ಬಂಗಾರ' ಶುರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸೂರಿ ಈ ಚಿತ್ರವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

  ಕಾರಣ ಏನು?

  ಕಾರಣ ಏನು?

  ಡಿ ಮಾನಿಟೈಸೇಶನ್ ನಿಂದ 'ಕಾಗೆ ಬಂಗಾರ' ಸಿನಿಮಾವನ್ನು ಮಾಡಲು ಸೂರಿಗೆ ಸಾಧ್ಯ ಆಗುತ್ತಿಲ್ಲವಂತೆ. ಯಾಕಂದ್ರೆ, ''ಗಿಣಿಮರಿ ಕೇಸ್ ಕಥೆಯ ಭಾಗದ ಅಂತ್ಯದಲ್ಲಿ 40 ಕೋಟಿ ರೂಪಾಯಿ ಹಣವನ್ನು ಬಾವಿಗೆ ಸುರಿಯಲಾಗುತ್ತದೆ. ಆದರೆ ಆ ವಿಷಯ ಈಗ ಅಪ್ರಸ್ತುತ ಎನ್ನಿಸುತ್ತದೆ. ನಗದು ಅಪಮೌಲ್ಯ ಆದ ಹಿನ್ನಲೆಯಲ್ಲಿ ಕಾಗೆ ಬಂಗಾರ ಚಿತ್ರವನ್ನು ಮುಂದುವರೆಸಲು ಸಾಧ್ಯ ಆಗುತ್ತಿಲ್ಲ'' ಎಂದು ಸೂರಿ ಹೇಳಿದ್ದಾರೆ.

  ಹಾಗದ್ರೆ, ಸೂರಿ ಮುಂದಿನ ಸಿನಿಮಾ ಯಾವುದು?

  ಹಾಗದ್ರೆ, ಸೂರಿ ಮುಂದಿನ ಸಿನಿಮಾ ಯಾವುದು?

  'ಕಾಗೆ ಬಂಗಾರ' ಸಿನಿಮಾವನ್ನು ಕೈ ಬಿಟ್ಟ ಸೂರಿ ಈಗ ಎರಡು ಹೊಸ ಸಿನಿಮಾವನ್ನು ಶುರು ಮಾಡಲಿದ್ದಾರೆ. ಡಿವೈಎಸ್ ಪಿ ಎಸ್.ಕೆ ಉಮೇಶ್ ಅವರು ಬರೆದಿರುವ ಕಥೆಗೆ ಸೂರಿ ದೃಶ್ಯ ರೂಪ ನೀಡಲು ಹೊರಟಿದ್ದಾರೆ. ಮುಂದಿನ ಎರಡು ತಿಂಗಳಿನಲ್ಲಿ ಸೂರಿ ಅವರ ಈ ಎರಡು ಹೊಸ ಸಿನಿಮಾಗಳು ಶುರು ಆಗಲಿದೆ. 'ದೊಡ್ಮೆನೆ ಹುಡ್ಗ' ನಿರ್ಮಾಪಕ ಗೋವಿಂದ್ ಮತ್ತು ಸೂರಿ ಅವರ ಪರಿಮಳಾ ಫ್ಯಾಕ್ಟರಿ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

  ಮತ್ತೆ ಒಂದಾದ ಡಾಲಿ - ಸೂರಿ

  ಮತ್ತೆ ಒಂದಾದ ಡಾಲಿ - ಸೂರಿ

  'ಟಗರು' ಸಿನಿಮಾದಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದ ಪಾತ್ರ ಅಂದರೆ ಡಾಲಿ ಪಾತ್ರ. ಈ ಪಾತ್ರ ಮಾಡಿದ್ದ ಧನಂಜಯ್ ಅವರಿಗೆ ಈ ಸಿನಿಮಾದ ಮೂಲಕ ದೊಡ್ಡ ಹೆಸರು ಸಿಕ್ಕಿತು. ಆದರೆ ವಿಶೇಷ ಅಂದರೆ ಸೂರಿ ತಮ್ಮ ಮುಂದಿನ ಸಿನಿಮಾದಲ್ಲಿ ಕೂಡ ಧನಂಜಯ್ ಅವರಿಗೆ ಅವಕಾಶ ನೀಡಿದ್ದಾರೆ ಮತ್ತೆ ಈ ಮೂಲಕ ಸೂರಿ - ಡಾಲಿ ಒಂದಾಗಿದ್ದಾರೆ.

  ಬ್ಲಾಕ್ ಮ್ಯಾಜಿಕ್ ನಡೆಯುತ್ತಾ?

  ಬ್ಲಾಕ್ ಮ್ಯಾಜಿಕ್ ನಡೆಯುತ್ತಾ?

  'ಕೆಂಡಸಂಪಿಗೆ' ಸಿನಿಮಾ ಗಿಣಿಮರಿ ಕೇಸ್, ಕಾಗೆಬಂಗಾರ ಮತ್ತು ಬ್ಲಾಕ್ ಮ್ಯಾಜಿಕ್ ಎಂಬ ಮೂರು ಭಾಗದಲ್ಲಿ ಇತ್ತು. ಸದ್ಯ ಕಾಗೆಬಂಗಾರ ಸಿನಿಮಾವನ್ನು ಮಾಡುವುದಿಲ್ಲ ಎಂದು ಹೇಳಿರುವ ಸೂರಿ ಬ್ಲಾಕ್ ಮ್ಯಾಜಿಕ್ ಸಿನಿಮಾವನ್ನು ಮಾಡುತ್ತಾರ..ಇಲ್ವಾ? ಎನ್ನುವುದರ ಬಗ್ಗೆ ಮಾಹಿತಿ ನೀಡಿಲ್ಲ.

  English summary
  After 'Tagaru' kannada director Duniya Suri drops 'Kage Bangara' movie because of demilitarization.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X