For Quick Alerts
  ALLOW NOTIFICATIONS  
  For Daily Alerts

  'ರಂಗನಾಯಕ' ಪ್ರಚಾರಕ್ಕಾಗಿ ಗುರುಪ್ರಸಾದ್ ರೇಗಾಡಿದ್ರಾ?

  |

  'ಮಠ' ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಸರ್ಕಾರದ ವಿರುದ್ಧ ಹಾಗೂ ರಾಜಕಾರಣಿಗಳ ವಿರುದ್ಧ ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡ್ಡು ಮಾಡುವ ಹಠಕ್ಕೆ ಬಿದ್ದಿರುವ ರಾಜಕಾರಣಿಗಳು ಜನರನ್ನು ಸಾಯಿಸುತ್ತಿದ್ದಾರೆ, ನಿಮ್ಮ ಮನೆಯವರು ಚೆನ್ನಾಗಿರಲಿ, ನೀವು ಕೋಟಿ ಕೋಟಿ ಸಂಪಾದಿಸಿ ಎಂದು ಗುಡುಗಿದ್ದಾರೆ.

  Recommended Video

  ಡಿಕೆ ಶಿವಕುಮಾರ್, ಕುಮಾರಸ್ವಾಮಿ ಯಾರೂ ಸಾಚಾ ಅಲ್ಲ!! | Filmibeat Kannada

  ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ, ಡಿಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ, ಡಾ ಸುಧಾಕರ್ ಯಾರೂ ಸಾಚಾಗಳಲ್ಲ. ರಾಜಕೀಯ ಮಾಡಬೇಡಿ, ಆಡಳಿತ ಮಾಡಿ ಎಂದು ಕಿಡಿಕಾರಿದ್ದಾರೆ. ನನಗೂ ಕೊರೊನಾ ವೈರಸ್ ತಗುಲಿದೆ, ಬಹುಶಃ ನಾನು ಸಾಯಬಹುದು, ಇದು ನನ್ನ ಡೆತ್ ನೋಟ್ ಎಂದು ಸರ್ಕಾರದ ವಿರುದ್ಧ ರೇಗಾಡಿದ್ದಾರೆ. ಹೀಗೆ, ಕೊರೊನಾ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಹರಿಹಾಯ್ದಿರುವ ಗುರುಪ್ರಸಾದ್ ಅವರು ಇದೆಲ್ಲ ಪ್ರಚಾರಕ್ಕಾಗಿ ಮಾಡಿದ್ರಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಸ್ವತಃ ಗುರುಪ್ರಸಾದ್ ಅವರೇ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ನನ್ನ ಹಿನ್ನೆಲೆ ಹುಡುಕುತ್ತೀರಾ...

  ನನ್ನ ಹಿನ್ನೆಲೆ ಹುಡುಕುತ್ತೀರಾ...

  ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ಮಾತನಾಡಿರುವ ಗುರುಪ್ರಸಾದ್ ಅವರಿಗೆ ಇದರ ಪರಿಣಾಮ ಏನು, ಯಾವ ರೀತಿ ಟೀಕೆಗಳು ಎದುರಾಗುತ್ತದೆ ಎಂಬ ಮುನ್ಸೂಚನೆ ಇದ್ದು ಇದೆಲ್ಲಾ ಮಾತನಾಡಿದ್ದಾರೆ. ''ನಾನು ಇಷ್ಟೆಲ್ಲಾ ಮಾತಾನಾಡಿದ್ಮೇಲೆ ನನ್ನ ಬಗ್ಗೆ ಹುಡುಕುತ್ತೀರಾ ಅಂತ ನನಗೆ ಗೊತ್ತಿದೆ, ಇವನಿಗೆ ಯಾರ್ ಯಾರ್ ಜೊತೆ ರಿಲೇಶನ್‌ಷಿಪ್ ಇತ್ತು, ಯಾರ್ ಯಾರ ಜೊತೆ ಕನೆಕ್ಷನ್ ಇತ್ತು, ನಾನು ಅಪ್ರಮಾಣಿಕನಾಗಿ ಯಾರಿಗೆ ಮೋಸ ಮಾಡಿದ್ದೇನೆ ಅಂತೆಲ್ಲಾ ಹುಡುಕ್ತೀರಾ, ಹುಡುಕಿ'' ಎಂದಿದ್ದಾರೆ.

  'ನನ್ನ ಸಾವಿಗೆ ಸರ್ಕಾರನೇ ಕಾರಣ' ಡೆತ್ ನೋಟ್ ಬರೆದ ಗುರುಪ್ರಸಾದ್: ಯಡಿಯೂರಪ್ಪ, ಸುಧಾಕರ್ ವಿರುದ್ಧ ಕಿಡಿ'ನನ್ನ ಸಾವಿಗೆ ಸರ್ಕಾರನೇ ಕಾರಣ' ಡೆತ್ ನೋಟ್ ಬರೆದ ಗುರುಪ್ರಸಾದ್: ಯಡಿಯೂರಪ್ಪ, ಸುಧಾಕರ್ ವಿರುದ್ಧ ಕಿಡಿ

  'ರಂಗನಾಯಕ' ಪ್ರಚಾರನಾ?

  'ರಂಗನಾಯಕ' ಪ್ರಚಾರನಾ?

  ಗುರು ಪ್ರಸಾದ್ ರಂಗನಾಯಕ ಎಂಬ ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾ ಶುರುವಾಗಬೇಕಿದೆ. ಈ ಹಿನ್ನೆಲೆ ರಂಗನಾಯಕ ಚಿತ್ರದ ಪ್ರಚಾರಕ್ಕಾಗಿ ಇದೆಲ್ಲಾ ಮಾಡ್ತಿದ್ದಾನೆ ಎಂದು ಹೇಳುವವರು ಇದ್ದಾರೆ. ಇದೇ ವಿಷಯವಾಗಿ ಗುರುಪ್ರಸಾದ್ ಸಹ ಪ್ರತಿಕ್ರಿಯಿಸಿ ''ರೀ, ನಾನು ಇದ್ರೆ ಅಲ್ವೇನ್ರಿ ರಂಗನಾಯಕ. ನಿರ್ಮಾಪಕ ಬಂಡವಾಳ ಹಾಕಿದ್ದಾನೆ, ಆಕ್ಟರ್ ಕಾಯ್ತಿದ್ದಾರೆ, ನಾನು ಬದುಕಿದ್ರೆ ಅಲ್ವೇನ್ರಿ, ಒಬ್ಬರೊಬ್ಬರು ಬದುಕುವುದು ಮುಖ್ಯ ಅಲ್ವಾ?'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಜಗ್ಗೇಶ್ ಜೊತೆ ಗುರು ಪ್ರಸಾದ್ ಸಿನಿಮಾ

  ಜಗ್ಗೇಶ್ ಜೊತೆ ಗುರು ಪ್ರಸಾದ್ ಸಿನಿಮಾ

  'ರಂಗನಾಯಕ' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ನಟಿಸುತ್ತಿದ್ದಾರೆ. ಬಹಳ ದಿನಗಳ ನಂತರ ಜಗ್ಗೇಶ್ ಮತ್ತು ಗುರು ಪ್ರಸಾದ್ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ 'ಇನ್ಸ್‌ಪೆಕ್ಟರ್ ವಿಕ್ರಂ' ನಿರ್ಮಾಪಕ ವಿಖ್ಯಾತ್ ಬಂಡವಾಳ ಹಾಕಿದ್ದಾರೆ. ಪೋಸ್ಟರ್, ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಚಿತ್ರೀಕರಣ ಆರಂಭಿಸಬೇಕಿದೆ.

  'ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ' ಎಂದ ನಟ ಜಗ್ಗೇಶ್!'ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ' ಎಂದ ನಟ ಜಗ್ಗೇಶ್!

  ಗುರುಪ್ರಸಾದ್‌ಗೆ ಕೊರೊನಾ

  ಗುರುಪ್ರಸಾದ್‌ಗೆ ಕೊರೊನಾ

  ''ನಿರ್ದೇಶಕ ಗುರು ಪ್ರಸಾದ್ ಅವರಿಗೆ ಕೊರೊನಾ ವೈರಸ್ ತಗುಲಿದೆ. ಹೀಗೆಂದು ಸ್ವತಃ ಗುರು ಪ್ರಸಾದ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಕೋವಿಡ್‌ನಿಂದ ನಾನು ಸಾಯಬಹುದು. ಹೃದಯಾಘಾತ ಆದರೂ ಆಗಬಹುದು. ಇದು ನನ್ನ ಡೆತ್ ನೋಟ್. ಇದಕ್ಕೆಲ್ಲಾ ನೀವೇ ಕಾರಣ, ನಮ್ಮಂತ ಪ್ರಮಾಣಿಕರ ಶಾಪ ನಿಮಗೆ ಇದೆ'' ಎಂದು ಆಕ್ರೋಶ ಹೊರಹಾಕಿದ್ದಾರೆ.

  English summary
  'Mata' movie Fame Director Guruprasad Really Infected From Covid 19?
  Monday, April 19, 2021, 13:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X