»   » ನಿಕೋಟಿನ್ ಗುಂಗಿನಲ್ಲಿ ನಿದ್ದೆಗೆಟ್ಟ ಪವನ್ ಕುಮಾರ್

ನಿಕೋಟಿನ್ ಗುಂಗಿನಲ್ಲಿ ನಿದ್ದೆಗೆಟ್ಟ ಪವನ್ ಕುಮಾರ್

Posted By:
Subscribe to Filmibeat Kannada

''ಅದು ಮದುವೆ ಮನೆ. ಅಲ್ಲಿ 300ಕ್ಕೂ ಹೆಚ್ಚು ಮಂದಿ ಶಾಟ್ ಗಾಗಿ ಕೂತಿದ್ದಾರೆ. ಕಳೆದ 10 ವರ್ಷಗಳಿಂದ ನನ್ನ ತಿದ್ದಿ ತೀಡಿದ್ದ ಗುರುಗಳು ನಾನೇನು ಮಾಡುತ್ತಿರುವೆ ಅಂತ ಹಿಂಬದಿಯಲ್ಲಿ ಕುಳಿತು ನೋಡುತ್ತಿದ್ದಾರೆ. ನನ್ನ ಸುತ್ತ ಮುತ್ತ 'ಲೂಸಿಯಾ' ಚಿತ್ರತಂಡ.''

''ಛಾಯಾಗ್ರಾಹಕ ಸಿದ್ದಾರ್ಥ ನೂನಿಗೆ ವಿಪರೀತ ಸಿಟ್ಟು. ಸಹಾಯಕ ನಿರ್ದೇಶಕ ರಜತ್ ಮಾಯೀ ಜೊತೆ ಶಾಟ್ ಗಳನ್ನ ಲಿಸ್ಟ್ ಮಾಡಿಕೊಳ್ಳುತ್ತಿದ್ದೇನೆ. ಅವರಿಗೆ ತಾಳ್ಮೆ ಇಲ್ಲ. ಪೇಪರ್ ಕೇಳಿದಕ್ಕೆ 'ನೀವೇ ಹೋಗಿ ತೆಗೆದುಕೊಳ್ಳಿ ಅಂತಾರೆ.''

''ಕೊನೆಗೆ ನಡುಗುತ್ತಲೇ ಒಂದು ಮೂಲೆಯಲ್ಲಿ ಕುಳಿತುಕೊಂಡು ಶಾಟ್ ಗಳನ್ನ ಲಿಸ್ಟ್ ಮಾಡಿಕೊಂಡೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ. ಲೈಟ್ಸ್ ಆನ್ ಆಯ್ತು. ಜನರೇಟರ್ ರನ್ ಆಯ್ತು. ಪ್ರತಿ ಸೆಕೆಂಡ್ ನಲ್ಲೂ ನೋವು ಬಿಡದೆ ಕಾಡುತ್ತಿದೆ. ನಂತರ ಎಚ್ಚರ ಆಯ್ತು. ಥ್ಯಾಂಕ್ ಗಾಡ್ ಅದು ಕನಸು. ಅಲ್ಲಾ ಅಲ್ಲಾ ಕೆಟ್ಟ ಕನಸು.!''

Director Pawan Kumar's Nightmare

- ಹೀಗಂತ ನಿನ್ನೆ ರಾತ್ರಿ ಕಂಡ ಕನಸನ್ನ ವಿವರಿಸಿರುವುದು ನಿರ್ದೇಶಕ ಪವನ್ ಕುಮಾರ್. ''ನೀ ಮಾಯೆಯೊಳಗೋ...ಮಾಯೆ ನಿನ್ನೊಳಗೋ...ನೀ ಕನಸೊಳಗೋ...ಕನಸು ನಿನ್ನೊಳಗೋ...'' ಅಂತ ಕನ್ನಡ ಪ್ರೇಕ್ಷಕರಿಗೆ 'ಲೂಸಿಯಾ' ಟ್ಯಾಬ್ಲೆಟ್ ನುಂಗಿಸಿದ ಪವನ್ ಕುಮಾರ್, ಈಗ ಕನಸಲ್ಲೂ ಬೆವರುವ ಸ್ಥಿತಿ ತಲುಪಿದ್ದಾರೆ. ['ಲೂಸಿಯಾ' ಪವನ್ ಕಂಡಂತೆ ಭಟ್ಟರ 'ವಾಸ್ತುಪ್ರಕಾರ']

'ಲೂಸಿಯಾ' ಚಿತ್ರದ ನಂತ್ರ ಪವನ್ ಕುಮಾರ್ 'C10H14N2' ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಟೈಟಲ್ ಕೇಳ್ತಿದ್ದ ಹಾಗೆ ಜನಸಾಮಾನ್ಯರು ತಲೆ ಕೆರೆದುಕೊಳ್ಳಬಹುದು. ಅಸಲಿಗೆ ಇದು 'ನಿಕೋಟಿನ್'ನ ಮಾಲಿಕ್ಯುಲರ್ ಫಾರ್ಮುಲಾ. ['ಲೂಸಿಯಾ' ಪವನ್ ಹೊಸ ಚಿತ್ರ 'C10H14N2']

ಹಾಗೆ, ಎಲ್ಲರ ತಲೆಗೆ ಹುಳ ಬಿಡುವಂತಹ ಹೊಸ ಫಾರ್ಮುಲಾ ಕಂಡು ಹಿಡಿಯುವುದಕ್ಕೆ ಹಗಲು ರಾತ್ರಿ ಖುದ್ದು ಕಥೆ-ಚಿತ್ರಕಥೆ ರಚಿಸುತ್ತಿರುವ ಪರಿಣಾಮ ಈ ಕನಸು. ಕನಸಲ್ಲಿ ಬೆಚ್ಚಿ ಬೀಳುವ ಮಟ್ಟಕ್ಕೆ ಚಿತ್ರದ ಬಗ್ಗೆ ತಲೆ ಕೆಡಿಸಿಕೊಂಡಿರುವ ಪವನ್ ಕುಮಾರ್ ಖಂಡತ ಉತ್ತಮ ಸಿನಿಮಾ ಮಾಡುತ್ತಾರೆ ಅನ್ನುವ ನಂಬಿಕೆ ಅವರ ಅಭಿಮಾನಿಗಳದ್ದು. (ಫಿಲ್ಮಿಬೀಟ್ ಕನ್ನಡ)

English summary
Director Pawan Kumar of 'Lucia' fame is working on his directorial next 'C10H14N2' and it looks like the filming is giving him nightmares.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada