For Quick Alerts
  ALLOW NOTIFICATIONS  
  For Daily Alerts

  'ಆ ಜಮೀರ್ ಅಹ್ಮದ್‌ ಓಕೆ, ಯಡಿಯೂರಪ್ಪ ನೀನು ಸಾಕಪ್ಪಾ': ಗುರುಪ್ರಸಾದ್ ವಾಗ್ದಾಳಿ

  |

  -29 ಸಾವಿರ ಜನರನ್ನು ಕೊಂದಿದ್ದೀರಾ., ಪಶ್ಚಾತ್ತಾಪ ಇಲ್ಲವೇ? ಹೆಂಗೆ ಊಟ ಮಾಡ್ತೀರಾ....

  Recommended Video

  ಸಿಎಂ ಸಾಹೇಬ್ರು ರಾಜೀನಾಮೆ ಕೊಡಬೇಕಂತೆ-ಮಠ ಡೈರೆಕ್ಟರ್ ರಿಂದ ಬಿಎಸ್ ವೈಗೆ ಫುಲ್ ಕ್ಲಾಸ್ | Guru prasad | Filmibeat Kannada

  -ಈ ವಯಸ್ಸಿನಲ್ಲಿ ಅಧಿಕಾರ ಮೋಹ ಏಕೆ, ಮೋದಿ ಮುಖ ನೋಡ್ಕೊಂಡು ವೋಟ್ ಹಾಕಿದ್ವಿ ಕಣಯ್ಯ.....

  -ಜನರನ್ನು ಉಳಿಸುವುದು ಬಿಟ್ಟು, ಅಲ್ಲಿ ಹೋಗಿ ತಿಥಿ ಮಾಡ್ತಿದ್ದೀರಾ....

  ಸಿನಿಮಾ ನಿರ್ದೇಶಕ ಗುರುಪ್ರಸಾದ್ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫೇಸ್‌ಬುಕ್‌ ಲೈವ್ ಬಂದಿದ್ದ ಗುರು ಪ್ರಸಾದ್ ಈ 'ಸರ್ಕಾರವೇ ಜನರನ್ನು ಕೊಲ್ಲುತ್ತಿದೆ, ಅಧಿಕಾರದ ಮೋಹದಿಂದ ಕನ್ನಡಿಗರನ್ನು ಸಾಯಿಸಿದ್ದಾರೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

  'ರಂಗನಾಯಕ' ಪ್ರಚಾರಕ್ಕಾಗಿ ಗುರುಪ್ರಸಾದ್ ರೇಗಾಡಿದ್ರಾ? 'ರಂಗನಾಯಕ' ಪ್ರಚಾರಕ್ಕಾಗಿ ಗುರುಪ್ರಸಾದ್ ರೇಗಾಡಿದ್ರಾ?

  'ಮೋದಿ ಮುಖ ನೋಡ್ಕೊಂಡು ವೋಟ್ ಹಾಕಿದ್ವಿ, ಆದರೆ ಈವಯ್ಯಾ ಮಾಡ್ತಿರೋದು ಏನು? ನಮ್ಮ ವೋಟ್ ಕಸಕ್ಕೆ ಬಿದ್ದಂತೆ, ನಮಗೆ ಬೆಲೆ ಇಲ್ವಾ' ಎಂದು ಗುರು ಪ್ರಸಾದ್ ಆಡಳಿತದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗುರುಪ್ರಸಾದ್, ಆರ್ ಅಶೋಕ್ ಕೆಲಸಕ್ಕೆ ಖಂಡಿಸಿದ್ದಾರೆ. ಮುಂದೆ ಓದಿ...

  ನಿನ್ನ ಮಗನ ಸೇವೆ ಮಾಡ್ತಿರುವುದು ನೀನು

  ನಿನ್ನ ಮಗನ ಸೇವೆ ಮಾಡ್ತಿರುವುದು ನೀನು

  ''ಯಡಿಯೂರಪ್ಪ ಹೇಳ್ತಾರೆ, ನಾನು ಜನರ ಸೇವೆ ಮಾಡ್ತಿದ್ದೀನಿ ಅಂತ. ಅವರು ಜನರ ಸೇವೆ ಮಾಡ್ತಿಲ್ಲ, ಅವರ ಮಗನ ಸೇವೆ ಮಾಡ್ತಿರೋದು. ಕೊರೊನಾದಿಂದ 29 ಸಾವಿರ ಕನ್ನಡಿಗರನ್ನು ಸಾಯಿಸಿದ್ದೀರಾ ನಿಮಗೆ ಏನು ಅನಿಸುತ್ತಿಲ್ವ? ವೋಟ್ ಹಾಕಿದವರಿಗೆ ಬೆಲೆ ಇಲ್ವೇ? ನಾವು ಮೋದಿ ಮುಖ ನೋಡ್ಕೊಂಡು ನಿಮಗೆ ವೋಟ್ ಹಾಕಿದ್ವಿ. ಇಷ್ಟು ಜನರನ್ನು ಸಾಯಿಸಿದ್ದೀರಾ, ನಿಮಗೆ ಪಶ್ಚತ್ತಾಪ ಇಲ್ಲವೇ ನಿಮಗೆ?'' ಎಂದು ಗುರುಪ್ರಸಾದ್ ಫೇಸ್‌ಬುಕ್‌ಲೈವ್‌ನಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

  ಆ ಜಮೀರ್ ಅಹ್ಮದ್ ಓಕೆ

  ಆ ಜಮೀರ್ ಅಹ್ಮದ್ ಓಕೆ

  ''75 ವರ್ಷದ ಆದ್ಮೇಲೆ ಬಿಜೆಪಿಯಲ್ಲಿ ಅಧಿಕಾರ ಇಲ್ಲವಂತೆ. ಈ ಯಪ್ಪಾನಿಗೆ ಯಾವ ಕಾರಣಕ್ಕಾಗಿ ಇಟ್ಟುಕೊಂಡಿದ್ದಾರೆ. ಇವರೇ ನಮ್ಮ ಸೇವೆ ಮಾಡ್ಬೇಕು ಅಂತ ಏನೂ ಇಲ್ಲ. ಯಾರೋ ಚಿಕ್ಕವರು ಇದ್ದಾರೆ ಬಿಡಿ. ಒಂದು ಪಕ್ಷ ಆ ಜಮೀರ್ ಅಹ್ಮದ್‌ನ ಒಪ್ಪಿಕೊಳ್ಳುತ್ತೇನೆ, ಆತ ಸ್ವಂತ ದುಡ್ಡಿನ್ನು ಯಾರ್‌ ಯಾರಿಗೂ ಕೊಡ್ತಿದ್ದಾರೆ. ನಿಜಕ್ಕೂ ಅದ್ಭುತ'' ಎಂದು ಬಿಎಸ್‌ವೈ ಆಡಳಿತ ವಿರೋಧಿಸಿದರು.

  'ನನ್ನ ಸಾವಿಗೆ ಸರ್ಕಾರನೇ ಕಾರಣ' ಡೆತ್ ನೋಟ್ ಬರೆದ ಗುರುಪ್ರಸಾದ್: ಯಡಿಯೂರಪ್ಪ, ಸುಧಾಕರ್ ವಿರುದ್ಧ ಕಿಡಿ'ನನ್ನ ಸಾವಿಗೆ ಸರ್ಕಾರನೇ ಕಾರಣ' ಡೆತ್ ನೋಟ್ ಬರೆದ ಗುರುಪ್ರಸಾದ್: ಯಡಿಯೂರಪ್ಪ, ಸುಧಾಕರ್ ವಿರುದ್ಧ ಕಿಡಿ

  ನಾವು ಹೈಕಮಾಂಡ್

  ನಾವು ಹೈಕಮಾಂಡ್

  ''29 ಸಾವಿರ ಜನರನ್ನು ಕೊಲೆ ಮಾಡಿದ್ದೀರಾ, ಮತ್ತೆ ಹೈಕಮಾಂಡ್ ಅಂತೀರಾ, ರೀ ನಾವು ಇಲ್ಲಿ ಹೈಕಮಾಂಡ್, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಒಂದೂವರೆ ವರ್ಷದಿಂದ ಜನರನ್ನು ಕೂಡಿ ಹಾಕಿದ್ದೀರಾ. ನೀವು ಸರ್ಕಾರನಾ? ನಾಚಿಕೆ ಆಗ್ಬೇಕು. ಜನರನ್ನು ಬದುಕಲು ಬಿಟ್ಟು, ಅವರನ್ನು ಕೆಲಸ ಮಾಡೋಕೆ ಬಿಟ್ಟು, ನಾವು ಇದ್ದೇವೆ, ನಿಮಗೆ ಏನೇ ಸಮಸ್ಯೆಯಾದರೂ ನಾವು ನೋಡಿಕೊಳ್ಳುತ್ತೇವೆ ಎನ್ನಬೇಕು ಸರ್ಕಾರ'' ಎಂದು ಗುರುಪ್ರಸಾದ್ ಕಿಡಿಕಾರಿದರು.

  ಪ್ರಧಾನಿ ಆಗಿ ಏನು ಮಾಡ್ದೆ ಎನ್ನುವುದು ಮುಖ್ಯ

  ಪ್ರಧಾನಿ ಆಗಿ ಏನು ಮಾಡ್ದೆ ಎನ್ನುವುದು ಮುಖ್ಯ

  ''ಪ್ರಧಾನಿ ಯಾರು ಬೇಕಾದರೂ ಆಗಬಹುದು. ಆ ಸ್ಥಾನದಲ್ಲಿದ್ದು ಏನು ಮಾಡ್ದೆ ಎನ್ನುವುದು ಮುಖ್ಯ, ನಮ್ಮ ದೇವೇಗೌರು ಆಗಿಲ್ವೇ? ಮೋದಿ ಜಿ ನೀವು ಪ್ರಾಮಾಣಿಕರು ನಾನು ಒಪ್ಪುತ್ತೇನೆ, ಆದರೆ ಅವರಿವರ ಮಾತು ಕೇಳಿ ಏನು ಮಾಡ್ತಿದ್ದೀರಾ'' ಎಂದು ಗುರುಪ್ರಸಾದ್ ಪ್ರಶ್ನಿಸಿದರು.

  ಉಳಿಸುವುದು ಬಿಟ್ಟು ತಿಥಿ ಮಾಡ್ತಾರೆ

  ಉಳಿಸುವುದು ಬಿಟ್ಟು ತಿಥಿ ಮಾಡ್ತಾರೆ

  'ರೀ ಆರ್ ಅಶೋಕ್, ನಿಮಗೆ ಕಾಮನ್ ಸೆನ್ಸ್ ಇಲ್ವಾ?. ಜನರನ್ನು ಉಳಿಸುವುದು ಬಿಟ್ಟು, ಹೋಗಿ ತಿಥಿ ಮಾಡ್ತೀರಾ. ನಿಮ್ಮ ಸಂಸ್ಕಾರ ಹೀನಾ ರಾಜಕಾರಣಿಗಳ ಸಮಯ ಮುಗಿಯುತ್ತಿದೆ. ನಾನೇನು ಭ್ರಷ್ಟಾಚಾರ ಮಾಡಿಲ್ಲ, ನಿಮ್ಮ ಭ್ರಷ್ಟಾಚಾರಗಳ ದಾಖಲೆ ಇದೆ, ನ್ಯಾಯಾಲಯದಲ್ಲಿ ಮಾತಾಡುತ್ತೇನೆ ಬಿಡಿ'' ಎಂದು ರಾಜ್ಯ ಸರ್ಕಾರವನ್ನು ಖಂಡಿಸಿದರು.

  English summary
  Director Guruprasad Lashes Out At CM Yediyurappa for Covid-19 Management in Karnataka.
  Monday, June 7, 2021, 16:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X