Don't Miss!
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬರ್ತ್ ಡೇ ಸಂಭ್ರಮದಲ್ಲಿ ಜೋಗಿ ಪ್ರೇಮ್: ಅಮ್ಮನಿಗಾಗಿ ಗುಡಿ ಕಟ್ಟಿಸಿ ಸಂಭ್ರಮ
ನಟ ನಿರ್ದೇಶಕ ಜೋಗಿ ಪ್ರೇಮ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟ ಪ್ರೇಮ್, ಈ ಬಾರಿ ಅತ್ಯಂತ ಸರಳವಾಗಿ ಕುಟುಂಬದ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಳೆದ ಒಂದೆರೆಡು ದಿನಗಳ ಹಿಂದೆ ನಾನು ಏಕ್ ಲವ್ ಯಾ ಸಿನಿಮಾದ ಶೂಟಿಂಗ್‌ಗಾಗಿ ಬಾಂಬೆಗೆ ತೆರಳುತ್ತಿದ್ದೇನೆ. ದೀಪಾವಳಿ ಹಬ್ಬಕ್ಕೆ ಚಿತ್ರದ ಮೂರನೇ ಹಾಡು ರಿಲೀಸ್ ಆಗುತ್ತಿರುವುದರಿಂದ, ಹಾಡಿನ ಚಿತ್ರೀಕರಣದ ಕೆಲಸಗಳು ಬಾಕಿ ಉಳಿದುಕೊಂಡಿದೆ. ಹೀಗಾಗಿ ಯಾರು ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಪತ್ನಿ ರಕ್ಷಿತಾ ಪ್ರೇಮ್ ಪತಿಯ ಹುಟ್ಟುಹಬ್ಬವನ್ನು ಸ್ಪೆಷಲ್ ಕೇಕ್ ಕಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ.
ಇನ್ನು ಪ್ರೇಮ್ ಅವರ ಹುಟ್ಟುಹಬ್ಬಕ್ಕೆ ಏಕ್ ಲವ್ ಯಾ ಚಿತ್ರತಂಡ ಒಟ್ಟುಗೂಡಿ ಬರ್ತ್‌ಡೇ ಸಂಭ್ರಮದಲ್ಲಿ ಭಾಗಿ ಆಗಿದ್ದು, ರಾತ್ರಿ 12 ಗಂಟೆಗೆ ಸರಿಯಾಗಿ ಕೇಕ್ ಕತ್ತರಿಸಿದ್ದಾರೆ. ಈ ವಿಶೇಷ ಸಂದರ್ಭವನ್ನು ಪತ್ನಿ ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ನಿಮ್ಮ ಆಶೀರ್ವಾದ ಸದಾ ಪ್ರೇಮ್ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ ಈ ಬರ್ತ್‌ಡೇ ಸಂಭ್ರಮದಲ್ಲಿ ಜೋಗಿ ಪ್ರೇಮ್ ತನ್ನ ಅಮ್ಮನಿಗಾಗಿ ಗುಡಿಯೊಂದನ್ನ ಕಟ್ಟಿಸಿದ್ದಾರೆ.
ಹೌದು ತನ್ನ ತಾಯಿ ಭಾಗ್ಯಮ್ಮರನ್ನು ಅತೀಯಾಗಿ ಇಷ್ಟ ಪಡುತ್ತಿದ್ದ ಪ್ರೇಮ್ , ಕಳೆದ ವರ್ಷವಷ್ಟೆ ಅವರನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ತನ್ನ ಹುಟ್ಟೂರು ಮದ್ದೂರಿನ ಬೆಸಗರ ಹಳ್ಳಿಯಲ್ಲಿ ಇರುವ ತೋಟದಲ್ಲಿ ತನ್ನ ಅಮ್ಮನಿಗಾಗಿ ಒಂದು ಗುಡಿಯನ್ನೇ ಪ್ರೇಮ್ ಕಟ್ಟಿಸಿದ್ದಾರೆ. ಇಂದು ಹುಟ್ಟುಹಬ್ಬದ ನಿಮಿತ್ತ ಅಮ್ಮನ ಈ ಗುಡಿಯನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ ಇದೇ ಸಂದರ್ಭದಲ್ಲಿ ಪ್ರೇಮ್ ಕೂಡ ಭಾಗಿಯಾಗಿದ್ರು. ಈ ತೋಟಕ್ಕೆ ಅಮ್ಮನ ತೋಟ ಎಂದೆ ಹೆಸರಿಡಲಾಗಿದ್ದು, ಇಲ್ಲಿ ಸಾಕಷ್ಟು ತರಕಾರಿ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಹಾಗೆಯೇ ಗುಜರಾತಿನ ಕೆಲ ಹಸುಗಳು ಮತ್ತು ಎಮ್ಮೆಗಳನ್ನು ಇಲ್ಲಿ ಸಾಕಲಾಗುತ್ತಿದ್ದು, ಅಮ್ಮನ ತೋಟ ಹೇಗಿದೆ ಎಂಬುದನ್ನ ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ.
ಇನ್ನು ಈ ಸ್ಪೆಷಲ್ ವಿಡಿಯೋ ಕೂಡ ಪ್ರೇಮ್ ಬರ್ತ್‌ಡೇ ವಿಶೇಷವಾಗಿ ಇಂದು ರಿಲೀಸ್ ಆಗಿದೆ. ಎಕ್ಸ್‌ಕ್ಯೂಸ್‌ಮಿ ಚಿತ್ರದಲ್ಲಿ ಪ್ರೇಮ್ ಹಾಡಿದ್ದ ಹಾಡನ್ನ ಕೊಂಚ ಮಾಡ್ಯೂಲೇಟ್ ಮಾಡಿ ಯುವ ಬರಹಗಾರ ಮತ್ತು ಯುವ ನಿರ್ದೇಶಕ ವಿಜಯ್ ಈಶ್ವರ್ ಅವರು ಈ ಹಾಡನ್ನು ಹಾಡಿದ್ದಾರೆ. ಈ ಹಾಡು ಈಗ ಸಾಕಷ್ಟು ವೈರಲ್ ಆಗುತ್ತಿದ್ದು, ಎಕ್ಸ್‌ಕ್ಯೂಸ್‌ಮಿ ಹಾಡಿನ ಈ ಹೊಸ ವರ್ಷನ್ ಜನರಿಗೆ ತುಂಬ ಹಿಡಿಸಿದೆ. ಹೀಗೆ ಬರ್ತ್‌ಡೇ ಯನ್ನು ಸರಳವಾಗಿ ಪ್ರೇಮ್ ಆಚರಿಸಿಕೊಂಡರು, ತನ್ನ ಅಮ್ಮ ಭಾಗ್ಯಮ್ಮಗಾಗಿ ದೊಡ್ಡ ಉಡುಗೊರೆಯನ್ನೆ ನೀಡಿದ್ದಾರೆ.
ಇನ್ನು ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಮೂರನೇ ಹಾಡು ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದ್ದು ಅದರ ತಯಾರಿಯಲ್ಲಿದ್ದಾರೆ ಪ್ರೇಮ್. ಈ ಸಿನಿಮಾ ಜನವರಿ 21ಕ್ಕೆ ರಿಲೀಸ್ ಆಗುತ್ತಿದ್ದು, ಇನ್ನೆರೆಡು ದಿನದಲ್ಲಿ ಸೆನ್ಸಾರ್ ಅಂಗಳಕ್ಕೆ ತೆರಳಲಿದೆ. ಎನೀ ವೇ ಫಿಲ್ಮಿಬೀಟ್ ಕನ್ನಡ ತಂಡದಿಂದಲೂ ನಟ ನಿರ್ದೇಶಕ ಪ್ರೇಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.