»   » 'ಆಪ್ತಮಿತ್ರ-2' ಹೆಸರಿನಲ್ಲೇ ಎರಡು ಸಿನಿಮಾ ಬರ್ತಿದೆ.!

'ಆಪ್ತಮಿತ್ರ-2' ಹೆಸರಿನಲ್ಲೇ ಎರಡು ಸಿನಿಮಾ ಬರ್ತಿದೆ.!

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಆಪ್ತಮಿತ್ರ'. 'ಆಪ್ತಮಿತ್ರ' ನಂತರ ಈ ಚಿತ್ರದ ಮುಂದುವರೆದ ಭಾಗ 'ಆಪ್ತರಕ್ಷಕ' ಕೂಡ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಅಲ್ಲಿಗೆ ನಾಗವಲ್ಲಿ ಕಥೆಗೆ ಅಂತ್ಯ ಸಿಕ್ಕಿತ್ತು.

ಆದ್ರೀಗ, 'ಆಪ್ತಮಿತ್ರ 2' ಎಂದು ಮತ್ತೆ ಸಿನಿಮಾ ಬರ್ತಿದೆ. ಇದೇನಪ್ಪಾ 'ಆಪ್ತಮಿತ್ರ'ದ ಮುಂದುವರೆದ ಭಾಗನೇ ಆಪ್ತರಕ್ಷಕ ಅಲ್ವಾ ಎಂದು ಯೋಚಿಸಬೇಡಿ. ಈಗ ಅದೇ ಟೈಟಲ್ ನಲ್ಲಿ ಅದೇ ನಿರ್ದೇಶಕರು ವಾಪಸ್ ಬಂದಿದ್ದಾರೆ.

ಇನ್ನೊಂದು ವಿಷ್ಯ ಏನಪ್ಪಾ ಅಂದ್ರೆ, 'ಆಪ್ತಮಿತ್ರ 2' ಎಂಬ ಹೆಸರಿನಲ್ಲಿ ಮತ್ತೊಂದು ಚಿತ್ರತಂಡ ಕೂಡ ಸಿನಿಮಾ ಮಾಡ್ತಿದೆ. ಅವರು ಕೂಡ ನಾಗವಲ್ಲಿ ಹಿಂದೆ ಬಿದ್ದಿದ್ದಾರೆ. ಏನಿದು 'ಆಪ್ತಮಿತ್ರ 2' ಕಹಾನಿ ಎಂದು ಮುಂದೆ ಓದಿ.....

ಪಿ.ವಾಸು ನಿರ್ದೇಶನದಲ್ಲಿ 'ಆಪ್ತಮಿತ್ರ-2'

'ಆಪ್ತಮಿತ್ರ', 'ಆಪ್ತರಕ್ಷಕ' ಸಿನಿಮಾ ನಿರ್ದೇಶನ ಮಾಡಿದ್ದ ಪಿ ವಾಸು ಈಗ ಆಪ್ತಮಿತ್ರ 2 ಸಿನಿಮಾ ಮಾಡ್ತಿದ್ದಾರೆ.

ಇದು 'ನಾಗವಲ್ಲಿ' ಕಥೆ ಅಲ್ಲ

'ಆಪ್ತಮಿತ್ರ' ಎಂದಾಕ್ಷಣ ನಾಗವಲ್ಲಿ ಪಾತ್ರ ಕಣ್ಣ ಮುಂದೆ ಬರುತ್ತೆ. ಹೀಗಾಗಿ, ನೀವು ಅಂದುಕೊಂಡಂತೆ ಪಿ ವಾಸು ನಿರ್ದೇಶನ ಮಾಡಲಿರುವ 'ಆಪ್ತಮಿತ್ರ-2' ಸಿನಿಮಾ ನಾಗವಲ್ಲಿ ಕಥೆಯ ಆಧರಿತವಲ್ಲ.

'ಆಪ್ತಮಿತ್ರ 2' ಅಥವಾ 'ಆಪ್ತಮಿತ್ರರು'

ಇನ್ನು ಮತ್ತೊಂದೆಡೆ ಹೊಸ ನಿರ್ದೇಶಕ ಶಂಕರ್ ಅರುಣ್ ಸಾರಥ್ಯದಲ್ಲಿ 'ಆಪ್ತಮಿತ್ರ-2' ಎಂದು ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಈ ಚಿತ್ರದ ಟೈಟಲ್ ಟೀಸರ್ ಮತ್ತು ಟ್ರೈಲರ್ ಕೂಡ ಬಿಡುಗಡೆಯಾಗಿದೆ.

ಟೈಟಲ್ ವಿವಾದ

ಪಿ ವಾಸು ನಿರ್ದೇಶನ ಮಾಡಲಿರುವ ಸಿನಿಮಾಗೆ ಆಪ್ತಮಿತ್ರ ಎಂದು ಹೆಸರಿಟ್ಟಿದ್ದರೇ, ಶಂಕರ್ ಅರುಣ್ ಸಾರಥ್ಯದ ಚಿತ್ರಕ್ಕೂ ಆಪ್ತಮಿತ್ರ 2 ಎಂದು ನಾಮಕರಣ ಮಾಡಲಾಗಿದೆ. ವಿಶೇಷ ಅಂದ್ರೆ, ಶಂಕರ್ ಅರುಣ್ ಅವರ ಆಪ್ತಮಿತ್ರ ಟೈಟಲ್ ನಲ್ಲಿ ಗೊಂದಲ ಇದೆ. ನಾಗವಲ್ಲಿ ವರ್ಸಸ್ ಆಪ್ತಮಿತ್ರ 2 ಎಂದು ಪೋಸ್ಟರ್ ನಲ್ಲಿ ಡಿಸೈನ್ ಮಾಡಿಸಲಾಗಿದೆ. ಮತ್ತೊಂದು ದೃಷ್ಟಿಯಲ್ಲಿ ಆಪ್ತಮಿತ್ರರು ಎಂದು ಕಾಣಿಸುತ್ತಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಪಿ ವಾಸು ಸಿನಿಮಾ ರೀಮೇಕ್.!

ಪಿ ವಾಸು ನಿರ್ದೇಶನ ಮಾಡಲಿರುವ 'ಆಪ್ತಮಿತ್ರ-2' ಸಿನಿಮಾ, ತಮಿಳಿನ 'ಅರನ್ ಮನೈ 2' ಚಿತ್ರದ ರೀಮೇಕ್. ಸುಂದರ್ ಸಿ ನಿರ್ದೇಶನದ ಈ ಚಿತ್ರ ಹಾರರ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದು, ತ್ರಿಷಾ, ಸಿದ್ಧಾರ್ಥ್, ಹನ್ಸಿಕಾ ಮೊಟ್ವನಿ ಸೇರಿದಂತೆ ಹಲವರು ಅಭಿನಯಿಸಿದ್ದರು.

ಹೊಸಬರ ಆಪ್ತಮಿತ್ರದಲ್ಲಿ 'ನಾಗವಲ್ಲಿ' ಕಥೆ.!

ಇನ್ನು ಅರುಣ್ ಶಂಕರ್ ನಿರ್ದೇಶನ ಮಾಡಲಿರುವ ಆಪ್ತಮಿತ್ರ 2 ಸಿನಿಮಾ, ನಾಗವಲ್ಲಿಯನ್ನೇ ಪ್ರಮುಖ ಕಥಾವಸ್ತುವನ್ನಾಗಿಸಿ ಮಾಡುತ್ತಿರುವ ಸಿನಿಮಾ.

English summary
Director P Vasu is all set to make Apthamitra-2 in kannada. the film Produced by Ramesh Yadav.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X